Friday, June 28, 2024

ದುರ್ಬಲವಾದ ಮನಸ್ಸುಗಳನ್ನು ಆಳುವ ಧರ್ಮ ವೈದಿಕ ಧರ್ಮ. ವೈದಿಕ ಧರ್ಮವನ್ನು ಎದುರಿಸಲು ಸಶಕ್ತವಾದ ಧರ್ಮವನ್ನು ಕೊಟ್ಟವರು ವಿಶ್ವಗುರು ಬಸವಣ್ಣನವರು; ನಿಜಗುಣಾನಂದ ಶ್ರೀಗಳು

ಚನ್ನಮ್ಮನ ಕಿತ್ತೂರು: ಜಗತ್ತಿನಲ್ಲಿ ಏನು ಬೇಕಾದರು ಸಿಗಬಹುದು ಆದರೆ ಬಸವಾದಿ ಶರಣರ ಪ್ರವಚನ ಸಿಗುವುದು ಕಷ್ಟಸಾದ್ಯ ಕಾರಣ ಇಂತಹ ಶರಣರ ಜೀವನ ದರ್ಶನ ಪ್ರವಚನದ ಲಾಭವನ್ನು ಪಡೆದುಕೊಳ್ಳಬೇಕು ಎಂದು ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳು ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಶ್ರೀ ಬಸವನಗರದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವ ಮಂಟಪ ಸಹಾಯಾರ್ಥವಾಗಿ ಶ್ರೀ ಗುರು ಬಸವೇಶ್ವರ ಅಭಿವೃದ್ಧಿ ಸೇವಾ ಸಂಘ ಹಾಗೂ ನಾಡಿನ ಬಸವ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 14 ದಿನಗಳ ಕಾಲ ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಶ್ರೀ ಬಸವಾದಿ ಪ್ರಮಥರ ಹಾಗೂ ಸಮಕಾಲಿನ ಶರಣರ “ಶರಣರ ಜೀವನ ದರ್ಶನ”  ಪ್ರವಚನದ ಸಮಾರೋಪ ಸಮಾರಂಭದ ದಿವ್ಯ ಸಾನಿದ್ಯ ವಹಿಸಿ ಮಾತನಾಡಿದರು.

ಬಸವಣ್ಣನವರ ಮನೆಗೆ ಬಂದ ಕಳ್ಳರನ್ನು ಶರಣರನ್ನಾಗಿ ಮಾಡಿ ನಾಡಿಗೆ ಶ್ರೇಷ್ಠ ಧರ್ಮವನ್ನು ಕೊಡುವ ಮೂಲಕ ವಿಶ್ವಕ್ಕೆ ಗುರುವಾದರು. ಬಸವ ತತ್ವ ಪ್ರವಚನ ಮಾಡುವ ಸ್ವಾಮಿಗಳಿಗೆ ಮುಂಬರುವ ದಿನಗಳಲ್ಲಿ ಧರ್ಮದ ವಿರೋಧಿಗಳು ಎಂದು ಬಿಂಬಿಸುತ್ತಾರೆ. ಇದು ನಮ್ಮ ಮೇಲೆ ಅಲ್ಲಾ ಬಸವಣ್ಣನವರ ಮೇಲೆ ಗಧಾಪ್ರಹಾರ ನಡೆಸಲು ಎಲ್ಲ ತರಹದ ಕುತಂತ್ರಗಳು ನಡೆದಿವೆ ಎಂದು ಹೇಳಿದ ಅವರು ದುರ್ಭಲವಾದ ಮನಸ್ಸುಗಳನ್ನು ಆಳುವ ಧರ್ಮ ಇದ್ದರೆ ಅದು ವೈದಿಕ ಧರ್ಮ. ಇಂತಹ ಧರ್ಮವನ್ನು ಎದುರಿಸಲು ಸಶಕ್ತವಾದ ಧರ್ಮವನ್ನು ಬಸವಣ್ಣನವರು ಕೊಟ್ಟರು ಅದುವೇ ಲಿಂಗಾಯತ ಧರ್ಮ ಎಂದರು.

