ಬೈಲಹೊಂಗಲ: ದಯವೇ ಧರ್ಮದ ಮೂಲವಯ್ಯ ಇದು ವಿಶ್ವಸಂಸ್ಥೆಯ ದೇಯವಾಕ್ಯವಾಗಬೇಕು ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೊಂಟದಾರ್ಯ ಮಹಾಸ್ವಾಮಿಗಳು ಬೇವಿನಕೊಪ್ಪ ಗ್ರಾಮದಲ್ಲಿ ಜರುಗಿದ ಆನಂದಾಶ್ರಮ ವಾರ್ಷಿಕೋತ್ಸವ ಹಾಗೂ ಸಹಪಂಕ್ತಿ ಭೋಜನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು
ವಿಶ್ವಗುರು ಬಸವಣ್ಣನವರ ತತ್ವ ಇಂದು ಜಗತ್ತಿಗೆ ತುಂಬಾ ಅತ್ಯವಶ್ಯವಾಗಿದೆ. ದೇವಸ್ಥಾನ ಕಟ್ಟುವುದಲ್ಲ, ರಥ ಮಾಡಿ ರಥಕ್ಕೆ ಬಾಳೆಹಣ್ಣು ಉತ್ತುತ್ತಿ ಒಗಿಯುವುದಲ್ಲ ದೇಹವನ್ನು ದೇಗುಲ ಮಾಡಿ, ಕಷ್ಟ ದುಃಖಗಳಲ್ಲಿರುವ, ಹಸಿದು ಬಂದವರಿಗೆ ಬಾಳೆಹಣ್ಣು ಉತ್ತತ್ತಿ ನೀಡುವ ಗುರು ಬೇಕು. ವಿಜಯಾನಂದ ಸ್ವಾಮೀಜಿಯವರು ಇಂತಹ ಕೆಲಸ ಮಾಡುತ್ತಿರುವುದು ಸಂತೋಷದ ವಿಷಯ. ಜಗತ್ತಿನಲ್ಲಿ ಆಸ್ತಿ ಅಂತಸ್ತು ಬೇಕಾದಷ್ಟು ಗಳಿಸಬಹುದು ಆದರೆ ವಿಜಯಾನಂದ ಮಹಾಸ್ವಾಮಿಗಳಂತಹ ಸ್ವಾಮಿಗಳು ಸಿಗುವುದು ಕಷ್ಟಸಾಧ್ಯ ಆದ್ದರಿಂದ ಅವರನ್ನು ಉಭಯ ಗ್ರಾಮಗಳ ಗ್ರಾಮಸ್ಥರು ರೆಪ್ಪೆ ಕಣ್ಣನ್ನು ನೋಡಿಕೊಂಡಂತೆ ನೋಡಿಕೊಳ್ಳಬೇಕು ಎಂದ ಅವರು ತ್ಯಾಗ ಮಾಡಿ ಜೀವಿಸುವುದು ಬಹಳ ಕಷ್ಟ. ಇಂತಹ ವೃದ್ಯಾಪ್ಯ ಜೀವನದಲ್ಲಿ ಉತ್ಸಾಹಿಗಳಾಗಿ ಬಂದ ಭಕ್ತರಿಗೆ ಆಧ್ಯಾತ್ಮಿಕ, ಆರೋಗ್ಯ, ದಾಸೋಹ ಮಾಡುತ್ತಿರುವ ಶ್ರೀಗಳು ನಮ್ಮೆಲ್ಲರಿಗೂ ಮಾದರಿ ಎಂದರು.
ಈ ವೇಳೆ ವಿಜಯಾನಂದ ಮಹಾಸ್ವಾಮಿಗಳು ಮಾತನಾಡಿ ಕೆಲ ದುಷ್ಟ ಶಕ್ತಿಗಳು ನನ್ನ ಮಠಕ್ಕೆ ಬಂದು ಈ ಭಾಗದಲ್ಲಿ ವಿಶ್ವಗುರು ಬಸವಣ್ಣನವರ ವಚನ ಸಾಹಿತ್ಯದ ಪ್ರಭಾವ ಬಹಳಷ್ಟು ಇದೆ ಅದನ್ನು ಬೆಳೆಯದಂತೆ ನೋಡಿಕೊಳ್ಳಬೇಕು ಅದಕ್ಕೆ ಬೇಕಾಗುವ ಸರ್ವ ಸವಲತ್ತುಗಳನ್ನು ನಾವು ಮಾಡಿಕೊಡುತ್ತೇವೆ ಎಂದರು ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಬಸವ ತತ್ವದಲ್ಲಿ ಸಮಾನತೆ, ಕಾಯಕ, ದಾಸೋಹ, ಸ್ವತಂತ್ರತೆ, ಜಾತಿಯತೆ ಇಲ್ಲಾ ಇಂತಹ ತತ್ವ ಸಿದ್ಧಾಂತಗಳು ಇಲ್ಲಿ ಅಷ್ಟೇ ಅಲ್ಲ ಇಡಿ ಜಗತ್ತಿಗೆ ಪರಿಹರಿಸಬೇಕು ಎಂದರು.
ಈ ವೇಳೆ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಮಹಾಸ್ವಾಮಿಗಳು, ಎಂ.ಕೆ ಹುಬ್ಬಳ್ಳಿ ಖ್ಯಾತ ದಂತವೈದ್ಯ ಡಾ ಜಗದೀಶ ಹಾರುಗೊಪ್ಪ, ಶಂಕರ ಮಾಡಲಗಿ, ಮಾತನಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಬಸವರಾಜ ಚಿನಗುಡಿ, ವಿಶ್ವನಾಥ ಚಿನಿವಾಲರ, ಬಸನಗೌಡ ಪಾಟೀಲ್, ಸೋಮನಗೌಡ ಪಾಟೀಲ್, ಸಂಗಪ್ಪ ಮಲ್ಲೂರ್, ಶಿವಪುತ್ರಪ್ಪ ಗಂಗಾಪುರ್, ಉಮೇಶ ಸಂಕಣ್ಣವರ ಸೇರಿದಂತೆ ಇನ್ನೂ ಅನೇಕರು ಇದ್ದರು.