Saturday, July 27, 2024

ಇತ್ತಿಚೆಗೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಪಿಎಸ್ಐ ಇಂದು ಸಸ್ಪೆಂಡ್: ಕಾರಣವೇನು ಗೊತ್ತೇ ?

ಬ್ಲ್ಯಾಕ್ ಹಣವನ್ನು ವೈಟ್ ಹಣವನ್ನಾಗಿ ಪರಿವರ್ತಿಸುವ ದಂಧೆಯನ್ನು ನಡೆಸುತ್ತಿದ್ದ ಆರೋಪಿಗಳ ಕಡೆಯವರಿಂದ ರೂ 5 ಲಕ್ಷ ರೂಪಾಯಿ ಹಣ ಪಡೆದ ಆರೋಪ ಮೇಲ್ನೋಟಕ್ಕೆ ಸಾಬೀತಾದಗಿದ್ದ ಕಾರಣ ಬೆಂಗಳೂರಿನ ಪಿಎಸ್​ಐ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು: ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸುವ ದಂಧೆಯಲ್ಲಿ ತೊಡಗಿದ್ದ ಆರೋಪಿಗಳಿಗೆ ನೆರವು ನೀಡಿ ಹಣ ಪಡೆದ ಆರೋಪದಡಿ ಗೋವಿಂದಪುರ ಪೊಲೀಸ್ ಠಾಣೆಯ ಸಬ್ ಇನ್​ಸ್ಪೆಕ್ಟರ್​ ಅವರನ್ನು ಅಮಾನತು ಮಾಡಿ ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.

ಇಮ್ರಾನ್ ಖಾನ್ ಸಸ್ಪೆಂಡ್ ಆದ ಪಿಎಸ್ಐ. ಕಳೆದ ಒಂದು ವಾರದ ಹಿಂದೆ ಕಪ್ಪು ಹಣ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಿಂದ ಪಿಎಸ್ಐ ಸುಮಾರು 5 ಲಕ್ಷ ಹಣ ಪಡೆದಿದ್ದರು.‌

ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ಹೋಗಿತ್ತು.‌ ಈ ಸಂಬಂಧ ಕೆ.ಜಿ.ಹಳ್ಳಿ ಉಪವಿಭಾಗದ ಎಸಿಪಿ ಜಗದೀಶ್ ತನಿಖೆ ನಡೆಸುವಂತೆ ಡಿಸಿಪಿ‌ ಶರಣಪ್ಪ‌ ಸೂಚಿಸಿದ್ದರು‌.

ತನಿಖೆ ಕೈಗೊಂಡು ಅಂತಿಮ ವರದಿಯಲ್ಲಿ ಡಿಸಿಪಿ ನೀಡಲಾಗಿದೆ. ತನಿಖೆ ವೇಳೆ ಪಿಎಸ್ಐ ಇಮ್ರಾನ್ ಖಾನ್ 5 ಲಕ್ಷ ಹಣ ಪಡೆದಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಸಂಬಂಧ ಎಸಿಪಿ ವರದಿ ಆಧರಿಸಿ ಸಸ್ಪೆಂಡ್ ಮಾಡಲಾಗಿದೆ‌.

 

ಮೊನ್ನೆ ಹಲ್ಲೆ ಗೊಳಗಾಗಿದ್ದ ಪಿಎಸ್ಐ ಇಂದು ಸಸ್ಪೆಂಡ್..

 

ಭಾನುವಾರ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಪಿಎಸ್‌ಐ ಇಮ್ರಾನ್ ಖಾನ್ ಕಾಡುಗೊಂಡನಹಳ್ಳಿ ಮತ್ತು ಗೋವಿಂದಪುರ ಠಾಣೆಗಳ ಗಡಿಯಲ್ಲಿ ಕರ್ತವ್ಯ ವೇಳೆ, ಅನುಮಾನಾಸ್ಪದ ವಾಹನವೊಂದರ ಪರಿಶೀಲನೆ ವೇಳೆ ನಾಲ್ಕೈದು ಮಂದಿಯ ಗುಂಪು ಪಿಎಸ್‌ಐ ಮೇಲೆ ಹಲ್ಲೆ ನಡೆಸಿತ್ತು. ಈ ಸಂಬಂಧ ಕೈ, ಕಾಲು, ಮುಖ ಮತ್ತು ದೇಹದ ಕೆಲವೆಡೆ ಸಣ್ಣ-ಪುಟ್ಟ ಗಾಯಗಳಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಈ ಮಧ್ಯೆ ಪಿಎಸ್‌ಐ ಇಮ್ರಾನ್ ಅಲಿ ಖಾನ್ ಮತ್ತು ಕಿಡಿಗೇಡಿಗಳ ಗುಂಪಿನ ನಡುವೆ ನಡೆದ ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿರಲಿಲ್ಲ. ಈ ಬಗ್ಗೆ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!