Saturday, June 29, 2024

ವರ್ಷದ ಕೊನೆ ದಿನದಂದು ದಾಖಲೆ ಮದ್ಯ ವಹಿವಾಟು ಎಂ ಎಸ್ ಐ ಎಲ್: ಒಂದೇ ದಿನ ₹18.85 ಕೋಟಿ ಮದ್ಯ ಮಾರಾಟ

ಬೆಂಗಳೂರು : ರಾಜ್ಯದಲ್ಲಿರುವ 1031 ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆಗಳಲ್ಲಿ 2023ರ ಕೊನೆಯ ದಿನವಾದ ಭಾನುವಾರ (ಡಿ.31) ₹18.85 ಕೋಟಿ ಮೊತ್ತದ ದಾಖಲೆಯ ಮದ್ಯ ಮಾರಾಟವಾಗಿದೆ ಎಂದು ಎಂ ಎಸ್ ಐ ಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ತಿಳಿಸಿದ್ದಾರೆ.

ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ ಇದು ಸುಮಾರು ₹ 4.34 ಕೋಟಿ ಹೆಚ್ಚಳವಾಗಿದೆ. 2022ರ ಡಿ. 31ರಂದು ₹14.51 ಕೋಟಿ ಮೊತ್ತದ ಮದ್ಯ ಮಾರಾಟವಾಗಿತ್ತು ಎಂದು ಅವರು ಹೇಳಿದ್ದಾರೆ.

ರಾಯಚೂರಿನ ರೈಲ್ವೆ ನಿಲ್ದಾಣದ ಬಳಿ ಇರುವ ಮಳಿಗೆಯಲ್ಲಿ ಅತ್ಯಂತ ಹೆಚ್ಚು, ಅಂದರೆ ₹11.66 ಲಕ್ಷ ರೂಪಾಯಿಗಳ ಮದ್ಯ ಮಾರಾಟವಾಗಿದ್ದರೆ, ಅದೇ ನಗರದ ಗಂಝ್ ರಸ್ತೆಯ ಮಳಿಗೆಯಲ್ಲಿ ₹9.96 ಲಕ್ಷದ ಮದ್ಯ ಬಿಕರಿಯಾಗಿ ಎರಡನೇ ಸ್ಥಾನದಲ್ಲಿದೆ. ಜಿಲ್ಲಾವಾರು ಮಾರಾಟದಲ್ಲಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅತ್ಯಧಿಕ, ಅಂದರೆ ₹1.82 ಕೋಟಿಯ ಮದ್ಯ ಮಾರಾಟ ಕಂಡಿದೆ. ಕಳೆದ ವರ್ಷದ ಇದೇ ದಿನ ಈ ಜಿಲ್ಲೆಯಲ್ಲಿ ರೂ 1.35 ಕೋಟಿಯ ಮದ್ಯ ಮಾರಾಟವಾಗಿತ್ತು.

ಉನ್ನತ ದರ್ಜೆಗೇರಿಸಿ ಜ.1ರಂದು ಉದ್ಘಾಟನೆಗೊಂಡ ಬೆಂಗಳೂರು ಬಸವೇಶ್ವರನಗರದ ಎಂ ಎಸ್ ಐ ಎಲ್ ಬೋಟಿಕ್ ನಲ್ಲಿ ಭಾನುವಾರ ಆದ ಮದ್ಯ ಮಾರಾಟದ ಮೊತ್ತ ರೂ 3.5 ಲಕ್ಷ. ಇಲ್ಲಿ ಕಳೆದ ವರ್ಷದ ಇದೇ ದಿವಸ ಈ ಮಳಿಗೆಯಲ್ಲಿ ರೂ. 2.59
ಲಕ್ಷದ ಮದ್ಯ ಮಾರಾಟವಾಗಿತ್ತು ಎಂದು ಮನೋಜ್ ಹೇಳಿದ್ದಾರೆ.

ಉಳಿದ ದಿನಗಳಂದು ರಾಜ್ಯದ ಎಲ್ಲಾ ಎಂಎಸ್ಐಎಲ್ ಮಳಿಗೆಗಳಿಂದ ಆಗುವ ಮದ್ಯ ಮಾರಾಟದ ವಹಿವಾಟು ರೂ 8 ಕೋಟಿಯಷ್ಟಿರುತ್ತದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಇದು ರೂ 18.8 ಕೋಟಿಗೆ ಏರಿಕೆಯಾಗಿದೆ.

ಜಿಲ್ಲೆ

ರಾಜ್ಯ

error: Content is protected !!