Friday, June 28, 2024

ಪಂಜಾಬ ಗಡಿ ಭದ್ರತಾ ಪಡೆಯ ಯೋಧ ಉದಯ ಅನಾರೋಗ್ಯದಿಂದ ಸಾವು

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು : ಅನಾರೋಗ್ಯದ ಹಿನ್ನೆಲೆಯಲ್ಲಿ ಪಂಜಾಬ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ನಲ್ಲಿ ಸೇವೆ ಸಲ್ಲಿಸುತ್ತಿರುವ ತಾಲೂಕಿನ  ಗಿರಿಯಾಲ  ಗ್ರಾಮದ ಯೋಧ ಉದಯ ಪುಂಡಲೀಕಪ್ಪ ಗಾಳಿ (42) ಸಾವನ್ನಪ್ಪಿದ್ದಾರೆ.

ಅವರು ತಂದೆ, ತಾಯಿ, ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು. ಓರ್ವ ಸಹೋದರ, ಇಬ್ಬರು ಸಹೋದರಿಯರು ಸೇರಿದಂತೆ  ಅಪಾರ ಬಂಧು ಬಳಗ ಹಾಗೂ ಮಿತ್ರರನ್ನು ಅಗಲಿದ್ದಾರೆ.

ಮೃತ ಉದಯ ಗಾಳಿ ಅವರು 20 ಎಪ್ರೀಲ 1982 ರಂದು ಜನಸಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ವಗ್ರಾಮ ಗಿರಿಯಾಲದಲ್ಲಿ ಮುಗಿಸಿ  ಪ್ರೌಡ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಿತ್ತೂರಿನಲ್ಲಿ ಮುಗಿಸಿ 2002 ರಲ್ಲಿ ಬಿಎಸ್‌ಎಫ್‌ನಲ್ಲಿ ಸೇವೆಗೆ ಸೇರಿಕೊಂಡು ಜಮ್ಮು ಕಾಶ್ಮೀರ, ಓಡಿಸ್ಸಾ, ರಾಜಸ್ಥಾನ, ತ್ರಿಪುರಾ ಸೇರಿದಂತೆ ಇತರ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

      ಮೃತನ ಕುಟುಂಬಕ್ಕೆ ಬಿಎಸ್ಎಫ್ ಅಧಿಕಾರಿಗಳು ರಾಷ್ಟ್ರಧ್ವಜ ಹಸ್ತಾಂತರಿಸುತ್ತಿರುವುದು

ಉದಯ ಗಾಳಿ  ಅವರ ಪಾರ್ಥಿವ ಶರೀರವನ್ನು ರಾಣಿ ಚನ್ನಮ್ಮ ಸೇನಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ವಾದ್ಯಗಳನ್ನು ಬಾರಿಸುತ್ತಾ ಮೆರವಣೆಗೆಯ ನೇತೃತ್ವ ವಹಿಸಿದ್ದರು. ಕಿತ್ತೂರು ಪಟ್ಟಣ ಗಿರಿಯಾಲ ಹಾಗೂ ಚನ್ನಾಪೂರ ಗ್ರಾಮಗಳಲ್ಲಿ ಮೆರವಣಿಗೆ ಮುಖಾಂತರ ಪಾರ್ಥಿವ ಶರೀರವನ್ನು ಸ್ವಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಅವರ ಮರಣದ ನಂತರ ತಾಲೂಕಾಡಳಿತ ಮತ್ತು ಬಿಎಸ್‌ಎಫ್ ಅಂತಿಮ ವಿಧಿವಿಧಾನದ ಸಮಯದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಸಲಾಯಿತು ಮತ್ತು ರಾಷ್ಟ್ರಧ್ವಜವನ್ನು ಅವರ ತಂದೆ, ತಾಯಿ, ಪತ್ನಿ, ಮಕ್ಕಳಿಗೆ ಹಸ್ತಾಂತರಿಸಲಾಯಿತು.

    ಮೃತನ ಪಾರ್ಥಿವ ಶರೀರಕ್ಕೆ ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ ಗೌರವ ಸಲ್ಲಿಸುತ್ತಿರುವುದು

ಈ ವೇಳೆ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದಿದ್ದು, ಬಿಎಸ್ಎಫ್ ಅಧಿಕಾರಿಗಳು, ಉಪ ವಿಭಾಗ ಅಧಿಕಾರಿ ಪ್ರಭಾವತಿ ಪಕ್ಕಿರಪೂರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವಾ ನಾವಲಗಟ್ಟಿ, ಅನಿಲ ಎಮ್ಮಿ, ಬಸವರಾಜ ಸಂಗೊಳ್ಳಿ, ಕೃಷ್ಣಾ ಬಾಳೆಕುಂದರಗಿ, ಅಸ್ಫಾಕ ಹವಾಲ್ದಾರ, ರಾಜು ಜಾಂಗಟಿ, ಫಕ್ಕಿರಪ್ಪ ಜಾಂಗಟಿ, ಸುರೇಶ ಜಾಂಗಟಿ, ರವಿ ಪರಸನಟ್ಟಿ, ಸುರೇಶ ತಳವಾರ, ಗುರುಶಿದ್ದ ಜಾಂಗಟಿ, ಬಸವರಾಜ ಗಾಳಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ರಾಣಿ ಚನ್ನಮ್ಮ ಸೇನಾ ತರಬೇತಿ ಕೇಂದ್ರದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ನಿವೃತ್ತ ಸೇನಾಧಿಕಾರಿಗಳು, ಕಿತ್ತೂರು ಹಾಗೂ ಸುತ್ತಮುತ್ತ ಇರುವ ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!