Friday, September 13, 2024

ಕಿತ್ತೂರು ಉತ್ಸವಕ್ಕೆ ಸಿಎಂ ಅದ್ದೂರಿ ಚಾಲನೆ; ಕಿತ್ತೂರು ಕರ್ನಾಟಕ ಘೋಷಣೆ ಶೀಘ್ರ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು : ಐತಿಹಾಸಿಕ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸುವ ಹಿನ್ನೆಲೆಯಲ್ಲಿ ನಮ್ಮ ಸರಕಾರ ಕ್ರಮವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಜಿಲ್ಲಾಡಳಿತ ಬೆಳಗಾವಿ, ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಂಸ್ಕ್ರತಿ ಇಲಾಖೆ ಸಹಯೋಗದಲ್ಲಿ ಕಿತ್ತೂರು ಕೋಟೆ ಸಭಾಭವನದಲ್ಲಿ ನಡೆದ ಕಿತ್ತೂರು ವಿಜಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಿತ್ತೂರು ರಾಣಿ ಚನ್ನಮ್ಮನ ಆತ್ಮಜ್ಯೋತಿಯು ಮೊದಲು ರಾಜ್ಯದಾದ್ಯಂತ ಸಂಚರಿಸುತ್ತಿತ್ತು. ಈಗ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ ಇನ್ನೂ ಮುಂದೆ ಉತ್ಸವಕ್ಕೆ ಜ್ಯೋತಿ ರಾಜ್ಯದಾದ್ಯಂತ ಸಂಚರಿಸಿ ಬೆಂಗಳೂರು ತಲುಪಿ ನಂತರ ಕಿತ್ತೂರಿಗೆ ಬಂದು ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆದೇಶ ಮಾಡಲಾಗುವುದು ಎಂದರು

ಕಿತ್ತೂರು ಚೆನ್ನಮ್ಮ ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ನಾಲ್ಕು ದಶಕಗಳ ಮೊದಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಕತ್ತಿಯನ್ನು ಕೈಯಲ್ಲಿ ಹಿಡಿದಿದ್ದಳು. ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ಉಲ್ಲೇಖಿಸಲಾಗಿದೆ ಎಂದು ಬೇಸರವಾಗಿದೆ. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರೂ 200 ಕೋಟಿ ಅನುದಾನ ನೀಡಬೇಕು ಎಂಬ ಆದೇಶದನ್ವಯ ಈಗ ರೂಂ 50 ಕೋಟಿ ಕ್ರೀಯಾ ಯೋಜನೆ ಮಾಡಲಾಗಿದ್ದು ಮುಂದಿನ ಬಜೆಟ್ನಲ್ಲಿ ಬಾಕಿ ರೂ 150 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಹೇಗೆ ಕಿತ್ತೂರು ಚೆನ್ನಮ್ಮ ಕಪ್ಪು ಕೊಡುವುದಿಲ್ಲ ಎಂದು ಬ್ರಿಟಿಷರ ವಿರುದ್ಧ ಕ್ರಾಂತಿ ಮಾಡಿದಳೊ ಹಾಗೆ ಪ್ರಸ್ತುತ ಕಾಲಘಟ್ಟದಲ್ಲಿ ಸತ್ಯ, ಧರ್ಮ, ನ್ಯಾಯದ ಪರ ಹೋರಾಡಿ ದೇಶದ ಪ್ರಗತಿಗಾಗಿ ಹೋರಾಡುವ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡುವುದರ ಜೊತೆಗೆ ದೇಶವನ್ನು ಆಂತರಿಕ ಮತ್ತು ಬಾಹ್ಯಶಕ್ತಿಗಳಿಂದ ರಕ್ಷಿಸಿ ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದರು.

ಸುದ್ದಿ ಸದ್ದು ನ್ಯೂಸ್‌‌ನಲ್ಲಿ ಕಿತ್ತೂರು ಉತ್ಸವದ ಸುದ್ದಿಗಳು ಮುಂದುವರೆಯುತ್ತವೆ..

‌‌‌‌‌‌‌‌‌‌‌‌‌‌‌‌‌‌‌‌‌‌‌‌‌

 

 

ಜಿಲ್ಲೆ

ರಾಜ್ಯ

error: Content is protected !!