ಕಡಸಗಟ್ಟಿ ಕೆರೆಗೆ ವಿಷ ಬೆರೆಸಿ ಲಕ್ಷಾಂತರ ಮೀನುಗಳ ಮಾರಣ ಹೋಮ

ಉಮೇಶ ಗೌರಿ (ಯರಡಾಲ)

ಕೆರೆಯಲ್ಲಿ ವಿಷಪೂರಿತ ನೀರು ಕುಡಿದು ಮೃತಪಟ್ಟ ಮೀನಿನ ರಾಶಿ

ಚನ್ನಮ್ಮನ ಕಿತ್ತೂರು: ಸಮೀಪದ ಕಡಸಗಟ್ಟಿ ಕೆರೆಗೆ ವಿಷಪೂರಿತ ರಾಸಾಯನಿಕ ಬೆರೆಸಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆದಿದೆ.

ಬೈಲಹೊಂಗಲ ತಾಲೂಕಿನ ಕಡಸಗಟ್ಟಿ ಗ್ರಾಮದಲ್ಲಿ ಬೃಹದಾಕಾರದ ಕೆರೆ ಇದ್ದು ಆ ಕೆರೆಗೆ ಕಿಡಗೇಡಿಗಳು ವಿಷ ಬೆರೆಸಿದ್ದಾರೆ ಇದರ ಪರಿಣಾಮ ಕೆರೆಯಲ್ಲಿ ಇದ್ದ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಮೀನುಗಳು ಮೃತಪಟ್ಟಿವೆ.

ಬುಡರಕಟ್ಟಿ, ಕಡಸಗಟ್ಟಿ, ತುರಕರ ಶಿಗೀಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ಗ್ರಾಮಸ್ಥರು ಸೇರಿ ಉಪಯೋಗಿಸುವ ಕೆರೆ ಇದಾಗಿದ್ದು. ಕೆರೆಯಲ್ಲಿ ಮೀನುಗಾರಿಕೆ ಮಾಡಲು ಎಲ್ಲ ಗ್ರಾಮಗಳ ಗ್ರಾಮಸ್ಥರ ಮತ್ತು ಹಿರಿಯರ ಒಪ್ಪಿಗೆ ಪ್ರಕಾರ ಪ್ರತಿವರ್ಷ ಟೆಂಡರ್ ಕರೆಯಲಾಗುತ್ತಿತ್ತು.ಮೀನುಗಾರಿಕೆ ಟೆಂಡರ್‌ನಿಂದ ಬಂದ ಲಾಭಾಂಶವನ್ನು ಗ್ರಾಮದ ಅಭಿವೃದ್ಧಿಗಾಗಿ ಉಪಯೋಗಿಸಲಾಗುತ್ತಿತ್ತು,

ಕೆರೆಯಲ್ಲಿ ಮೀನುಗಾರಿಕೆ ಮಾಡುವ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ವೈಷಮ್ಯ ಹಿನ್ನೆಲೆ ಈ ಹೇಯ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಘಟನಾ ಸ್ಥಳಕ್ಕೆ ಬೈಲಹೊಂಗಲ ತಾಲೂಕಾ ದಂಡಾಧಿಕಾರಿಳು ಆಗಮಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

Share This Article
";