Tuesday, September 17, 2024

ಚಂಡೀಗಢ ಪುರಸಭೆ ಚುನಾವಣೆ : 14 ವಾರ್ಡುಗಳಲ್ಲಿ ಆಮ್ ಆದ್ಮಿ ಜಯಭೇರಿ, ಭಾರೀ ಕುಸಿತ ಕಂಡ ಬಿಜೆಪಿ ಮತ್ತು ಕಾಂಗ್ರೆಸ್ !

ಸುದ್ದಿ ಸದ್ದು ನ್ಯೂಸ್

  • ಮುಖ್ಯಾಂಶಗಳು: ಚಂಡೀಗಢ ಪುರಸಭೆ: ಮೊದಲ ಚುನಾವಣೆಯಲ್ಲೇ ಆಪ್‌ ಜಯಭೇರಿ
  • 35 ವಾರ್ಡ್‌ಗಳ ಪೈಕಿ 14ರಲ್ಲಿ ಆಮ್ ಆದ್ಮಿ ಗೆಲುವು,
  • ಬಿಜೆಪಿಗೆ 8 ಸ್ಥಾನ ನಷ್ಟ, ಪುರಸಭೆ ಅತಂತ್ರ
  • ಇದು ಮುಂದಿನ ಪಂಜಾಬ್‌ನ ಚುನಾವಣೆಯ ಮುನ್ನುಡಿ‌
  • ಆಮ್ ಆದ್ಮಿ‌ ಸಂತಸ

ಚಂಡೀಗಢ:  ಇನ್ನೆನು ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಆಗಮಿಸುವ ಪೂರ್ವದಲ್ಲಿ ಪಂಜಾಬ್‍ನ ಚಂಡೀಗಢ ಪುರಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಆಮ್‌ ಆದ್ಮಿ ಪಕ್ಷ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ. ಪಕ್ಷಕ್ಕೆ ದೊಡ್ಡ ಉತ್ತೇಜನ ಹಾಗೂ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಘಾತ ನೀಡುವ ಬೆಳವಣಿಗೆ ಕಂಡಿದೆ. ಚಂಡೀಗಢ ಪುರಸಭೆಯ ಒಟ್ಟು 35 ವಾರ್ಡುಗಳ ಪೈಕಿ 14ರಲ್ಲಿ ಆಪ್ ಜಯಭೇರಿ ಬಾರಿಸಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ 8 ಸ್ಥಾನ ನಷ್ಟಅನುಭವಿಸುವ ಮೂಲಕ 12 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್ 8 ಹಾಗೂ ಅಕಾಲಿ ದಳಕ್ಕೆ ಒಂದು ಸೀಟ್ ದೊರಕಿದೆ. ಆದರೆ ಯಾವುದೇ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗದ ಕಾರಣ ಚಂಡೀಗಢ ಪುರಸಭೆ ಅತಂತ್ರವಾಗಿದೆ.

ಚುನಾವಣಾ ಪ್ರಚಾರದಲ್ಲಿ ಕಿತ್ತೂರು ಮತಕ್ಷೇತ್ರದ ಅಧ್ಯಕ್ಷ ಆನಂದ ಹಂಪಣ್ಣವರ

ಕಳೆದ ಬಾರಿ ಚಂಡೀಗಢದಲ್ಲಿ ಒಟ್ಟು 26 ವಾರ್ಡುಗಳಿದ್ದರೆ ಈ ಬಾರಿ 35 ವಾರ್ಡ್‍ಗಳಿಗೆ ಏರಿಕೆಯಾಗಿದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರೆ ಆಮ್ ಆದ್ಮಿಗೆ 19 ಸದಸ್ಯರ ಬೆಂಬಲ ಹಾಗೂ ಬಿಜೆಪಿಗೆ 18 ಸದಸ್ಯರ ಬೆಂಬಲ ಬೇಕು. ಪಕ್ಷಕ್ಕೆ ಬಿಜೆಪಿಯ ಚಂಡೀಗಢ ಸಂಸದರ ಮತವೂ ದೊರಕಲಿದೆ.

