Tuesday, September 17, 2024

ಹುತಾತ್ಮ ಯೋಧರ ವಿಷಯದಲ್ಲಿ ಸಂಭ್ರಮಾಚರಣೆ ಸಲ್ಲದು: ಮಾಜಿ ಸೈನಿಕ ವೀರು

ಬೈಲಹೊಂಗಲ: ಭಾರತೀಯ ಸೇನಾಪಡೆಯ ಕಾಪ್ಟರ್ ತಮಿಳುನಾಡಿನ ಊಟಿ-ಕೊನ್ನೂರು ಬಳ್ಳಿ ಪತನಗೊಂಡು ಮೂರು ಸೇನೆಯ ಮುಖ್ಯಸ್ಥರಾದ C D S ಬಿಪಿನ್ ರಾವತ್ ಸೇರಿ 13 ಜನ ಹುತಾತ್ಮರಾದ ಯೋಧರಿಗೆ ಬೈಲಹೊಂಗಲದ  ಬಸವೇಶ್ವರ ಕೋಚಿಂಗ್ ಸೆಂಟರದಲ್ಲಿ ಮಾಜಿ ಯೋಧ ವೀರು ದೊಡವೀರಪ್ಪನವರ್ ಮತ್ತು ಗೆಳೆಯರ ಬಳಗ ಹಾಗೂ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿ ಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹುತಾತ್ಮರಾದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಚಿವಟಗುಂಡಿ ಗ್ರಾಮದ ಮಾಜಿ ಸೈನಿಕ(ಸಮಾಜ ಸೇವಕರಾದ) ವೀರು ದೊಡವೀರಪ್ಪನವರ , ಸೇನೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ರವರು ಅಪ್ಪಟ ದೇಶ ಭಕ್ತರು ತಮ್ಮ ಇಡೀ ಬದುಕನ್ನು ಬಾಲ್ಯದಿಂದಲೇ ದೇಶಕ್ಕೆ ಅರ್ಪಣೆ ಮಾಡಿದ ಮಹಾನ್ ದೇಶಭಕ್ತರು ಇವರು ಮೂರು ಸೇನೆಗಳಿಗೆ ಏಕೈಕ ದಂಡನಾಯಕ ಇರಬೇಕೆಂದು ಕೇಂದ್ರ ಸರ್ಕಾರ ಸೃಷ್ಟಿಸಿದ ಹುದ್ದೆಗೆ ಘನತೆ ಗೌರವ ತಂದುಕೊಟ್ಟ ಬಿಪಿನ್ ರಾವತ್ ಅವರ ಅಕಾಲಿಕ ನಿಧನವು ತುಂಬಲಾರದ ಹಾನಿಯಾಗಿದೆ ಎಂದರು,

ಕೆಲ ದೇಶದ್ರೋಹಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಾಚರಣೆ ಮಾಡಿ ದೇಶದ್ರೋಹದ ಕೃತ್ಯ ಎಸಗಿದವರಿಗೆ ಮಾನ್ಯ ಮುಖ್ಯಮಂತ್ರಿಗಳು ಶಿಕ್ಷೆ ನೀಡುವುದಾಗಿ ಹೇಳಿದ್ದಾರೆ ಬೇಗನೆ ಹೇಡಿ ಗಳಿಗೆ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು,.
ಹುತಾತ್ಮರಾದ ಎಲ್ಲರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಅಗಲಿಕೆಯಿಂದ ಕುಟುಂಬಕ್ಕೆ ಆದ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಮತ್ತು ಈ ದುರಂತದಿಂದ ಬದುಕುಳಿದ ಗ್ರೂಪ್ ಕ್ಯಾಪ್ಟನ್ ನೀರವ ಸಿಂಘ ರವರು ಬೆಂಗಳೂರಿನ ಕಮಾಂಡೋ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರು ಅತಿ ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸಿದ್ದರು..

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಅರ್ಜುನ್ ಕಡಬಿ, ಗೆಳೆಯರ ಬಳಗದ ಅಧ್ಯಕ್ಷರಾದ ಶಿವಾನಂದ್ ಕೆಂಚನಗೌಡ, ಮಾಜಿ ಸೈನಿಕರಾದ ಶೇಖರ್ ಸತ್ತಿಗೆರಿ, ಗುರುನಾಥ ಈಟಿಗೌಡರ್ ಮಂಜುನಾಥ್ ಮಾಳಗಿ. ಯೋಧ ಗೊರವನಕೊಳ್ಳ, ಅರ್ಜುನ್ ಕುಂಟಗೋಳ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

ಜಿಲ್ಲೆ

ರಾಜ್ಯ

error: Content is protected !!