ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಶಂಕರ ಚಂದರಗಿ ಸಭಾ ಭವನದಲ್ಲಿ ಮುಂಜಾನೆ 10-30 ಕ್ಕೆ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ 13 ನೇಯ ಪಟ್ಟಾಧಿಕಾರದ ವಾರ್ಷೀಕೋತ್ಸ ಸಮಾರಂಭ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕರ‍್ಯಕ್ರಮದ ದಿವ್ಯಸಾನಿಧ್ಯವನ್ನು ಗದಗ-ಡಂಬಳದ ಎಡೆಯೂರು ಶ್ರೀ ಜಗದ್ಗುರು ತೋಟದರ‍್ಯ ಸಂಸ್ಥಾನ ಮಠದ ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಳು ವಹಿಸಲಿದ್ದಾರೆ. ಸಾನಿದ್ಯವನ್ನು ನಾಗನೂರು ಅಲ್ಲಮ ಪ್ರಭು ಶ್ರೀಗಳು, ನಿಚ್ಚಣಕಿ ಪಂಚಾಕ್ಷರಿ ಶ್ರೀಗಳು, ಕಾರಿಮಠದ ಗುರುಶಿದ್ದ ಶ್ರೀಗಳು,
ಘಟಪ್ರಭಾದ ಮಲ್ಲಿಕರ‍್ಜುನ ಶ್ರೀಗಳು, ಹುಕ್ಕೇರಿ ಶಿವಬಸವ ಶ್ರೀಗಳು, ನಯಾನಗರದ ಶಿದ್ದಲಿಂಗ ಶ್ರೀಗಳು, ಅರಳಿಕಟ್ಟಿ ಶಿವಮರ‍್ತಿ ಶ್ರೀಗಳು, ಶೇಗುಣಶಿಯ ಮಹಾಂತ ಶ್ರೀಗಳು ವಹಿಸಲಿದ್ದಾರೆ,
ಭಾರತ ಸ್ವಾತಂತ್ರ‍್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ತನ್ನದೇಯಾದ ಐತಿಹಾಸಿಕ ಸ್ಥಾನವನ್ನು ಹೊಂದಿದ್ದು ಕಿತ್ತೂರು ಸ್ವಾತಂತ್ರ‍್ಯ ಹೋರಾಟದಲ್ಲಿ ಕಲ್ಮಠದ ಪಾತ್ರವೂ ಅಷೇ ಮುಖ್ಯವಾಗಿದೆ. ಅರಮನೆ-ಗುರುಮನೆ ಪರಂಪರಂರೆಯ ಮೂಲಕ ಸಂಸ್ಥಾನದ ಮರ‍್ಗರ‍್ಶಿಯಾಗಿ ಕಲ್ಮಠದ ಶ್ರೀಗಳು ಸದಾ ಕಿತ್ತೂರಿನ ಶ್ರೇಯೋಭಿವೃದ್ಧಿಗೆ ಮರ‍್ಗರ‍್ಶನ ಮಾಡುತ್ತಿದ್ದರು. ಇಂತಹ ಪರಂಪರೆಯ ರಾಜಗುರು ಕಲ್ಮಠದ ಪ್ರಸ್ತುತ ಶ್ರೀಗಳಾದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಸಮಿಗಳ ಪಟ್ಟಾಧಿಕಾರಿಯಾಗಿ ೧೩ ರ‍್ಷ ಸಂದಿರುವ ಪ್ರಯುಕ್ತ ಸ್ಥಳೀಯ ಕಲ್ಮಠದ ಭಕ್ತವೃಂದ, ಹಳೆಯ ವಿದ್ಯಾರ್ಥಿ ವೃಂದ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಇವರುಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಾಧಿಕಾರದ ವಾರ್ಷೀಕೋತ್ಸ ಹಾಗೂ ಗುರುವಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.