ನಿಘಂಟು ಬಳಕೆಯಿಂದ ಶಬ್ದ ಸಂಪತ್ತು ವೃದ್ದಿ-  ಕಿತ್ತೂರು ಬಿಇಒ ಆರ್.ಟಿ .ಬಳಿಗಾರ

ಉಮೇಶ ಗೌರಿ (ಯರಡಾಲ)

ಕಿತ್ತೂರು: ತಾಲೂಕಿನ ಕಾದರವಳ್ಳಿ ಎಸ್ ವಿ ಕೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಸೇತು ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಕಿತ್ತೂರ ಕ್ಷೇತ್ರ ಶಿಕ್ಷಣಾಧಿಕಾರಿ ಅರ್ ಟಿ ಬಳಿಗಾರ ಮಾತನಾಡಿದ ಅವರು ಭಾಷಾ ಅಧ್ಯಯನದಲ್ಲಿ ತೊಡಗಿರುವವರು ನಿಘಂಟು ಬಳಕೆ ಮಾಡುವದರಿಂದ ಸುಲಭವಾಗಿ ಶಬ್ದಸಂಪತ್ತನ್ನು ಹೆಚ್ಚಿಸಿಕೊಂಡು ನಿರರ್ಗಳವಾಗಿ ಮಾತನಾಡಲು ಮತ್ತು ಬರವಣಿಗೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಎಸ್ ವಿ ಕೆ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಗ್ರಾಮದ ದಾನಿಗಳಿಂದ ಪ್ರೌಢಶಾಲೆಗೆ ದೇಣಿಗೆ ಪಡೆದ ವಿದ್ಯಾಸೇತು ಪುಸ್ತಕ ಹಾಗೂ ಕನ್ನಡ ಇಂಗ್ಲೀಷ್ ಮತ್ತು ಹಿಂದಿ ನಿಘಂಟುಗಳನ್ನು ಮಕ್ಕಳಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗ್ರಾಮದ ದಾನಿಗಳ ಸಹಕಾರದಿಂದ ಮಕ್ಕಳಿಗೆ ನಿಘಂಟು ಕೊಡುಗೆಯಾಗಿ ನೀಡಿ ಅವರ ನಿಘಂಟು ಬಳಕೆ ಕೌಶಲ ಹಾಗೂ ಶಬ್ದಸಂಪತ್ತು ಹೆಚ್ಚಿಸುವಲ್ಲಿ ಸಮದಾಯ ತೊಡಗಿಕೊಂಡಿರುವ ಬಗೆಯನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಪಾಲ್ಗೊಂಡ ಖಂಡು ಹೈಬತ್ತಿಯವರು ವಾಸ್ತವಿಕ ನೆಲೆಯಲ್ಲಿ ಚಿಂತಿಸುವ ಸಾಮರ್ಥ್ಯ ಬೆಳಿಸಿಕೊಂಡು ಸೃಜನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮೂಲಕ ಮಕ್ಕಳು ಸಾಧನೆ ಮಾಡಿ ಊರಿಗೆ ಕೀರ್ತಿ ತರಬೇಕೆಂದು ಮಕ್ಕಳಿಗೆ ಕರೆ ನೀಡಿದರು.

 

10,000 ರೂಪಾಯಿ ಮೌಲ್ಯದ 160 ವಿದ್ಯಾಸೇತು ಪುಸ್ತಕಗಳು ಹಾಗೂ 35,000 ಸಾವಿರ ರೂಪಾಯಿ ಮೌಲ್ಯದ 675  ಕನ್ನಡ,ಇಂಗ್ಲೀಷ್, ಹಿಂದಿ ನಿಘಂಟು  (ಪಾಕೆಟ್ ಡಿಕ್ಷನರಿ) ಗಳನ್ನು ಮಹೇಶ ಹುಲ್ಲೂರ ಖಂಡು ಯಲ್ಲಪ್ಪ ಹೈಬತ್ತಿ, ಜಗದೀಶ ಪಕ್ಕೀರಪ್ಪ ಹಮ್ಮಣ್ಣವರ ,ಮಹಾಂತೇಶಗೌಡ  ಪಾಟೀಲ, ಶಿವಶಂಕರ ಈರಪ್ಪ ಜುಟ್ಟಿ ,ನಿಂಗಪ್ಪ ಸಿದ್ದಪ್ಪ ಕಲ್ಲೂರ, ರಾಮಚಂದ್ರ ಭ ಪೂಜೇರ,ಅದೃಶ್ಯ ರುದ್ರಪ್ಪ ಹಮ್ಮಣ್ಣವರ, ಶ್ರೀಶೈಲ ವ್ಹಿ ಕುಲಕರ್ಣಿ, ರುದ್ರಪ್ಪ ತಮ್ಮಣ್ಣ ಮಾಟೊಳ್ಳಿ,ಜಗದೀಶ ಬ ಧರೆನ್ನವರ.ಸೇರಿ ಶಾಲೆಗೆ ದೇಣಿಗೆ ನೀಡಿದರು.

ದಾನಿಗಳನ್ನು ಸನ್ಮಾನಿಸುತ್ತಿರುವ ಕಾರ್ಯಕ್ರಮ.

ಇದೆ ಸಂದರ್ಭದಲ್ಲಿ ದೇಣಿಗೆ ನೀಡಿದ ದಾನಿಗಳನ್ನು ಎಸ್ ಡಿ ಎಮ್ ಸಿ ಹಾಗೂ ಶಾಲಾ ಸಿಬ್ಬಂದಿಗಳು ಗೌರವಿಸಿ ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಪಿ ಕೆ ಪಿ ಎಸ್ ಅಧ್ಯಕ್ಷ ಎ.ಅರ್ ಪಾಟೀಲ .ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಮಹೇಶ ಹೆಗಡೆ,ಬಿ ಅರ್ ಪಿ. ಎ ಕೆ ಪಾಗಾದ,ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಿದರಾಯಪ್ಪ ಪೂಜೇರ ಸೇರಿದಂತೆ ಎಸ್ ಡಿ ಎಮ್ ಸಿ ಸದಸ್ಯರಾದ ಜಗದೀಶ ಧರೆನ್ನವರ,ಮಹಾಂತೇಶ ರತ್ನಾಕರ ,ಶಿಕ್ಷರಾದ ಮಹೇಶಕುಮಾರ್ ,ಮಂಜುಳಾ ಮಡ್ಲಿ, ಮಂಜುಳಾ ಕೊಂಡಿ ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಐ ಬಿ ಉಪರಿ, ಮಂಜು ಶೆಟ್ಟೆನ್ನವರ, ಸುನಂದಾಪಾಟೀಲ,ಅರ್ ಜಿ ಶೇಬನ್ನವರ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ.ಗಜಾನಂದ ಸೊಗಲನ್ನವರ ಸ್ವಾಗತಿಸಿದರು
ಸಿ ಜಿ ಪಾಟೀಲ ವಂದಿಸಿದರು,ಅರ್ ಬಿ ಮಡಿವಾಳರ ನಿರೂಪಿಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";