ಬೈಲಹೊಂಗಲ(ಅ.24) ಇಂದು ಬೆಳಿಗ್ಗೆ ರಾಯಬಾಗದ ಕೋ-ಆಪರೇಟಿವ್ ಡೆವಲಪ್‌ಮೆಂಟ್ ಆಫೀಸರ್ ಅಡವಿಸಿದ್ದೇಶ್ವರ ಕರೆಪ್ಪಾ ಮಾಸ್ತಿ, ಅವರ ಮನೆ ಮತ್ತು ಸಂಬಂಧಿಸಿದ ಸ್ಥಳಗಳ ಮೇಲೆ ಎಸಿಬಿ ಪೋಲೀಸರು ದಾಳಿ ಮಾಡಿದ್ದಾರೆ.
ಸರ್ಕಾರಿ ನೌಕರರು ತಮ್ಮ ಸರ್ಕಾರಿ ಸೇವಾವಧಿಯಲ್ಲಿ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಗಳಿಸಿರುವ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಿದ ಆಧಾರದ ಮೇಲೆ ಬೆಳಗಾವಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮಾಸ್ತಿ ಮನೆ ನಂ.22 ರಿ.ಸ.ನಂ.318/ಕ ಮೃತ್ಯುಂಜಯ ನಗರ ಬೈಲಹೊಂಗಲ,ಹಾಗೂ ಆಪ್ತ ಗೆಳೆಯ ಸುರೇಶ ಸನ್ಮನಿ ಅವರ ಮನೆ ಶರಣ ಮಾರ್ಗ 3ನೇ ಕ್ರಾಸ್ ಶಿವಾನಂದ ಭಾರತಿ ನಗರ ಮುರ್ಕಿಭಾವಿ ರಸ್ತೆ ಬೈಲಹೊಂಗಲ ಮತ್ತು ಸಹಕಾರಿ ಅಭಿವೃದ್ಧಿ ಅಧಿಕಾರಿ ಕಛೇರಿ ರಾಯಬಾಗ ಈ ಸ್ಥಳಗಳಲ್ಲಿ ಏಕ ಕಾಲದಲ್ಲಿ ದಾಳಿ ಮಾಡಲಾಗಿದೆ.
ದಾಳಿ ಸಮಯದಲ್ಲಿ ಬೈಲಹೊಂಗಲದಲ್ಲಿ 66 ಲಕ್ಷ ರೂ ಮೌಲ್ಯದ ಮನೆ- ಎರಡು, 20 ಲಕ್ಷ ರೂ ಮೌಲ್ಯದ ಕಟ್ಟಡ ಹಂತದಲ್ಲಿರುವ ಮನ-ಎರಡು , 44 ಲಕ್ಷ 13 ಸಾವಿರ ಮೌಲ್ಯದ ನಿವೇಶನಗಳು-04 (ಹೀಗೆ ಒಟ್ಟು ರೂ.1 ಕೋಟಿ 30 ಲಕ್ಷ 13ಸಾವಿರ ಮೌಲ್ಯ).
4 ಲಕ್ಷ 45 ಸಾವಿರ ರೂ ಮೌಲ್ಯದ 06 ದ್ವಿಚಕ್ರ ವಾಹನಗಳು, 20 ಲಕ್ಷ 70 ಸಾವಿರ ಮೌಲ್ಯದ 04 ಕಾರಗಳು.ಮತ್ತು ರೂ.11,58,152/- ಮೌಲ್ಯದ 263.08 ಗ್ರಾಂ ಬಂಗಾರದ ಆಭರಣಗಳು,ರೂ.27,988 ಮೌಲ್ಯದ 945.16 ಕಿಲೋ ಗ್ರಾಂ ಬೆಳ್ಳಿಯ ಆಭರಣಗಳು.ಬ್ಯಾಂಕ ಡಿಪಾಜಿಟ್ಟ, ಶೇರ್ ಇನ್ನುರನ್ಸ್ ರೂ.1,50,000/-, 05 ಲಕ್ಷ ಮೌಲ್ಯದ ಗೃಹ ಉಪಯೋಗಿ ವಸ್ತುಗಳು ಮತ್ತು ನಗದು ಹಣ ರೂ.1,10,270/-ಗಳು ದೊರೆತಿದ್ದು, ಹೀಗೆ ಬಲ್ಲ ಮೂಲಗಳಿಗಿಂತ ಒಟ್ಟು ರೂ.1,24,74,410 (191.91%) ಮೌಲ್ಯದ ಹೆಚ್ಚಿನ ಅಕ್ರಮ ಸಂಪತ್ತು ಕಂಡುಬಂದಿರುತ್ತದೆ ಹಾಗೂ ತನಿಖೆ ಮುಂದುವರೆದಿರುತ್ತದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