ಸುದ್ದಿ ಸದ್ದು ಚನ್ನಮ್ಮನ ಕಿತ್ತೂರು: ರಾಜ್ಯ ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇಯ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಜಿಲ್ಲೆಯ ಗ್ರಾಮಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ಗ್ರಾಮ ವಾಸ್ತವ್ಯ ಮಾಡಲು ಕಂದಾಯ ಸಚಿವ ಆರ್.ಅಶೋಕ್ ಅವರ ಸೂಚನೆಯ ನೀಡಿರುವ ಹಿನ್ನಲೆಯಲ್ಲಿ ಇಂದು ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜರುಗಿತು,
ಕಿತ್ತೂರು ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಮಾತನಾಡಿ ಗ್ರಾಮ ವಾಸ್ತವ್ಯಕ್ಕೆ ಬರುವಾಗ ನನ್ನನ್ನು ಮತ್ತು ಇನ್ನೂಳಿದ ಅಧಿಕಾರಿಗಳನ್ನು ಸ್ವಾಗತ ಮಾಡುವುದನ್ನು ನೋಡಿದರೆ ಹೊಸದಾಗಿ ಮಾವನ ಮನೆಗೆ ಅಳಿಯನನ್ನು ಬರಮಾಡಿಕೊಂಡಂತೆ ಇತ್ತು ಇದನ್ನು ನೋಡಿ ನಮಗೆ ಬಹಳ ಸಂತೋಷವಾಯಿತು ಎಂದ ಅವರು ಆಧಾರ ಕಾರ್ಡ ಹಾಗೂ ಇ ಕೆವೈಸಿಗಳ ಅನೂಕೂಲತೆಯ ಬಗ್ಗೆ, ಹಲವಾರು ಕಾರಣಗಳಿಂದ ಸ್ಥಗಿತಗೊಂಡ ರೇಷನ್ ಕಾರ್ಡ ಪುನಃ ಪ್ರಾರಂಭ ಮಾಡುವ ಬರವಸೆ ನೀಡಿದರು, ರೂತರಿಗೆ ಆಗು ಯಾವುದೆ ತರಹದ ತೊಂದರಡಗಳಿದ್ದೆ ನನ್ನ ಗಮನಕ್ಕೆ ತಂದರೆ ತಕ್ಷಣ ಅವುಗಳಿಗೆ ಪರಿಹಾರ ಒದಗಿಸಲಾಗುದು ಎಂದು ಬರವಸೆ ಕೊಟ್ಟರು. ನನ್ನ ಹಂತದಲ್ಲಿ ಆಗುವ ಕಾರ್ಯಗಳನ್ನು ನಾನು ತಕ್ಷಣ ಮಾಡುವುದರ ಜೊತೆಗೆ ನನ್ನ ವ್ಯಾಪ್ತಿಗೆ ಮೀರಿದ ಸಮಸ್ಯಗಳನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರುವ ಮುಖಾಂತರ ಸಮಸ್ಯಗಳಿಗೆ ಪರಿಹಾರ ಒದಗಿಸಲಾಗುವುದು ಎಂದರು.
ಸಮಾರಂಭದ ಅಥಿತಿ ಸ್ಥಾನ ವಹಿಸಿ ಕಿತ್ತೂರು ಕೃಷಿ ಇಲಾಖೆ ಅಧಿಕಾರಿ ಮಂಜುನಾಥ ಕೆಂಜರಾಹುತ ಮಾತನಾಡಿ ಪ್ರತಿ ಗ್ರಾಮ ಮಟ್ಟದಲ್ಲಿ ರೈತರಿಗೆ ಅನಕೂಲವಾಗಲೆಂದು ರೈತ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದೆ. ರೈತ ಕೇಂದ್ರಗಳಿಗೆ ರೈತರು ಮೇಲಿಂದ ಮೇಲೆ ಭೇಟಿ ನೀಡಿ, ಸರಕಾರದಿಂದ ಬರುವಮಾಹಿತಿಗಳನ್ನು ತಿಳಿದುಕೊಳ್ಳಬೇಕು ರೈತರ ಮಕ್ಕಳಿಗೆ ಮುಖ್ಯ ಮಂತ್ರಿ ವಿದ್ಯಾರ್ಥಿ ನಿಧಿಯಿಂದ ಶಿಕ್ಷಣ ಪಡೆಯಲು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಇದರ ಸದುಪಯೋ ಗ ಪಡೆದುಕೊಳ್ಳಿ ಎಂದ ಅವರು ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರದ ಮಹತ್ವಾ ಕಾಂಕ್ಷಿ ಯೋಜನೆಯಾದ ರೈತ ಶಕ್ತಿ ಯೋಜನೆಯಲ್ಲಿ ರೈತರಿಗೆ ಉಳಮೆ ಮಾಡಲು ಡೀಸೈಲ್ ಖರೀದಿಗೆ ಪ್ರತಿ ಏಕರೆಗೆ 25೦ ರೂ ನೀಡಲು ಸರಕಾರ ನಿರ್ದಾರ ಮಾಡಿದ್ದು ಸದ್ಯದಲ್ಲಿ ಜಾರಿಗೆ ಬರಲಿದೆ ಎಂದರು.
ಈ ವೇಳೆ ದಂತ ವೈದ್ಯರು ಬೆಳಗಾವಿ ಜಿಲ್ಲಾ ಜನ ಜಾಗೃತಿ ಅಧ್ಯಕ್ಷ ಡಾ ಜಗದೀಶ ಹಾರುಗೊಪ್ಪ, ಪಶು ಇಲಾಖೆ ಅಧಿಕಾರಿ ಹಿರೇಮಠ, ಕಿತ್ತೂರು ತಾಲೂಕಾ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭಾವತಿ ಮಾತನಾಡಿದರು.
ಈ ಸಂದರ್ಭದಲ್ಲಿ ಉದಯವಾಣಿ ಪತ್ರಿಕೆಯ ವರದಿಗಾರ ಬಸವರಾಜ ಚಿನಗುಡಿ, ಡಾ ಜಗದೀಶ ಹಾರುಗೊಪ್ಪ, ರಾನಪ್ಪ ದುರಗದ, ಕಲ್ಲಪ್ಪ ಕೂಗಟಿ, ಡಾ ರಾಜೇಂದ್ರ ಗಟ್ನಟ್ಟಿ, ಗುಂಡುರಾವ್ ಕುಲಕರ್ಣಿ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಕಿರಣ ಹಂಚಿನಮನಿ, ಭೀಮಪ್ಪ ದುರ್ಗದ, ಬಾಬು ದುರ್ಗದ, ಶಂಕರ ಇಟಗಿ, ನಿಂಗಪ್ಪ ಕೂಗಟಿ, ರಾಮ ಮಡಿವಾಳರ, ಕರೆಪ್ಪ ಹುಲಮನಿ, ಮುರಿಗೆಪ್ಪ ಸಿದ್ದಗಿರಿ, ಜಯಪ್ಪ ಪ್ಯಾಟಿ, ತಾಲೂಕಾ ಮಟ್ಟದ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರು ಸೇರಿದಂತೆ ಇನ್ನೂ ಅನೇಕರು ಇದ್ದರು.
ಬಸವರಾಜ ಕೂಗಟಿ ಸ್ವಾಗತಿಸಿದರು, ಚನ್ನಪ್ಪ ಹಂಚಿನಮನಿ ನಿರೂಪಣೆ ಮಾಡಿದರು, ಅದೃಶ್ಯಪ್ಪ ದಾಸ್ತಿಕೊಪ್ಪ ವಂದಾಣಾರ್ಪಣೆ ಮಾಡಿದರು.