14 ದಿನಗಳ ಕಾಲ “ಶರಣ ಜೀವನ ದರ್ಶನ” ಪ್ರವಚನ ಮಾಡಿದ ಹುಕ್ಕೆರಿ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣ ಬಸವ ಮಹಾಸ್ವಾಮಿಗಳು ಮಾತನಾಡಿ 12 ನೇ ಶತಮಾನದಲ್ಲಿ ಗುರು ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಆಧ್ಯಾತ್ಮಿಕ, ದಾರ್ಮಿಕ, ಸಾಹಿತ್ಯಿಕ ಸೇರಿದಂತೆ ಇನ್ನೂ ಅನೇಕ ವಿಚಾರಗಳ ಕುರಿತು ಕ್ರಾಂತಿಯೆ ನಡೆಯಿತು. ಇದರಿಂದ ಅನೇಕರಲ್ಲಿ ಜಾಗೃತಿ ಮೂಡಿತು. ಪರಂಪರಾಗತವಾಗಿ ಬಂದ ವರ್ಣಾಶ್ರಮ ಧರ್ಮದಲ್ಲಿ ದಲಿತರು, ಅಸ್ಪೃಶ್ಯರು, ಸ್ತ್ರಿಯರಿಗೂ ಸೇರಿದಂತೆ ಅನೇಕರಿಗೆ ಮನ್ನಣೆ ಇಲ್ಲದಿರುವದರಿಂದ ಜನರು ಕಂಗಾಲಗಿರುವದನ್ನು ತಿಳಿದು ಬಸವಣ್ಣನವರು ಸೇರಿದಂತೆ ಅನೇಕ ಶರಣರು ಅಸಮಾನತೆ ಅಳಿಸಿ ಎಲ್ಲರಿಗೂ ಸ್ವತಂತ್ರವನ್ನು ನೀಡಿ ಸಮಾನತೆಯನ್ನು ತರಬೇಕು ಎಂದು ಹೋರಾಡಿದರು. ಯಾವುದೆ ವ್ಯಕ್ತಿ ಹುಟ್ಟಿನಿಂದ ಕುಲಜನಾಗಿರುವುದಿಲ್ಲ ಅವನು ಆಚಾರ ವಿಚಾರಗಳಿಂದ ಕುಲಜನಾಗುತ್ತಾನೆ. ಶರಣರು ಕಾಯಕ, ದಾಶೋಹ ಮಾಡುವ ಮೂಲಕ ಸಮಾಜದಲ್ಲಿ ಸಮಾನತೆ ತರುವಲ್ಲಿ ಹಗಲಿರಳು ಶ್ರಮಿಸಿದರು ಎಂದರು.

ಈ ವೇಳೆ ನೇಗಿನಹಾಳ ಶ್ರೀ ಮಡಿವಾಳೇಶ್ವರ ಮಠದ ಶ್ರೀ ಬಸವ ಪ್ರಕಾಶ ಮಹಾಸ್ವಾಮಿಗಳು, ನಿವೃತ್‌ ಆರೋಗ್ಯ ಇಲಾಖೆ ಅಧಿಕಾರಿ ಮಹೇಶ ಚಟ್ನಳ್ಳಿ, ಡಿ ಎಫ್‌ ಓ ಶಂಕರ ಕಲ್ಲೋಳಕರ ಮಾತನಾಡಿದರು.

ಈ ವೇಳೆ ಖ್ಯಾತ ಸಂಗೀತ ಕಲಾವಿದರಾದ  ವಿರೇಶ ಕಟ್ಟಿಸಂಗಾವಿ ಅವರ ತಬಲಾನಾದ ಹಾಗೂ ರವಿಕುಮಾರ ಆಳಂದ ಅವರ ವಚನ ಗಾಯನ ಹಾಗೂ ವಿವಿಧ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಸೇರಿದ ಪ್ರೇಕ್ಷಕರನ್ನು ತಲೆದೂಗಿಸುವಂತೆ ಮಾಡಿದರು.

ಈ ವೇಳೆ ಅಶೋಕ ಅಳ್ನಾವರ, ಮಡಿವಾಳಪ್ಪ ಕೋಟಿ,  ಮಡಿವಾಳಪ್ಪ ಅಸುಂಡಿ, ಬಸವರಾಜ ಜಕಾತಿ,  ಅಶೋಕ ಕುಗಟಿ, ಈರಣ್ಣ ಗಾಮನ್ನವರ, ನಿಂಗಪ್ಪ ಕುಗಟಿ, ಮಲ್ಲೇಶ ಗಾಮನ್ನವರ, ಬಸವರಾಜ ಕಡೆಮನಿ, ಬಸವರಾಜ ಜಕಾತಿ, ಶಂಕರ ಕೊಳ್ಳಿ, ಸಣ್ಣಸೋಮಪ್ಪ ಪರಮ್ಮಣ್ಣವರ ರಾಜೇಶ್ವರಿ ಕೊಳ್ಳಿ, ಬಸವರಾಜ ಅವರಾದಿ, ಮಹಾಂತೇಶ ಕರಬಸನ್ನವರ, ಲಲಿತಾ ಕಡೆಮನಿ,  ಗೀತಾ ಕುಗಟಿ, ಸುಮಿತ್ರಾ ಪಾಟೀಲ, ಭಾವನಾ ಕಂಬಿ, ಪ್ರಭಾವತಿ ಪಾಟೀಲ, ನೇತ್ರಾ ಗಂಡಲಾಟಿ, ವೀಣಾ ನಾಡಗೌಡರ, ಶೈಲಾ ಕರಿಕಟ್ಟಿ, ಸೇರಿದಂತೆ ಕಿತ್ತೂರು ಹಾಗೂ ಸುತ್ತಮುತ್ತಲಿನ ಬಸವಾಭಿಮಾನಿಗಳು ಇದ್ದರು.

ಜಿಲ್ಲೆ

ರಾಜ್ಯ

error: Content is protected !!