ಬೆಳಗಾವಿ: ರೈತರು ಹಾಗೂ ವ್ಯಾಪಾರಸ್ಥರು ಜೈ ಕಿಸಾನ ಖಾಸಗಿ ಮಾರುಕಟ್ಟೆ ರದ್ದುಪಡಿಸುವ ಸಲುವಾಗಿ ನಡೆದ ಅನಿರ್ದಿಷ್ಟ ಆಮರಣ ಉಪವಾಸ ಸತ್ಯಾಗ್ರಹ ಇವತ್ತು 6 ನೇಯ ದಿನ ಯಶಸ್ವಿಯಾಯಿತು. ಈ ಹೋರಾಟಕ್ಕೆ ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿ ಅವರು ಇಂದು ಸಾಯಂಕಾಲ ಧರಣಾ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.
ನಗರದಲ್ಲಿ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿ ರೈತರು ಹಾಗೂ ವ್ಯಾಪಾರಸ್ಥರು ಬೆಳಗಾವಿ ಎಪಿಎಂಸಿ ಆವರಣದಲ್ಲಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಇನ್ನು ಖಾಸಗಿ ಮಾರುಕಟ್ಟೆಯ ವಿಚಾರವಾಗಿ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಈ ವೇಳೆ ಮಾದ್ಯಮರೊಂದಿಗೆ ಶಾಸಕ ಸತೀಶ್ ಜಾರಕಿಹೊಳಿ ಮಾತನಾಡಿದ ಅವರು ನಿಮ್ಮ ನ್ಯಾಯ ಸಮ್ಮತ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಅದಕ್ಕೆ ಪೂರಕವಾಗಿ ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.
ಇನ್ನು ಮಾಜಿ ಮಹಾಪೌರಾದ ಶಿವಾಜಿ ಸುಂಟಕರ, ರೈತ ಹೋರಾಟಗಾರ ಶಶಿಕಾಂತ ಜೋಶಿ ಮತ್ತು ಪ್ರಗತಿಪರ ರೈತರು ಇವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.