ಸ್ವಚ್ಚತಾ ಕೆಲಸಗಳು ಸೇರಿದಂತೆ ನಿರ್ವಹಣೆ ಬಗ್ಗೆ ಗೂಗಲ್ ಮೀಟ್ ನಡೆಸಿದ:ಕ್ಷೇತ್ರ ಶಿಕ್ಷಣಾಧಿಕಾರಿ

ಉಮೇಶ ಗೌರಿ (ಯರಡಾಲ)

ಕಿತ್ತೂರ (ಅ.19):ಶಾಲೆಗಳು ಹಂತಹಂತವಾಗಿ ತೆರೆಯುತ್ತಿವೆ.ಮಕ್ಕಳ ಕಲರವ ಶಾಲಾ ಅಂಗಳದಲ್ಲಿ ಕೇಳುತ್ತದೆ.ಶೈಕ್ಷಣಿಕ ವ್ಯವಸ್ಥೆಗೆ ಮತ್ತೆ ಮರುಜೀವ ಬರುತ್ತಿದೆ.ಇದರ ಜೊತೆಗೆ ಬಿಸಿಯೂಟ ವ್ಯವಸ್ಥೆಯೂ ಪ್ರಾರಂಭವಾಗುವ ನಿಟ್ಟಿನಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿವೆ.

ಆದ ಕಾರಣ ತಾಲೂಕಿನ ಎಲ್ಲ ಶಾಲೆಗಳ ಮುಖ್ಯ ಗುರುಗಳ ಸಭೆಯನ್ನು ಕರೆದು ಅನುಸರಿಸಬೇಕಾದ ಕ್ರಮಗಳು ಸ್ವಚ್ಚತಾ ಕೆಲಸಗಳು ಸೇರಿದಂತೆ ನಿರ್ವಹಣೆ ಬಗ್ಗೆ ಸರಕಾರಿ ಹಾಗೂ ಅನುದಾನಿತ ಶಾಲಾ ಪ್ರಧಾನಗುರುಗಳ ಗೂಗಲ್ ಮೀಟ್ ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಯಿತು.

ಬೈಲಹೊಂಗಲ ತಾಲೂಕಾ ನಿರ್ವಹಣಾ ಅಧಿಕಾರಿ
ರುದ್ರೇಶ ಸಂಪಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ ತಾಲೂಕಿನ ಅಕ್ಷರ ದಾಸೋಹ ಅಧಿಕಾರಿ ಪ್ರಕಾಶ ಮೆಳವಂಕಿ,ಕ್ಷೇತ್ರ ಸಮನ್ವಯಾಧಿಕಾರಿ ಶಿವಶಂಕರ ಹಾದಿಮನಿ.ಶಿಕ್ಷಣಸಂಯೋಜಕರಾದ ಮಹೇಶ ಹೆಗಡೆ ಉಪಸ್ಥಿತಿಯಲ್ಲಿ ಸಭೆ ನಡೆಸಲಾಯಿತು.

  ಬಿಸಿಯೂಟ ತಯಾರಿಕಾ ಕೇಂದ್ರವನ್ನು ಪರೀಶೀಲಿಸುತ್ತಿರುವುದು

ಇದಕ್ಕೂ ಮೊದಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಎಮ್ ಕೆ ಹುಬ್ಬಳ್ಳಿ ಬಿಸಿಯೂಟ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲಿಸಿದರು.ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದನ್ನು ಗಮನಿಸಿ ಶಿಕ್ಷಣಾಧಿಕಾರಿ ಪ್ರಶಂಸಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";