ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದ ವಿಜಯಾನಂದ ಶ್ರೀಗಳು

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್ 

ಬೈಲಹೊಂಗಲ: ತಾಲೂಕಿನ ಬೇವಿನಕೊಪ್ಪ ಗ್ರಾಮದ ಪ್ರೌಢ ಶಾಲಾ ಮಕ್ಕಳಿಗೆ ಸ್ಥಳೀಯ ಆನಂದಾಶ್ರಮ ಮಠದ ಪರಪ ಪೂಜ್ಯ ವಿಜಯಾನಂದ ಮಹಾಸ್ವಾಮಿಜಿಯವರ 62 ಜನ ವಿಧ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದರು. 

ಸಮವಸ್ತ್ರ ವಿತರಿಸಿ ಮಾತನಾಡಿದ ಶ್ರೀಗಳು ಜಾತಿ ಮತ ಪಂತ ಪಕ್ಷ ಎಂಬ ಭೇದಭಾವ ಇಲ್ಲದೆ ಎಲ್ಲರಿಗೂ ಸಹಾಯ ಮಾಡಬೇಕು. ಇಲ್ಲಿ ಯಾರೂ ಬಡವರಲ್ಲ ಯಾರೂ ಶ್ರೀಮಂತರಲ್ಲ ಎಲ್ಲೂರು ಸಮಾನರು. ಊಟ, ವಸತಿ, ವಸ್ತ್ರ, ಇವುಗಳಿಗೆ ಎಲ್ಲರು ಅರ್ಹರು ಇದ್ದವರು ಇಲ್ಲದವರಿಗೆ ಕೊಟ್ಟರೆ ಬಡತನ ಇರುವುದಿಲ್ಲ. ದಾನಿಗಳು ನೀಡಿದ ಸಹಾಯವನ್ನು ನಾವು ಜಾತಿ, ಮತ, ಬಡವ, ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಸಮನಾಗಿ ಹಂಚುತ್ತೇವೆ.  ಸನ್ಯಾಸಿಯ ಜೋಳಿಗೆ ಯಾವತ್ತೂ ಕಾಲಿ ಇರಬೇಕು ಭಗವಂತ ಖಾಲಿಯಾದ ಜೋಳಿಗೆಯನ್ನು ಮತ್ತೆ ತುಂಬಿಸುತ್ತಾನೆ. ಮಕ್ಕಳು ಕಲಿತು ದೊಡ್ಡ ದೊಡ್ಡ ಸಾಧನೆ ಮಾಡಿ ಒಳ್ಳೆಯ ಸಾಧಕರಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರಮೇಶ ಜಂಗಲ್ ವಹಿಸಿದ್ದರು. 

ರಮೇಶ ಜಂಗಲ್ ಹಾಗೂ ಅವರ ಗೆಳೆಯರ ಬಳಗ ಸಮವಸ್ತ್ರ ವಿತರಿಸಲು ಧನ ಸಹಾಯ ಮಾಡಿದರು. 

ಈ ವೇಳೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಬಿ. ಎಸ್ ವಾಲಿ, ಸಹ ಶಿಕ್ಷಕರಾದ ಬಿ. ಎನ್ ನಾಡಗೌಡರ, ಎಂ. ಡಿ. ಪಾಟೀಲ್, ಅಶೋಕ್ ತಿಪ್ಪಶೆಟ್ಟಿ ಆಸ್ಟ್ರೇಲಿಯಾದ ಸಾಧಕ ( ಶ್ರೀ

ಸಮವಸ್ತ್ರ ಪಡೆದು ಪರಸ್ಪರ ಖುಷಿ ಹಂಚಿಕೊಳ್ಳುತ್ತಿರುವ ವಿದ್ಯಾರ್ಥಿಗಳು

ವಿಜಯಾನಂದ ಮಹಾಸ್ವಾಮಿಗಳ ಶಿಷ್ಯ)ರಾದ ಕೆಮೆರಾನ್ ಬೇವಿನಕೊಪ್ಪ ಮತ್ತು ಅಮಟೂರು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇನ್ನೂ ಅನೇಕರು ಇದ್ದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";