ಟೀಕೆಟ್ ಗೊಂದಲ ನನಗಿಲ್ಲ: ಅರುಣ ಶಾಹಾಪೂರ

ಉಮೇಶ ಗೌರಿ (ಯರಡಾಲ)

ಬೆಳಗಾವಿ (ಅ.19): ಇಂದು ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅರುಣ ಶಾಹಾಪೂರವರು ಪಕ್ಷ ನನ್ನ 35ನೇ ವಯಸ್ಸಿನಲ್ಲೇ ಒಬ್ಬ ಕಾರ್ಯಕರ್ತನೆಂದು ಗುರ್ತಿಸಿ ನನಗೆ ಟಿಕೆಟ್ ಕೊಟ್ಟಿದೆ.ನನಗೆ ತುಂಬಾ ವಿಶ್ವಾಸವಿದೆ. ನನ್ನ ತೃಪ್ತಿದಾಯಕ ಕೆಲಸಕ್ಕೆ ನೋಡಿ ಮನ್ನಣೆ ನೀಡುತ್ತದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಅರುಣ ಶಾಹಾಪೂರ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬರಿಗೆ ಕೇಳುವ ಹಕ್ಕು ಇದೆ. ಸ್ಪರ್ಧಿಸುವ ಹಕ್ಕೂ ಇದೆ. ಆದರೆ ಸಹಜವಾಗಿ ಸ್ಪರ್ಧಿಸುವವರು ನಾನೇನು ಮಾಡುತ್ತೇನೆಂದು ತಿಳಿದುಕೊಳ್ಳುವುದು ಮುಖ್ಯ. ನಾನೇನು ಮಾಡಿದ್ದೇನೆ ಎಂದು ಶಿಕ್ಷಕರಿಗೂ ಗೊತ್ತಿದೆ.

ಅರುಣ ಶಾಹಾಪೂರ ವಿಧಾನ ಪರಿಷತ್ತಿನಲ್ಲಿ ಮೊದಲನೆಯ ಶಾಸಕ ನಾನಾಗಿದ್ದೇನೆ. ಇನ್ನೂ ರಾಷ್ಟ್ರೀಯ ಶಿಕ್ಷಣ ನೀತಿ (NEP)ಜಾರಿಗೆ ತರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಆ ಭಾಗ್ಯ ನನಗೆ ಕೊಟ್ಟಿದೆ. ಅಷ್ಟರಮಟ್ಟಿಗೆ ಶಿಕ್ಷಣ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ.

ಆ ಕಾರಣಕ್ಕಾಗಿ ಪಕ್ಷದಲ್ಲಿ ನನ್ನನ್ನು ಎರಡು ಬಾರಿ ಶಾಸಕ ಸ್ಥಾನಕ್ಕೆ ಆಯ್ಕೆ ಮಾಡಿ‌ ಸೇವೆ ಮಾಡಲು ಅವಕಾಶ ಕೊಟ್ಟಿತ್ತು. ಅದನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸಿರುವ ತೃಪ್ತಿ ನನಗಿದೆ.ಈ ಭಾಗದ ಪ್ರತಿಯೊಬ್ಬ ಶಿಕ್ಷಕರಿಗೆ ಅರುಣ ಶಾಹಾಪೂರ ಏನು ಮಾಡಿದ್ದಾರೆಂಬುವುದು ಅವರಿಗೆ ತಿಳಿದ ವಿಷಯ.ಎಂದು
ತಮ್ಮ ಇಂಗಿತವನ್ನು ವ್ಯಕ್ತ ಪಡಿಸಿದರು.

ಜೊತೆಗೆ ಮಾದ್ಯಮ ಮುಖಾಂತರ ಅಕ್ಟೋಬರ್ ತಿಂಗಳಲ್ಲಿ ಸಾಕಷ್ಟು ರಜೆ ದಿನಗಳು ಬಂದಿರುವುದರಿಂದ ಚುನಾವಣಾ ಆಯೋಗವು ಶಿಕ್ಷಕರ ಕ್ಷೇತ್ರದ ಮತದಾರರ ನೊಂದಣಿ ಕಾರ್ಯವನ್ನು ಒಂದು ತಿಂಗಳುಗಳ ಕಾಲ ಮುಂದುಡಲು ಮನವಿ ಮಾಡಿದರು.

 

 

 

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";