Saturday, September 28, 2024

ರಾಜ್ಯ

ಸಾವಿರ ಜನರ ವಿರುದ್ಧ ಎಫ್‌ಐಆರ್ ; ಬಂಧನ ಭೀತಿಯಲ್ಲಿ ಊರನ್ನೇ ಬಿಟ್ಟ ಗ್ರಾಮಸ್ಥರು…!

ಕೋಲಾರ: ಕಳೆದ 2 ದಿನಗಳ ಹಿಂದೆ ನಡೆದ ಆ ಒಂದು ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಯಾರನ್ನು ಯಾವಾಗ ಪೊಲೀಸರು ಬಂಧಿಸ್ತಾರೋ ಅನ್ನೋ ಆತಂಕದಲ್ಲಿ ಊರಿಗೆ ಊರೇ ಖಾಲಿಯಾಗಿದೆ. ಜನರು ಆ ಗ್ರಾಮವನ್ನೇ ತೊರೆದಿದ್ದು, ಅಲ್ಲಿ ಸ್ಮಶಾನ ಮೌನ ಆವರಿಸಿದೆ. ಬಿಕೋ ಎನ್ನುತ್ತಿರುವ ಗ್ರಾಮ, ಪೊಲೀಸರಿಂದ ಗ್ರಾಮದಲ್ಲಿ ಮೊಕ್ಕಾಂ, ಗ್ರಾಮಕ್ಕೆ ಗ್ರಾಮವನ್ನೇ ತೊರೆದಿರುವ ಗ್ರಾಮಸ್ಥರು....

ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ; ಸಚಿವ ಸತೀಶ್‌ ಜಾರಕಿಹೊಳಿ ಘೋಷಣೆ.

ಬೆಂಗಳೂರು: ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ. ಹೊಸದಾಗಿ ಜಾರಿ ಮಾಡುತ್ತಾ ಇದ್ದೇವೆ. ಗುತ್ತಿಗೆದಾರರಿಗೆ ಆ ಹೊಣೆ ನೀಡಲಾಗುವುದು. ಇನ್ನು ಟೆಂಡರ್ ಕರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ...

ಕೋಟ್ಯಾಂತರ ರೂಪಾಯಿ ವಂಚನೆ..! ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಏನಿದೆ…..?

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರಿನ ಉದ್ಯಮಿ, ಬಿಜೆಪಿ ಮುಖಂಡರೊಬ್ಬರಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚಿಸಿರುವ ಆರೋಪದಡಿ ಪ್ರಚೋದನಾಕಾರಿ ಭಾಷಣಕಾರ್ತಿ ಹಾಗೂ ಹಿಂದೂ ಫೈಯರ್‌ ಬ್ರ್ಯಾಂಡ್‌  ಖ್ಯಾತಿಯ  ಚೈತ್ರಾ ಕುಂದಾಪುರ ಸೇರಿದಂತೆ ಈ ಕೃತದಲ್ಲಿ ಭಾಗಿಯಾದ 07 ಜನರನ್ನು ಬೆಂಗಳೂರು ಸಿಸಿಬಿ ವಿಭಾಗದ ಪೊಲೀಸರು ಮಂಗಳವಾರ ಉಡುಪಿಯಲ್ಲಿ ಬಂಧಿಸಿದ್ದಾರೆ. ಕೇಂದ್ರದ...

ಹೆಣ್ಣು ಮಕ್ಕಳು ಕಣ್ಣೀರಿಟ್ಟರೆ ಮನೆಗೆ, ರೈತರು ಕಣ್ಣೀರಿಟ್ಟರೆ ದೇಶಕ್ಕೆ ಒಳ್ಳೆಯದಾಗುವುದಿಲ್ಲ; ಸಂಜೀವಕುಮಾರ ತಿಲಗರ ಅಭಿಮತ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನ ಕಿತ್ತೂರು: ತಾಲೂಕಿನ ಎಂ.ಕೆ.ಹುಬ್ಬಳ್ಳಿ  ಖಾಸಗಿ ಶಾಲೆಯೊಂದರಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಪದಾಧಿಕಾರಿಗಳ ತರಬೇತಿ, ವಿಷೇಶ ಚೇತನರಿಗೆ ಹಾಗೂ ವಯಸ್ಕರರಿಗೆ ಸಲಕರಣೆ ವಿತರಣಾ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಸಿರು ಕ್ರಾಂತಿ ಪತ್ರಿಕೆ ವರದಿಗಾರರಾದ ಸಂಜೀವಕುಮಾರ ತಿಲಗರ ಅವರು...