ಆಮ್ ಆದ್ಮಿ ಪಕ್ಷ ಸದರಿ ಚುನಾವಣೆಗೆ ಹಲವಾರು ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಆದರೆ ಪ್ರಚಾರ ಮಾತ್ರ ಅಷ್ಟಕ್ಕಷ್ಟೇ ನಡೆದಿತ್ತು ಅಬ್ಬರದಿಂದ ನಡೆದಿದ್ದರೆ ಇನ್ನೂ ಆರೇಳು ಸದಸ್ಯರು ಆಯ್ಕೆ ಆಗುತ್ತಿದ್ದರು.

ವಾರ್ಡ್ ಸಂಖ್ಯೆ 19ರಲ್ಲಿ ಗೆದ್ದ ಆಪ್‍ನ 25 ವರ್ಷದ ನೇಹಾ ಮುಸಾವತ್ ಅವರು ಅತ್ಯಂತ ಕಿರಿಯ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

“ಚಂಡೀಗಢ ಪುರಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಈ ಅಭೂತಪೂರ್ವ ಗೆಲುವು ಪಂಜಾಬ್‌ನ ಬದಲಾವಣೆಯ ಪರ್ವದ ಸಂಕೇತ. ಚಂಡೀಗಢದ ಜನತೆ ಭ್ರಷ್ಟಾಚಾರದ ರಾಜಕೀಯವನ್ನು ತಿರಸ್ಕರಿಸಿದ್ದಾರೆ, ಪ್ರಾಮಾಣಿಕ ರಾಜಕೀಯ ಮಾಡುವ ಆಮ್ ಆದ್ಮಿಗೆ ಮಣಿ ಹಾಕಿದ್ದಾರೆ.‌ ಈ ಬಾರಿ ಪಂಜಾಬ್‌ ಬದಲಾವಣೆಗೆ ಸಿದ್ಧವಾಗಿದೆ.ಈ ಗೆಲುವು ಬರುವ ವಿಧಾನಸಭಾ ಚುನಾವಣೆಯ ಬದಲಾವಣೆ ಸಂಕೇತ” ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

“ಚಂಡೀಗಢ ಪುರಸಭಾ ಚುನಾವಣಾ ಪ್ರಚಾರದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಸಂಸದ ಭಗವಂತ ಮಾನ ಅವರನ್ನು ಹೊರತು ಪಡಿಸಿ ಬೇರೆ ಪ್ರಮುಖ ನಾಯಕರು ಭಾಗವಹಿಸಿರಲಿಲ್ಲ ಕಾರಣ ಇನ್ನೂ ಆರೇಳು ಸದಸ್ಯರು ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಪ್ರಚಾರ ಪ್ರಕ್ರಿಯೆ ನಡೆದಿದ್ದರೆ ನಮ್ಮ ಪಕ್ಷ ಸ್ವತಂತ್ರವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿತ್ತು. ಈ ಚುನಾವಣೆ ಮುಂಬರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ನಮ್ಮ ಪಕ್ಷ ಗೆಲ್ಲಲು ಮತ್ತು ಅಧಿಕಾರಕ್ಕೆ ಏರಲು ಮುನ್ನುಡಿ” ಆನಂದ ಹಂಪಣ್ಣವರ ಆಮ್ ಆದ್ಮಿ ಪಕ್ಷದ ಮುಖಂಡರು ಚನ್ನಮ್ಮನ ಕಿತ್ತೂರು ವಿಧಾನಸಭಾ ಮತಕ್ಷೇತ್ರ.

ಕಿತ್ತೂರು ಮತಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಧ್ಯಕ್ಷ ಆನಂದ ಹಂಪಣ್ಣವರ

ಜಿಲ್ಲೆ

ರಾಜ್ಯ

error: Content is protected !!