ಬಸವ ಕ್ರಾಂತಿ ಸುದ್ದಿ
ಚನ್ನಮ್ಮನ ಕಿತ್ತೂರು(ನ,1): ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಅಕ್ಟೋಬರ್ 30 ರಂದು “ಕನ್ನಡ ನಾಡು ನುಡಿ ಏಕೀಕರಣ” ಎಂಬ ವಿಷಯದ ಕುರಿತು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕಾ ಮಟ್ಟದಲ್ಲಿ ಒಟ್ಟು 824 ವಿಧ್ಯಾರ್ಥಿಗಳು ಭಾಗವಹಿಸಿದ್ದರು ಪ್ರತಿ ತಾಲೂಕಿನಿಂದ 10 ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಿ ಒಟ್ಟು 70 ವಿಧ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಕಳುಹಿಸಲಾಗಿತ್ತು.
ಜಿಲ್ಲಾ ಮಟ್ಟದ 70 ವಿಧ್ಯಾರ್ಥಿಗಳು ಭಾಗವಹಿಸದ್ದು ಒಟ್ಟು 10 ವಿಧ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 10 ವಿಧ್ಯಾರ್ಥಿಗಳಲ್ಲಿ ಕಿತ್ತೂರು ತಾಲೂಕಿನಿಂದ 3 ವಿಧ್ಯಾರ್ಥಿಗಳು ಪ್ರಶಸ್ತಿ ಪಡೆದಿದ್ದಾರೆ.
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ಕಾದರವಳ್ಳಿ ಸರಕಾರಿ ಪ್ರೌಡ ಶಾಲೆಯ ವಿಧ್ಯಾರ್ಥಿ ಪ್ರವೀಣ ನೀರಲಕಟ್ಟಿ ದ್ವಿತಿಯ ಸ್ಥಾನವನ್ನು ಪಡೆದುಕೊಂಡಿದ್ದಾನೆ. ಕಿತ್ತೂರು ಸರಕಾರಿ ಪ್ರೌಡ ಶಾಲೆಯ ಐಶ್ವರ್ಯ ಪೂಜೇರ ಮತ್ತು ಕಾದರವಳ್ಳಿ ಸರಕಾರಿ ಪ್ರೌಡ ಶಾಲೆಯ ರಚನಾ ಪೂಜೇರ ಉಭಯ ವಿಧ್ಯಾರ್ಥಿನಿಯರು ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಬಳಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪಡೆದ ವಿಧ್ಯಾರ್ಥಿ ವಿಧ್ಯಾರ್ಥಿನಿಯರನ್ನ ಶಾಲಾ ಶಿಕ್ಷಕರು ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅಭಿನಂದಿಸಿದ್ದಾರೆ.