ಚನ್ನಮ್ಮ ಕಿತ್ತೂರು (ಅ.11): ಪಟ್ಟಣದ ಕಂದಾಯ ಕಚೇರಿ ಎದುರಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಪ್ರತಿಭಟನೆ ಜರುಗಿತು.
ಉತ್ತರ ಪ್ರದೇಶದ ಲಖಿಂಪುರದ ಖೇರಿಯಲ್ಲಿ ಪ್ರತಿಭಟನಯಲ್ಲಿ ಇದ್ದ ರೈತರ ಮೇಲೆ ಆಶಿಶ್ ಮಿಶ್ರ ತನ್ನ ಕಾರನ್ನು ಹಾಯಿಸಿ ಸುಮಾರು 5 ರಿಂದ 6 ಜನ ರೈತರ ಸಾವಿಗೆ ಕಾರಣರಾದ ಪ್ರಯುಕ್ತ ಕೃತ್ಯಕ್ಕೆ ಕಾರಣಿಕರ್ತರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಪರಾಧಿಗೆ ಕಠಿಣ ಶಿಕ್ಷೆ ಆಗಬೇಕು ಮೃತಪಟ್ಟ ರೈತರಿಗೆ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಚನ್ನಮನ ಕಿತ್ತೂರಿನ ದಂಡಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಂತರ ಬಾಬಾಗೌಡ ಪಾಟೀಲ, ನಂಜುಂಡಸ್ವಾಮಿ, ಸುಂದರೇಶ್, ಎಚ್ ಎಸ್ ರುದ್ರಪ್ಪ, ಇನ್ನೂ ಹಲವಾರು ರೈತ ನಾಯಕರೊಂದಿಗೆ ಸುಮಾರು 40 ವರ್ಷಗಳ ಕಾಲ ರೈತರು ಹೋರಾಟದಲ್ಲಿ ತಮ್ಮದೇಯಾದ ಸೇವೆ ಸಲ್ಲಿಸಿ ರೈತರಿಗಾಗಿ ಹಸಿರು ಕ್ರಾಂತಿ ಪತ್ರಿಕೆ ಹೊರಡಿಸಿ ಅದರ ಮೂಲಕ ರೈತರಿಗೆ ಆಗುವ ಅನ್ಯಾಯ ಮತ್ತು ರಾಜಕಾರಣಿಗಳನ್ನು ಪತ್ರಿಕೆಯ ಮುಖಾಂತರ ಎಚ್ಚರಿಸುವ ಕೆಲಸ ಮಾಡುತ್ತಿದ್ದ ಹಿರಿಯ ರೈತ ಹೋರಾಟಗಾರರು ಹಾಗೂ ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕರಾದ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಉಪಾಧ್ಯಕ್ಷ ನಿಂಗಪ್ಪ ನಂದಿ, ಕಲ್ಲಪ್ಪ ಕುಗಟಿ, ಕಲಗೌಡ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಬೈಲಪ್ಪ ದಳವಾಯಿ, ಬೆಳಗಾವಿ ಜಿಲ್ಲೆ ಯುವ ಘಟಕದ ಅಧ್ಯಕ್ಷ ಪರ್ವತ ಗೌಡ ಪಾಟೀಲ, ಧಾರವಾಡ ಜಿಲ್ಲಾ ಅಧ್ಯಕ್ಷ ಶಿವಾನಂದ ಹೊಳೆಹಡಗಲಿ, ಕಿತ್ತೂರ ತಾಲೂಕ ಅಧ್ಯಕ್ಷ ಗಿರಿಯಪ್ಪ ಪರವನ್ನವರ, ಬಸವರಾಜ ಖನ್ನಾಗೌಡರ, ಮಡಿವಾಳಪ್ಪ ವರಗನ್ನವರ, ಬಿಷ್ಟಪ್ಪಾ ಶಿಂದೆ, ಬಸವರಾಜ ಹಣ್ಣಿಕೇರಿ, ಜಯಪ್ಪ ಪೇಟೆ, ಅಶೋಕ ಕುಗಟಿ, ಚನ್ನಪ್ಪ ಗಣಾಚಾರಿ, ದೇಮನಗೌಡ ಪಾಟೀಲ ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು, ರೈತರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು