Thursday, September 19, 2024

ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಗೆ ನಿರ್ದೇಶಕರು ಗೈರು; ಅಧ್ಯಕ್ಷ ರಮೇಶ್ ಕತ್ತಿ ಆಡಳಿತ ಅತೃಪ್ತಿ

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಹಾಗೂ ಬಿಜೆಪಿಯ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ದೊಡ್ಡ ಮಟ್ಟದಲ್ಲಿ ಬಂಡಾಯ ಭುಗಿಲೆದ್ದಿದೆ.

ಶನಿವಾರ ನಿಗದಿಯಾಗಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸಭೆಗೆ ಹಲವರು ಗೈರು ಹಾಜರಾಗಿದ್ದರು.ರಮೇಶ್ ಕತ್ತಿ ಅವರು ಕರೆದ ಸಭೆಗೆ ಕೇವಲ 5 ಜನ ನಿರ್ದೇಶಕರು ಮಾತ್ರ ಭಾಗವಹಿಸಿದ್ದಾರೆ.ಆದರೆ ಕೋರಂಗೆ ಕನಿಷ್ಠ 9 ಜನ ನಿರ್ದೇಶಕರ ಅವಶ್ಯಕತೆ ಇದ್ದೆ. ಆದರೂ ಸಭೆಯನ್ನು ಮುಂದೂಡದೆ ಸಭೆ ನಡೆಸಿ ಡಿಸಿಸಿ ಬ್ಯಾಂಕಿನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಬಹಿರಂಗಪಡಿಸಿದೆ.

ಬೆಳಗಾವಿ ಜಿಲ್ಲೆಯ ಬಿಡಿಸಿಸಿ ಬ್ಯಾಂಕ್ ರಾಜ್ಯದಲ್ಲೇ ಅತ್ಯಂತ ದೊಡ್ಡ ಬ್ಯಾಂಕ್. ಆದರೆ ಶನಿವಾರ ನಡೆದ ಸಭೆಗೆ ಹತ್ತು ಜನ ನಿರ್ದೇಶಕರು ಹಾಜರಾಗಿದ್ದಾರೆ. ರಮೇಶ್ ಕತ್ತಿ ಅವರ ಆಡಳಿತದ ಬಗ್ಗೆ ನಿರ್ದೇಶಕರು ಅತೃಪ್ತಿ ಸೂಚಿಸಿ ಗೈರುಹಾಜರು ಆಗಿದ್ದಾರೆ ಎಂಬ ಚರ್ಚೆ ಇದೀಗ ನಡೆದಿದೆ. ಬ್ಯಾಂಕಿನ ನಿರ್ದೇಶಕರು ಇದೀಗ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಪತ್ರ

ರಮೇಶ್ ಕತ್ತಿ ಅವರು ಕರೆದ ಸಭೆಗೆ 5 ಜನ ನಿರ್ದೇಶಕರು ಮಾತ್ರ ಭಾಗವಹಿಸಿದ್ದಾರೆ. ಕೋರಂಗೆ ಕನಿಷ್ಠ 9ಜನವಾದರೂ ಇರಬೇಕಾಗಿತ್ತು. ಐವರನ್ನು ಇಟ್ಟುಕೊಂಡು ಸಭೆ ನಡೆಸಿರುವುದು ಕಾನೂನು ಉಲ್ಲಂಘನೆಯಾಗಿದೆ .ಆಡಳಿತ ಮಂಡಳಿ ಸಭೆಯಲ್ಲಿ ಹದಿನಾರು ಜನ ನಿರ್ದೇಶಕರ ಪೈಕಿ ಐವರು ಪಾಲ್ಗೊಂಡಿದ್ದು ರಮೇಶ್ ಕತ್ತಿ, ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಸತೀಶ ಕಡಾಡಿ, ಶಿವಾನಂದ ಡೋಣಿ ಮಾತ್ರ ಭಾಗವಹಿಸಿದ್ದರು.ಲಕ್ಷ್ಮಣ ಸವದಿ, ಆನಂದ ಮಾಮನಿ, ಅರವಿಂದ್ ಪಾಟೀಲ, ಪಂಚನಗೌಡ ದ್ಯಾಮನಗೌಡ್ರ ಕಾರಣಾಂತರದಿಂದ ಭಾಗವಹಿಸಿಲ್ಲ.

ಕೋರಂ ಇರದ ಈ ಸಭೆ ನಿಯಮಬಾಹಿರ ಎಂದು ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ ತಿಳಿಸಿದ್ದಾರೆ. ಬ್ಯಾಂಕಿನ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ರಾಜು ಅಂಕಲಗಿ, ನೀಲಕಂಠ ಕಪ್ಪಲಗುದ್ದಿ, ಅಣ್ಣಾಸಾಬ್ ಕುಲಗುಡೆ, ಕೃಷ್ಣಾ ಅನಗೋಳಕರ, ಶಂಕರಗೌಡ ಪಾಟೀಲ್ ಅವರು ನಿನ್ನೆಯ ಸಭೆಯ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ. ಈ ಮೂಲಕ ರಮೇಶ್ ಕತ್ತಿ ವಿರುದ್ಧ ಸಮರ ಸಾರಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!