22ನೇ ವಯಸ್ಸಿನಲ್ಲಿ ಎಮ್ಮೆ ಕದ್ದವ 80ರಲ್ಲಿ ಸಿಕ್ಕ..!

ಬೀದರ್: 58 ವರ್ಷಗಳಿಂದ ಪೊಲೀಸರ  ಕೈಗೇ ಸಿಗದೇ ನ್ಯಾಯಾಲಯಕ್ಕೂ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳ್ಳನನ್ನು ಬೀದರ್ ಪೊಲೀಸರು  ಬಂಧಿಸಿದ್ದಾರೆ. ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ 1965ರಲ್ಲಿ 2 ಎಮ್ಮೆ, 1 ಕರು ಕದ್ದಿದ್ದರು. ಎಮ್ಮೆ ಮಾಲೀಕ ಮರಳೀಧರಾವ್ ಕುಲಕರ್ಣಿ ಎಂಬುವರು ಭಾಲ್ಕಿಯ ಮಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ...

ಸಿಎಂ ಭರವಸೆ ಹುಸಿ.! ಮತ್ತೆ ಮೀಸಲಾತಿಗೆ ಸ್ವಾಮೀಜಿ ಹೋರಾಟ: ವಿನಯ್​ ಕುಲಕರ್ಣಿ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹಾಗೂ ಕೆಲವು ಕಾನೂನು ತೊಡಕನ್ನು ಸರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದಿಂದ ಮನವಿ ಮಾಡಲಾಗಿತ್ತು. ಅಧಿವೇಶನ ಮುಗಿದ ಬಳಿಕ ಕಾನೂನು ತಜ್ಞರ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದು ಆ ಭರವಸೆ ಹುಸಿಯಾಗಿದೆ. ಇದರಿಂದಾಗಿ ಶ್ರೀಗಳು ನಿಪ್ಪಾಣಿಯಿಂದ ಹೋರಾಟ ಪ್ರಾರಂಭ...

ವಿರೋಧ ಪಕ್ಷದ ನಾಯಕನ ನೇಮಿಸದ ಬಿಜೆಪಿ: ನಾಯಕರು ಹಾಗೂ ಕಾರ್ಯದರ್ಶಿಗೆ ಲೀಗಲ್‌ ನೋಟಿಸ್‌

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರವನ್ನು ಹಿಡಿಯುವಲ್ಲಿ ಸೋತು ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಬಿಜೆಪಿ ಈವರೆಗ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಸೇರಿದಂತೆ ಮುಖ್ಯ ಕಾರ್ಯದರ್ಶಿಗಳಿಗೆ ಶನಿವಾರ ಲೀಗಲ್‌...

ಬಿಜೆಪಿ ಎಂಪಿ 25 ಸೀಟುಗಳನ್ನು ಗೆದ್ದರೆ ರಾಜ್ಯ ಸರ್ಕಾರ ಢಮಾರ್‌.: ಯತ್ನಾಳ್‌ ಭವಿಷ್ಯ

ಕೊಪ್ಪಳ (ಸೆ.10) ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸೀಟುಗಳನ್ನು ಗೆದ್ದರೆ ರಾಜ್ಯ ಸರ್ಕಾರ ಢಮಾರ್‌ ಎನ್ನುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಶನಿ​ವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತಿದೆ. ಶಾಸಕರಿಗೆ ಅನುದಾನವೇ ಸಿಗು​ತ್ತಿಲ್ಲ. ಇದರಿಂದ ಅವರು ಹಳ್ಳಿಗಳಿಗೆ ಹೋಗಲು ಆಗುತ್ತಿಲ್ಲ. ಇದರಿಂದ ಕಾಂಗ್ರೆಸ್‌ ಶಾಸಕರು ಸಹ ಅಸಮಾಧಾನಗೊಂಡಿದ್ದಾರೆ...

