Friday, April 19, 2024

ರಾಯಚೂರಿನಲ್ಲಿ ಶಿಕ್ಷಕ ಬಸವರಾಜ ಪಟ್ಟಣಶೆಟ್ಟಿಗೆ ಸನ್ಮಾನ

ಯರಗಟ್ಟಿ:ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ರೈನಾಪೂರ ಗ್ರಾಮದ ದೈಹಿಕ ಶಿಕ್ಷಕ ಬಸವರಾಜ ಪಟ್ಟಣಶೆಟ್ಟಿ ಅವರನ್ನು ರಾಯಚೂರು ಜಿಲ್ಲೆಯ ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ನಾಗೇಶ್ ಜೆ. ನಾಯಕ ಅವರ ಎರಡನೇ ಗಜಲ್ ಸಂಕಲನ ‘ಆತ್ಮ ಧ್ಯಾನದ ಬುತ್ತಿ’ ಬಿಡುಗಡೆ ಸಮಾರಂಭದಲ್ಲಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಬಸವರಾಜ ಅವರು ಅಗಲಿದ ತಮ್ಮ ತಂದೆ ಪತ್ರೆಪ್ಪ ಪಟ್ಟಣಶೆಟ್ಟಿ ಅವರ ಸ್ಮರಣಾರ್ಥ ‘ಆತ್ಮ ಧ್ಯಾನದ ಬುತ್ತಿ’ ಗಜಲ್ ಸಂಕಲನಕ್ಕೆ ಸಂಪೂರ್ಣ ಆರ್ಥಿಕ ವೆಚ್ಚವನ್ನು ಭರಿಸಿ ಮುದ್ರಣಕ್ಕೆ ಸಹಾಯ ಕಲ್ಪಿಸಿದ್ದರಿಂದ ಸಮೀರ ಪ್ರಕಾಶನ, ತೇಜಸ್ವಿ ಪ್ರಕಾಶನ ಹಾಗೂ ಪದವಿ ಮಹಾವಿದ್ಯಾಲಯದ ವತಿಯಿಂದ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಬಸವರಾಜ ನನ್ನ ತಂದೆಯ ಹೆಸರನ್ನು ಅಕ್ಷರದ ಮೂಲಕ ಚಿರಸ್ಥಾಯಿಯಾಗಿ ಉಳಿಸುವ ಅವಕಾಶ ಒದಗಿ ಬಂದದ್ದು ನನ್ನ ಸೌಭಾಗ್ಯ. ಅದಕ್ಕಾಗಿ ಗೆಳೆಯ ನಾಗೇಶ್ ಅವರಿಗೆ ಕೃತಜ್ಞನಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಿ. ಬಿ. ಚಿಲ್ಕರಾಗಿ, ನಿವೃತ್ತ ಉಪನ್ಯಾಸಕರಾದ ಮಧುಮತಿ ದೇಶಪಾಂಡೆ, ಖ್ಯಾತ ಗಜಲ್‌ಕಾರರಾದ ಅಲ್ಲಾಗಿರಿರಾಜ್, ಕನ್ನಡ ಪ್ರಾಧ್ಯಾಪಕ ಖಾದರ್ ಭಾಷಾ, ಆರಕ್ಷಕ, ಗಜಲ್ ಕವಿ ಶೇಖರ ಹಾದಿಮನಿ, ಶಿಕ್ಷಕ ರಮೇಶ್ ತಳವಾರ, ಮುನವಳ್ಳಿ ಬ್ಯಾಂಕ್ ಮ್ಯಾನೇಜರ್ ಶಿವಾನಂದ ಮದ್ದಾನಿ, ಮಹಾಂತೇಶ ಪಟ್ಟೇದ, ಕೃತಿಕಾರ ನಾಗೇಶ್ ಜೆ. ನಾಯಕ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!