Friday, September 20, 2024

ಕಾರ್ತಿಕ ದೀಪೋತ್ಸವ ಕತ್ತಲೆಯಿಂದ ಬೆಳಕಿಗೆ ಕೊಂಡೊಯ್ದು ಸುಖ ಸಮೃದ್ಧಿಯನ್ನು ನೀಡುತ್ತದೆ ಡಾ.ಎಸ್.ಬಿ.ದಳವಾಯಿ

ಸುದ್ದಿ ಸದ್ದು ನ್ಯೂಸ್   

ಚನ್ನಮ್ಮನ ಕಿತ್ತೂರು:- ಬುದ್ಧ, ಬಸವ, ಗಾಂಧಿ, ಪರಮಹಂಸರು,ವಿವೇಕಾನಂದರ ಆದರ್ಶಗಳಿಂದಾಗಿ,ಮಹಾನ್ ಪುರುಷರ ಪವಾಡಗಳಿಂದಾಗಿ ವಿಶ್ವದಲ್ಲಿಯೇ ಭಾರತ ದೇಶವು ಆಧ್ಯಾತ್ಮಿಕವಾಗಿ ಗುರುತಿಸಲ್ಪಟ್ಟಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ.ಎಸ್.ಬಿ.ದಳವಾಯಿ ಅವರು ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿ ತಿಮ್ಮಾಪೂರ ಗ್ರಾಮಕ್ಕೆ ಹೊಂದಿಕೊಂಡು ಇರುವ ಶ್ರೀ ಸಾಯಿ ಬಾಬಾ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ನಿಮಿತ್ತ ನಡೆದ ಸಮಾರಂಭದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದರು. 

ಕಾರ್ತಿಕ ಮಾಸದ ಮಹತ್ವ ಮತ್ತು ಸಾಯಿ ಬಾಬಾರ ಪವಾಡಗಳನ್ನು ಕುರಿತು ಮಾತನಾಡುತ್ತಾ ಮಂದಿರ ನಿರ್ಮಾಣ ಮಾಡಿದ ಶಿವಾನಂದ ಜಕಾತಿ ಹಾಗೂ ಕುಟುಂಬದ ಸದಸ್ಯರನ್ನು ಅಭಿನಂದಿಸಿದರು.     

ಕಾರ್ತಿಕ ಮಾಸವು ದೀಪಗಳನ್ನು ಬೆಳಗಿಸುವ ಹಬ್ಬವಾಗಿದ್ದು ತುಳಸಿ ಪೂಜೆಯಿಂದ ಆರಂಭವಾಗುತ್ತಿದೆ. ನಮ್ಮ ಮನೆ,ಮನಗಳನ್ನು ಬೆಳಗಿಸುವದರ ಜೊತೆಗೆ ಎಲ್ಲರಿಗೂ ಸುಖ ಸಮೃದ್ಧಿಗಳನ್ನು ದಯಪಾಲಿಸುತ್ತದೆ. ಎಲ್ಲ ಮನೆಗಳಲ್ಲಿ, ದೇವಾಲಯಗಳಲ್ಲಿ ರಂಗೋಲಿ ಹಾಕಿ,ಭಜನೆ ಮಾಡಿ,ದೀಪ ಬೆಳಗಿಸಿ ಸಂಭ್ರಮಿಸುವ ಹಬ್ಬ ಇದಾಗಿದೆ ಎಂದು ಡಾ.ಎಸ್.ಬಿ.ದಳವಾಯಿ ತಿಳಿಸಿದರು. 

ಶ್ರೀ ಸಾಯಿ ಬಾಬಾ ಸಂತ ಶಿಶುನಾಳ ಶರೀಫ, ಮಡಿವಾಳಜ್ಜ,ನಾಗಲಿಂಗಜ್ಜ ರ ಹಾಗೆಯೇ ಒಬ್ಬ ಪವಾಡಪುರುಷರಾಗಿದ್ದರು. ಇವರನ್ನು ಸಂತ,ಫಕೀರ,ಸದ್ಗುರು ಎಂದು ಕರೆಯಲಾಗುತ್ತಿತ್ತು.ಇವರೊಬ್ಬ ಮಹಾನ್ ಆಧ್ಯಾತ್ಮ ಗರುವಾಗಿದ್ದರು.ಹಿಂದೂ ಮುಸ್ಲಿಮ್ ಭಕ್ತರಿಂದ ಗೌರವಿಸಲ್ಪಡುತ್ತಿದ್ದ ಸಾಯಿ ಬಾಬಾರು ಭಾರತದ ಉದ್ದಗಲಕ್ಕೂ ಸರ್ವಕಾಲಿಕ ಆಧ್ಯಾತ್ಮಿಕ ಗುರುವಾಗಿದ್ದು ಭಕ್ತ ಸಮೂಹಕ್ಕೆ ಜೀವನದ ಏರಿತಗಳ ಬಗೆಗೆ,ಮಾನವೀಯ ಗುಣಗಳ ಬಗೆಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಾಬಾರ ವ್ಯಕ್ತಿತ್ವ ಧರ್ಮಾತೀತ,ಜಾತ್ಯಾತೀತ ವಾಗಿದ್ದು ಸಬ್ ಕಾ ಮಾಲೀಕ ಏಕ್ ಹೈ ಅನ್ನುವದು ಅವರ ಸುಪ್ರಸಿದ್ಧ ಊಕ್ತಿ ಆಗಿತ್ತು ಎಂದು ತಿಳಿಸಿದ ಡಾ.ಎಸ್.ಬಿ.ದಳವಾಯಿ ಸಾಯಿ ಬಾಬಾರವರು ಮಾಡಿದ ಕುದುರೆ ಪವಾಡ,ಗೋದಿ ರುಬ್ಬುವ ಕಥೆ,ನೀರಿನಿಂದ ದೀಪ ಬೆಳಗಿಸಿದ ಪವಾಡ,ಮಳೆ ನಿಲ್ಲಿಸಿದ ಪವಾಡಗಳನ್ನು ವಿವರಿಸಿದರು.ಮುಖ್ಯವಾಗಿ ನಂಬಿದವರನ್ನು ಎಂದಿಗೂ ಕೈಬಿಡದ ಬಾಬಾರ ಗುಡಿ ಕಿತ್ತೂರಿನಲ್ಲಿ ಇತ್ತೀಚೆಗೆ ನಿರ್ಮಾಣವದುದಕ್ಕೆ ಹರ್ಷ ವ್ಯಕ್ತ ಪಡಿಸಿದರು. 

ಶಿವಾನಂದ ಜಕಾತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಂದಿರ ನಿರ್ಮಾಣದಲ್ಲಿ ತನು ಮನ ಧನಗಳಿಂದ ಸಹಕರಿಸಿದ ಪ್ರತಿಯೊಬ್ಬರಿಗೆ ಧನ್ಯವಾದಗಳನ್ನು ತಿಳಿಸಿದರು.

ಶಿಕ್ಷಕ ಈಶ್ವರ ಗಡಿಬಿಡಿ ತಂಡದವರು ಸಂಗೀತ ಸೇವೆ ಮಾಡಿದರು.ರಾಣಿ ಚನ್ನಮ್ಮ ಮಹಿಳಾ ವೇದಿಕೆ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ಅನಿಲ ಹಂಬರ ಸ್ವಾಗತಿಸಿದರು.ರವಿ ಬುಲಬುಲೆ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!