ಬೈಲಹೊಂಗಲ :ಭಾರತದ ಕೀರ್ತಿಯನ್ನು ವಿಶ್ವಾದ್ಯಂತ ಖ್ಯಾತಿ ಗೊಳಿಸಿದ ಶ್ರೇಯಸ್ಸು ನಮ್ಮ ನೆಚ್ಚಿನ ಪ್ರಧಾನಿ ಮೋದಿಜಿಯವರಿಗೆ ಸಲ್ಲುತ್ತದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ್ ಪಾಟೀಲ್ ಹೇಳಿದರು
ಪಟ್ಟಣದ ಹೊಸೂರ ರಸ್ತೆಯ ವಿಜಯ್ ಸೋಶಿಯಲ್ ಹಾಲ್ ನಲ್ಲಿ ಮಂಗಳವಾರ ನಡೆದ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು ಮತ ನೀಡುವುದರೊಂದಿಗೆ ಬಿಜೆಪಿಗೆ ಅಭೂತಪೂರ್ವ ಗೆಲವು ಕೊಟ್ಟ ನಂತರ ದೇಶದ ಜನತೆಯ ವಿಶ್ವಾಸವನ್ನು ದ್ವಿಗುಣಗೊಳಿಸಿ ಪ್ರಪಂಚದಲ್ಲಿಯೇ ಭಾರತ ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಪ್ರಧಾನಿಗಳ ಶ್ರಮ ನಾವೆಲ್ಲರೂ ಮೆಚ್ಚಲೇಬೇಕು ಎಂದರು.
ಬಿಜೆಪಿ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದ ಪಕ್ಷವಾಗಿದ್ದು ದಿನದ 24 ಗಂಟೆ ವರ್ಷವೆಲ್ಲ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುವ ಶಿಸ್ತುಬದ್ಧ ಏಕೈಕ ಪಕ್ಷ ಬಿಜೆಪಿ ಯಾಗಿದ್ದು ಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಹಾಗೂ ತಾಲೂಕ ಪಂಚಾಯಿತಿ ಜಿಲ್ಲಾ ಪಂಚಾಯಿತಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ನಿಟ್ಟಿನಲ್ಲಿ ಕಾರ್ಯಕರ್ತರು ಪರಿಶ್ರಮಿಸಬೇಕೆಂದು ಕರೆಕೊಟ್ಟರು.
ರಾಜ್ಯ ಬಿಜೆಪಿ ವಕ್ತಾರರಾದ ಎಂ ಬಿ ಜಿರಲಿ ಕಾರ್ಯಕ್ರಮ ಉದ್ಘಾಟನೆ ಗೊಳಿಸಿ ಮಾತನಾಡಿ ಬೈಲಹೊಂಗಲದಲ್ಲಿ ದಿವಂಗತ ನ್ಯಾಯವಾದಿ ಸಿಎಂ ಪಾಟೀಲರ ಎಮ್ ವಾಯ್ ಸೋಮಣ್ಣವರ ಎಸ್ ಡಿ ಮಲ್ಲಪ್ಪನವರ ವಕೀಲರ ನೇತೃತ್ವದಲ್ಲಿ ಬಿಜೆಪಿ ಪಾರ್ಟಿ ಕಟ್ಟಿದ ಗಂಡುಮೆಟ್ಟಿನ ಬೈಲಹೊಂಗಲ ವಿಧಾನಸಭಾ ಕ್ಷೇತ್ರ ಬರುವ ದಿನಗಳಲ್ಲಿ ಬಿಜೆಪಿ ಕ್ಷೇತ್ರವಾಗಿ ಬದಲಾಗಲು ನಾಯಕರು ಹಾಗೂ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವಂತೆ ಹೇಳಿದರು.
ಕಾಡಾ ಅಧ್ಯಕ್ಷ ಡಾ ವಿ. ಆಯ್. ಪಾಟೀಲ್, ಮಾಜಿ ಶಾಸಕ ಜಗದೀಶ್ ಮೆಟಗುಡ್ ಮಾತನಾಡಿ ಬೈಲಹೊಂಗಲ ಮತಕ್ಷೇತ್ರದಲ್ಲಿ ಕಾರ್ಯಕರ್ತರು ಪರಿಶ್ರಮ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಬಲದಿಂದ ಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೋಹಿತೆ ಸಂದೀಪ್ ದೇಶಪಾಂಡೆ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆ ಮಾತನಾಡಿದರು ವೇದಿಕೆಯ ಮೇಲೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ್ ಉಪಾಧ್ಯಕ್ಷೆ ರತ್ನಾ ಗೋದಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ್, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್ ಎಸ್ ಸಿದ್ದನಗೌಡರ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಜಿಲ್ಲಾ ಕಾರ್ಯದರ್ಶಿ ಗುರು ಮೆಟಗುಡ್, ವಿಶೇಷ ಆಹ್ವಾನಿತ ಗುರುಪಾದ ಕಳ್ಳಿ ಇದ್ದರು.
ಕಾರ್ಯಕ್ರಮದಲ್ಲಿ ಮಂಡಲ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರ್ಗಿ ಮಲ್ಲಿಕಾರ್ಜುನ್ ದೇಸಾಯಿ ಮಡಿವಾಳಪ್ಪ ಹೋಟಿ, ಮುರಿಗೆಪ್ಪ ಗುಂಡ್ಲೂರು, ಗೌಡಪ್ಪ ಹೊಸಮನಿ ಶಾಂತ ಮಡ್ಡಿಕಾರ್, ಸುಭಾಷ್ ತುರಮರಿ ಸಂತೋಷ್ ಹಡಪದ್, ಜಗದೀಶ್ ಬೂದಿಹಾಳ, ದಯಾನಂದ್ ಪರ ಶೆಟ್ಟರ್ ಸುರೇಶ್ ಮಾಟೂಳ್ಳಿ, ಸಚಿನ್ ಪಠಾತ, ಮಡಿವಾಳಪ್ಪ ಚಿಕ್ಕೂಪ್ಪ ಬೈಲಹೊಂಗಲ ಮಂಡಲದ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು
ಚಿದಂಬರ್ ಮೇಟಿ ವಂದೇ ಮಾತರಂ ಹೇಳಿದರು ಈರಣ್ಣ ಬಿಡಿ ವಂದಿಸಿದರು ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು.
“ವೀರರಾಣಿ ಕಿತ್ತೂರು ಚೆನ್ನಮ್ಮನ ನಾಡಾಗಿರುವ ಏಳು ಜಿಲ್ಲೆಗಳನ್ನು ಬಾಂಬೆ ಕರ್ನಾಟಕ ಎಂದು ಗುರುತಿಸುವ ಪರಂಪರೆಗೆ ತಿಲಾಂಜಲಿ ನೀಡಿ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡುವ ವಿಚಾರವನ್ನು ಸಾಕಾರಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಭೆಯಲ್ಲಿ ಕೃತಜ್ಞತೆಯನ್ನು ಸಲ್ಲಿಸುವುದರೊಂದಿಗೆ ವಿಜಯೋತ್ಸವ ಆಚರಿಸಲಾಯಿತು.”
(ವರದಿ ಈರಣ್ಣಾ ಹುಲ್ಲೂರ)