Tuesday, May 28, 2024

“ತಿರುಳ್ಗನ್ನಡ ಸಾಹಿತಿ ಸತ್ಯಾರ್ಥಿ”ಗ್ರಂಥ ಲೋಕಾರ್ಪಣೆ

ಬೈಲಹೊಂಗಲ: ಇತ್ತೀಚೆಗೆ ನಮ್ಮನ್ನಗಲಿದ *ಸತ್ಯಾರ್ಥಿ* ಎಂಬ ವೈಶಿಷ್ಟ್ಯಪೂರ್ಣ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಬೈಲಹೊಂಗಲದ  ಚನ್ನಬಸಪ್ಪ ಹೊಸಮನಿ ಅವರ ನಿವಾಸಕ್ಕೆ  ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಡಾ. ರಾಜೇಂದ್ರ ಎಸ್. ಗಡಾದ ಅವರು ರಚಿಸಿದ ತಿರುಳ್ಗನ್ನಡ ಸಾಹಿತಿ ಸತ್ಯಾರ್ಥಿ (ಬದುಕು-ಬರಹ-ಚಿಂತನೆ) ಗ್ರಂಥವನ್ನು ಲೋಕಾರ್ಪಣೆ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ  ಮೋಹನ ಬಸನಗೌಡ ಪಾಟೀಲ, ಮರ್ಚಂಟ್ಸ್ ಬ್ಯಾಂಕಿನ ಉಪಾಧ್ಯಕ್ಷರಾದ  ಶೀಶೈಲ ಶರಣಪ್ಪನವರ, ಕನ್ನಡ ಜಾನಪದ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ  ಚಂದ್ರಶೇಖರ ಕೊಪ್ಪದ, ಬೂದಿಹಾಳ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ  ಎನ್.ಆರ್ ಠಕ್ಕಾಯಿ,  ಶಿವಬಾಯವ್ವ ಹೊಸಮನಿ,  ಶಿವಪ್ರಕಾಶ ಹೊಸಮನಿ ಹಾಗೂ ಕುಮಾರಿ ಶಾಂಭವಿ ಹೊಸಮನಿ ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!