Sunday, September 8, 2024

25 ವರ್ಷದ ಸತಿ, 45 ರ ಹರೆಯದ ಪತಿ; ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗೇಲಿ ಮಾಡೋ ಮುನ್ನ ಈ ಸ್ಟೋರಿ ಓದಿ

ತುಮಕೂರು: ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲವೂ ಅಂಗೈನಲ್ಲೇ ಇಡಿ ಪ್ರಪಂಚವನ್ನು ತೋರಿಸುತ್ತಿವೆ ಸ್ಮಾರ್ಟ್ ಫೋನಗಳು. ಇಂದು ‘ಸೋಶಿಯಲ್ ಮೀಡಿಯಾಗಳದ್ದೇ ಕಾರುಬಾರು. ಓರ್ವ ಸಾಮಾನ್ಯ ವ್ಯಕ್ತಿ ರಾತ್ರಿ ಅಗುವಷ್ಟರಲ್ಲಿ ಸ್ಟಾರ್ ಪಟ್ಟ ತಂದುಕೊಡುವ ಸೋಶಿಲ್ ಮೀಡಿಯಾಗಳು, ಕೆಲವೊಮ್ಮೆ ಹಿಂದೆ-ಮುಂದೆ ನೋಡದೇ ಹಲವರ ಬದುಕಿಗೆ ಕಂಟಕವಾಗಿ ಜೀವನವನ್ನೇ ನಾಶ ಮಾಡಿ ಬಿಡುತ್ತವೆ..!

ಈ ವಿಚಾರದಲ್ಲಿ ಟ್ರೋಲ್​​ ಪೇಜ್​​ಗಳ ಪಾತ್ರ ಪ್ರಧಾನ ಪಾತ್ರ ವಹಿಸುತ್ತವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ನಾಲ್ಕು ದಿನಗಳಿಂದ ಫೇಸ್​ಬುಕ್, ಟ್ವಿಟರ್​, ಇನ್​​ಸ್ಟಾಗ್ರಾಮ್​, ವಾಟ್ಸಪ್‌ನಲ್ಲಿ ಫೋಟೋ ಒಂದು ವೈರಲ್ ಆಗುತ್ತಿದೆ. “25 ವರ್ಷದ ಮಹಿಳೆಗೆ 45 ರ ಹರೆಯದ ವ್ಯಕ್ತಿ ಜೊತೆ ಮದುವೆ” ಎಂದು ಗೇಲಿ ಮಾಡಲಾಗುತ್ತಿವೆ. ಭಾರೀ ವಯಸ್ಸಿನ ಅಂತರದಲ್ಲಿ ಇವರಿಬ್ಬರೂ ಮದುವೆ ಆಗಿದ್ದೇನೋ ನಿಜ. ಆದರೆ ಅವರಿಬ್ಬರ ಮದುವೆ ಹಿಂದೆ ‘ಮನ ಮಿಡಿಯುವ ಕಥೆ’ಯೊಂದು ಅಡಗಿದೆ. ಹೌದು.. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಇತ್ತೀಚೆಗೆ 45 ವರ್ಷದ ಶಂಕರ್ ಹಾಗೂ 25 ವರ್ಷದ ಮೇಘನಾ ಇವರ ಮದುವೆ ನಡೆದಿತ್ತು. ಇವರಿಬ್ಬರ ಮದುವೆಗೆ ಮನೆಯವರ ವಿರೋಧವು ಸಹ ಇರಲಿಲ್ಲ. ಬದಲಾಗಿ ಎರಡೂ ಕುಟುಂಬದಿಂದ ಪರಸ್ಪರ ಒಪ್ಪಿಗೆ ತೆಗೆದುಕೊಂಡು ಪ್ರೀತಿಯಿಂದ, ಸಡಗರ, ಸಂಭ್ರಮದಿಂದ ಮದುವೆ ಮಾಡಿಕೊಂಡಿದ್ದಾರೆ.

ದೇವಸ್ಥಾನದಲ್ಲಿ ಪರಸ್ಪರ ಹಾರಿ ಬದಲಾಯಿಸಿಕೊಂಡ ಶಂಕರ್ ಮತ್ತು ಮೇಘನಾ

ಆದರೆ ಏನನ್ನೂ ಅರಿಯದೆ ಸೋಶಿಯಲ್ ಮೀಡಿಯಾಗಳ ಟ್ರೋಲಿಗರು ಮದುಮಕ್ಕಳ ವಯಸ್ಸಿನ ಅಂತರ ಇಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಈ ಮದುವೆ ಹಿಂದಿನ ಅಸಲಿ ಕಥೆಯೇ ಬೇರೆ. 45 ವರ್ಷದ ಶಂಕರ್​ ಮದುವೆ ಆಗಬೇಕು ಎಂದು ತುಂಬಾ ವರ್ಷಗಳ ಕನಸು ಆದರೆ ಆತನಿಗೆ ಇನ್ನೂ ವರೆಗೂ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ.

ಇನ್ನು, 25 ವರ್ಷದ ಮೇಘನಾರ ಬದುಕಿನಲ್ಲಿ ವಿಧಿ ಚೆಲ್ಲಾಟ ಆಡಿಬಿಟ್ಟಿತ್ತು. ಮದುವೆ ದಿನ ಹಿರಿಯರು ನೂರು ವರ್ಷಗಳ ಕಾಲ ಸುಖವಾಗಿ ಸತಿ-ಪತಿಯಾಗಿ ಬದುಕಬೇಕು ಅನ್ನೋ ಆಸೆಯಿಂದ ಸಪ್ತಪದಿ ತುಳಿಸಿ ಮದುವೆ ಮಾಡಿದ್ದರು. ಆದರೆ ಮೇಘನಾಳ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಕೊನೆಗೂ ಸುಸ್ತಾಗಿದ್ದ ಶಂಕರ್​ ಕಣ್ಣಿಗೆ ಬಿದ್ದಿದ್ದೇ ಈ ಮೇಘನಾ. ಕೊನೆಗೂ ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಮದುವೆ ಆಗಲು ನಿರ್ಧರಿಸುತ್ತಾರೆ. ಅದರಂತೆ ಸ್ಥಳೀಯ ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಘನಾಳ ಬಾಳಿಗೆ ಬೆಳಕಾಗಿದ್ದಾನೆ…

ಜಿಲ್ಲೆ

ರಾಜ್ಯ

error: Content is protected !!