Wednesday, September 18, 2024

ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದು: ಅಭಿಮಾನಿಗಳ ಮೇಲೆ ಲಾಟಿ ಚಾರ್ಜ್

ಬೆಳಗಾವಿ ಅ.14: ರಾಜ್ಯಾಧ್ಯಂತ ಇಂದು ಕೋಟಿಗೊಬ್ಬ-3 ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದರೆ ಲೈಸೆನ್ಸ್ ಸಿಗದ ಹಿನ್ನೆಲೆ ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದುವಾಗಿದ್ದು, ಇದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಕಿಚ್ಚ ಸುದೀಪ್ ಅಭಿಮಾನಿಗಳ ಮೇಲೆ ಪೊಲೀಸರು ಲಾಟಿ ಚಾರ್ಜ್ ಮಾಡಿ ಕೆಲ ಯುವಕರನ್ನು ಚದುರಿಸಲಾಯಿತು.

ಕಳೆದ ಎರಡು ವರ್ಷಗಳಿಂದ ಸುದೀಪ್ ಚಿತ್ರ ನೋಡಲು ಕಾದು ಕುಳಿತಿದ್ದ ಅಭಿಮಾನಿಗಳು ಇಂದು ಕೋಟಿಗೊಬ್ಬ-೩ ಸಿನಿಮಾ ರಿಲೀಸ್ ಹಿನ್ನೆಲೆ ಬೆಳಗಾವಿಯ ನಿರ್ಮಲ್ ಚಿತ್ರಮಂದಿರದಲ್ಲಿ ಜಮಾಯಿಸಿದ ಕಿಚ್ಚ ಅಭಿಮಾನಿಗಳು ಸುದೀಪ್ ಕಟ್‌ಔಟ್‌ಗೆ ಹಾಲಿನ ಅಭಿಷೇಕ ಮಾಡಿದರು. ಬಳಿಕ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು. ಇದೇ ವೇಳೆ ಪಟಾಕಿಯ ಬೆಂಕಿ ಕಿಡಿಯೊಂದು ಅಭಿಮಾನಿಯೊರ್ವನ ಕಣ್ಣಿಗೆ ಸಿಡಿದ ಪರಿಣಾಮ ರಕ್ತ ಸುರಿದ ಗಾಯವಾಗಿದೆ.

ಲೈಸೆನ್ಸ್ ಸಿಗದ ಹಿನ್ನೆಲೆ ಇಂದು ಕೋಟಿಗೊಬ್ಬ 3 ಚಿತ್ರ ಪ್ರದರ್ಶನ ರದ್ದುವಾಗಿದ್ದ ಹಿನ್ನಲೆ ಸುದೀಪ್ ಅಭಿಮಾನಿಗಳು ಸಂತೋಷ-ನಿರ್ಮಲ್ ಚಿತ್ರಮಂದಿರದ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಖಡೇ ಬಜಾರ್ ಪೊಲೀಸರು ತಾಂತ್ರಿಕ ಸಮಸ್ಯೆಯಿಂದ ಸಮಸ್ಯೆಯಿಂದ ಸಿನಿಮಾ ರಿಲೀಸ್ ಆಗಿಲ್ಲ. ನಾಳೆ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಅಂತಾ ಪೊಲೀಸರು ಮೈಕ್‌ನಲ್ಲಿ ಅನೌನ್ಸ್ ಮಾಡಿ, ತಿಳಿಹೇಳಿದರೂ ಕೇಳದೇ ಅಭಿಮಾನಿಗಳನ್ನ ಮೇಲೆ ಲಾಠಿ ಬೀಸಿ ಯುವಕರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.

ಇನ್ನು ಅಭಿಮಾನಿಗಳು ಚಿತ್ರಮಂದಿರದಲ್ಲಿ ತೆಗೆದುಕೊಂಡ ಟಿಕೆಟ್ ಗಳನ್ನು ವಾಪಸ್ ನೀಡಿ ಹಣ ಪಡೆದುಕೊಂಡರು.

ಜಿಲ್ಲೆ

ರಾಜ್ಯ

error: Content is protected !!