Tuesday, May 28, 2024

“ಅಂತರಾಜ್ಯದಲ್ಲಿ ಕುಸ್ತಿ ಗೆದ್ದ ಬೆಳಗಾವಿ ಜಿಲ್ಲಾ ಯುವಕರು”

ಸವದತ್ತಿ : ಇತ್ತೀಚಿಗೆ ಗೋವಾದಲ್ಲಿ ನಡೆದ 4ನೇ ನ್ಯಾಷನಲ್ ಯುತ್ಸ್ ಗೇಮ್ 2021ರ ಚಾಂಪಿಯನ ಶೀಪ್ ನಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಯುವಕರು ವಿಜಯಶಾಲಿಯಾಗಿ ಗ್ರಾಮ,ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಹೌದು ಗ್ರಾಮೀಣ ಕ್ರೀಡೆಯಾದ ಕುಸ್ತಿ 4ನೇ ನ್ಯಾಷನಲ್ ಯುತ್ಸ್ ಗೇಮ್ 2021ರ ಚಾಂಪಿಯನ ಶೀಪ್ ನಲ್ಲಿ 57 ಕೆಜಿ ಮ್ಯಾಟ್ ಪಾಯಿಂಟ್ ಕುಸ್ತಿಯಲ್ಲಿ ಯಲ್ಲಪ್ಪ ಕುರಿ (ಪ್ರಥಮ) ಹಾಗೂ 86 ಕೆಜಿ ಮ್ಯಾಟ್ ಪಾಯಿಂಟ್ ಕುಸ್ತಿಯಲ್ಲಿ ಸಲಿಮ್ ಮುಲ್ಲಾನವರ (ದ್ವೀತಿಯ), 57 ಕೆಜಿ ಮ್ಯಾಟ್ ಪಾಯಿಂಟ್ ಕುಸ್ತಿಯಲ್ಲಿ ಶ್ರೀಧರ ಚಿಲಕವಾಡ (ದ್ವೀತಿಯ), 57 ಕೆಜಿ ಮ್ಯಾಟ್ ಪಾಯಿಂಟ್
ಜುನಿಯರ್ ವಿಬಾಗದಲ್ಲಿ ಶಿವನಗೌಡ ಪಾಟೀಲ್ (ದ್ವೀತಿಯ) ಸ್ಥಾನ ಪಡೆದುಕೊಂಡಿದ್ದಾರೆ.

ಗ್ರಾಮದ ಕೀರ್ತಿ ಗೋವಾದಲ್ಲಿ ಹಬ್ಬುತ್ತಿದ್ದಂತೆ ಇತ್ತ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು ಯುವಕರನ್ನು ಮೆರವಣಿಗೆ ಮೂಲಕ ಅಭಿನಂದಿಸಿ ಇವರ ಈ ಸಾಧನೆಗೆ ಗ್ರಾಮ ಪಂಚಾಯತಿ ಆಡಳಿತ, ಹಿರಿಯರು, ಮಹಿಳೆಯರು, ಯುವಕರು, ಗ್ರಾಮದ ಹಲವು ಸಂಘ ಸಂಸ್ಥೆಗಳು ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ. ಹೀಗೆ ಗ್ರಾಮ ಹಾಗೂ ತಾಲೂಕಿನ ಕೀರ್ತಿ ವಿದೇಶಿ ಮಟ್ಟದಲ್ಲಿಯೂ ಹೆಚ್ಚಿಸುವಂತೆ ಗ್ರಾಮದ ಜನರು ಹಾರೈಸಿದರು.

ಜಿಲ್ಲೆ

ರಾಜ್ಯ

error: Content is protected !!