Saturday, June 29, 2024

“ಶರಣರ ಜೀವನ ದರ್ಶನ” ಪ್ರವಚನ ನಿಮಿತ್ತ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಜರುಗಿತು

ಚನ್ನಮ್ಮನ ಕಿತ್ತೂರು: ಭಗವಂತನನ್ನು ಸಾಕ್ಷತ್ಕಾರ ಮಾಡಿಕೊಳ್ಳವ ಸಾಧನವೇ ಲಿಂಗದೀಕ್ಷೆಯಾಗಿದೆ

ಎಂದು ಹುಕ್ಕೇರಿ ತಾಲೂಕಿನ ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶ್ರೀ ಶರಣ ಬಸವ ಮಹಾಸ್ವಾಮಿಗಳು ಹೇಳಿದರು.

 

ಪಟ್ಟಣದ ಶ್ರೀ ಬಸವ ನಗರದಲ್ಲಿ 15 ದಿನಗಳಿಂದ ನಡೆದ ” ಶರಣರ ಜೀವನ ದರ್ಶನ” ಪ್ರವಚನದ ನಿಮಿತ್ತ ನಡೆದ ಸಾಮೂಹಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದಲ್ಲಿ ಹೇಳಿದರು.

ಬಸವ ಧರ್ಮ ಪರಂಪರೆಯಲ್ಲಿ ಲಿಂಗದೀಕ್ಷೆಗೆ ತನ್ನದೇಯಾದ ಮಹತ್ವ ಪಡೆದುಕೊಂಡಿದೆ. ಲಿಂಗದೀಕ್ಷೆಯನ್ನು ಪಡೆಯಲು ಯಾವುದೇ ಜಾತಿ ಮತ ಪಂಥ ಬೇದವಿಲ್ಲದೆ ಲಿಂಗ ದೀಕ್ಷೆ ಪಡೆದು ಲಿಂಗ ಪೂಜಾ ಅನುಷ್ಠಾನ ಮಾಡಬಹುದು, ದೀಕ್ಷೆ ಎಂಬುವ ಪದಕ್ಕೆ ತನ್ನದೇಯಾದ ಮಹತ್ವವಿದ್ದು ಲಿಂಗದೀಕ್ಷೆಯಿಂದ ಶಿವಜ್ಞಾನ ಲಭಿಸಿ ಪಾಶ ಬಂಧನಗಳು ಮರೆಯಾಗುವವು.ಲಿಂಗ ಪೂಜೆ ಮಾಡಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಶುದ್ಧಿಯಾಗುತ್ತವೆ. ಮನುಷ್ಯನ ಅಂಗಾಂಗಳಲ್ಲಿ ಯಾವುದೂ ಶ್ರೇಷ್ಠವಲ್ಲ ಯಾವುದೂ ಕನಿಷ್ಟವಲ್ಲ; ಎಲ್ಲವೂ ಶ್ರೇಷ್ಠವೇ. ವಿಭೂತಿ ದುರ್ಗುಣಗಳನ್ನು ಸುಟ್ಟು ಹಾಕುವುದುದು. ವಿಧಿಲಿಖಿತವನ್ನು ಅಳಿಸಿ ಶಿವಲಿಖಿತವನ್ನು ಬರೆಯುವ ಸಾಮರ್ಥ್ಯ ವಿಭೂತಿಗೆ ಇದೆ. ಲಿಂಗ ದೀಕ್ಷೆಯನ್ನು ಪಡೆದು ನಿತ್ಯ ಪೂಜಿಸಿದರೆ ಮಾನಸಿಕವಾಗಿ ದೃಢತೆ ಹೊಂದುವುದರ ಜೊತೆಗೆ ಅಂತರಂಗ-ಬಹಿರಂಗ ಶುದ್ದಿಯಾಗಲು ಸಾಧ್ಯವಿದೆ. ಲಿಂಗದೀಕ್ಷೆಯ ಮೂಲಕ ದೇವರ ಅರಿವಾದರೆ ಅವರು ದೇವರನ್ನು ಹುಡುಕಿಕೊಂಡು ಅನ್ಯ ಗುಡಿ ಗುಂಡಾರಗಳನ್ನು ಸುತ್ತುವುದಿಲ್ಲ. ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದಲ್ಲಿ ಉಳಿದ ಧರ್ಮಗಳಂತೆ ಕಠಿಣ ನಿಯಮಗಳಿಲ್ಲ ಸರಳ ಹಾಗೂ ಸುಂದರವಾಗಿ ಆಚರಿಸಿದರೆ ಭಗವಂತನ ಒಲಿಮೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ ಅವರು ನೂರಾರು ಶರಣ ಶರಣೆಯರಿಗೆ ಲಿಂಗ ದೀಕ್ಷಾ ಸಂಸ್ಕಾರ ನೀಡಿದರು.

ಈ ಸಂದರ್ಭದಲ್ಲಿ ಅಶೋಕ ಅಳ್ನಾವರ, ಮಡಿವಾಳಪ್ಪ ಕೋಟಿ, ಮಡಿವಾಳಪ್ಪ ಅಸುಂಡಿ, ಬಸವರಾಜ ಜಕಾತಿ, ಅಶೋಕ ಕುಗಟಿ, ಈರಣ್ಣ ಗಾಮನ್ನವರ, ನಿಂಗಪ್ಪ ಕುಗಟಿ, ಮಲ್ಲೇಶ ಗಾಮನ್ನವರ, ಬಸವರಾಜ ಕಡೆಮನಿ, ರಾಜೇಶ್ವರಿ ಕೊಳ್ಳಿ, ಲಲಿತಾ ಕಡೆಮನಿ, ಗೀತಾ ಕುಗಟಿ ಅವರುಗಳು ಕ್ರೀಯಾಮೂರ್ತಿಗಳಾಗಿ ಕಾರ್ಯ ನಿರ್ವಹಿಸಿದರು.

ಈ ವೇಳೆ ಬಸವರಾಜ ಜಕಾತಿ, ಶಂಕರ ಕೊಳ್ಳಿ, ಸುಮಿತ್ರಾ ಪಾಟೀಲ, ಪ್ರಭಾವತಿ ಪಾಟೀಲ, ನೇತ್ರಾ ಗಂಡಲಾಟಿ, ವೀಣಾ ನಾಡಗೌಡರ, ಶೈಲಾ ಕರಿಕಟ್ಟಿ, ಸಣ್ಣಸೋಮಪ್ಪ ಪರಮ್ಮಣ್ಣವರ ಸೇರಿದಂತೆ ಇನ್ನೂ ಅನೇಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!