ಸೋಮೇಶ್ವರ ಶುಗರ್ ಫ್ಯಾಕ್ಟರಿ ಎಲೆಕ್ಷನ್; ಯುವ ನಾಯಕ ಪಿಕೆಗೆ ಒಲಿಯಲಿದೆಯೇ ಲಕ್…?

ವರದಿ:ಉಮೇಶ ಗೌರಿ (ಯರಡಾಲ) ಬೆಂಗಳೂರಿಗೆ ಡಿಕೆ-ಕಿತ್ತೂರಿಗೆ ಪಿಕೆ! ರೈತ ಪರ ಕನಸು ಹೊತ್ತ ಉತ್ಸಾಹಿ ಮುಖಂಡ ಪುಂಡಲೀಕ! ಬೈಲಹೊಂಗಲದ ʼಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆʼ ಆಡಳಿತ ಮಂಡಳಿಗೆ ರವಿವಾರ ಸೆಪ್ಟೆಂಬರ್ 10 ರಂದು (ನಾಳೆಯೇ) ಚುನಾವಣೆ ನಡೆಯಲಿದೆ. ಅಖಾಡದಲ್ಲಿ ಪ್ರಮುಖವಾಗಿ ಮೂರು ಪೆನೆಲ್ ಅಧಿಕಾರದ ಗದ್ದುಗೆ ಏರಲು ಹಣಾಹಣಿಯಲ್ಲಿ ಸ್ಪರ್ಧೆಗೆ ಧುಮುಕಿವೆ! ʼಕಿಸಾನ್ ಸಹಕಾರʼ ಪೆನೆಲ್ ನೊಂದಿಗೆ...

ಅದೃಷ್ಟ ಪರೀಕ್ಷೆಗೆ ಇಳಿದ ಪ್ರಕಾಶ ಜಪ್ತಿ; ಪತ್ನಿ ಗೆಲುವಿಗೆ ಪತಿ ಕಮ್ ಮಾಜಿ ಡೈರೆಕ್ಟರ್ ಪ್ರಚಾರ!

ವರದಿ:♦ಉಮೇಶ ಗೌರಿ, (ಯರಡಾಲ) ಸೋಮೇಶ್ವರ ಫ್ಯಾಕ್ಟರಿ ಎಲೆಕ್ಷನ್‌; ಮಾಜಿ ಡೈರೆಕ್ಟರ್ ಪ್ರಕಾಶ ಜಪ್ತಿ ಪತ್ನಿ ಗೆಲುವಿಗೆ ಬಿಗ್‌ ಪ್ಲ್ಯಾನ್‌.! ಬೈಲಹೊಂಗಲ ಮಾಜಿ ಶಾಸಕ ದಿವಂಗತ ರಮೇಶ ಬಾಳೇಕುಂದರಗಿ ಅವರು ಹುಟ್ಟು ಹಾಕಿದ್ದ ಬೈಲಹೊಂಗಲದ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ರವಿವಾರ ಸೆಪ್ಟೆಂಬರ್‌ 10 ರಂದು (ನಾಳೆಯೇ) ಚುನಾವಣೆ ನಡೆಯಲಿದೆ. ಪ್ರಮುಖವಾಗಿ ಮೂರು ಪೆನೆಲ್‌ಗಳು...
- Advertisement -spot_img

Latest News

ಗಡಿಭಾಗದ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಆರೋಗ್ಯಕ್ಕಾಗಿ ಜನರ ಪರದಾಟ

ವರದಿ: ಉಮೇಶ ಗೌರಿ. ಬೆಳಗಾವಿ : ಭೌಗೋಳಿಕವಾಗಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯು ಎರಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಆಡಳಿತ ಸುಧಾರಣೆಗಾಗಿ...
- Advertisement -spot_img
error: Content is protected !!