Wednesday, July 3, 2024

ದಕ್ಷ ಪ್ರಾಮಾಣಿಕ ಮತ್ತು ವಿಶ್ವಾಸರ್ಹತೆಗೆ ಅಂಚೆ ಇಲಾಖೆ: ನಿಜಗುಣಾನಂದ ಶ್ರೀಗಳು.

ಚನ್ನಮನ ಕಿತ್ತೂರು: ಕಿತ್ತೂರು ದಕ್ಷ ಪ್ರಾಮಾಣಿಕ ಮತ್ತು ವಿಶ್ವಾಸಾರ್ಹತೆಗೆ ಅಂಚೆ ಇಲಾಖೆ ಹೆಸರಾಗಿದ್ದು, ಹಳ್ಳಿಯಿಂದ
ದಿಲ್ಲಿಯವರೆಗೆ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುವ ಏಕೈಕ ಇಲಾಖೆ ಎಂದು ಬೈಲೂರು ನಿಷ್ಕಲ  ಮಂಟಪದ ನಿಜಗುಣಾನಂದ ಮಹಾಸ್ವಾಮೀಜಿ ಅವರು ಬೈಲೂರು ನಿಷ್ಕಲ ಮಂಟಪದಲ್ಲಿರುವ  ಹರ್ಡೇಕರ ಮಂಜಪ್ಪನವರ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ ‘ಗ್ರಾಮೀಣ ಅಂಚೆ ಜೀವವಿಮಾ ಮೇಳ’ದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಇಲಾಖೆಯು ಸಾದು ಸಂತರ, ಮಹಾತ್ಮರ ಮತ್ತು ಹೋರಾಟಗಾರರ  ಅಂಚೆ ಚೀಟಿ ಬಿಡುಗಡೆ ಮಾಡಿ ರಾಷ್ಟ್ರದಾದ್ಯಂತ ಅವರನ್ನು ಪರಿಚಯ ಮಾಡುವ ಮಹತ್ತರ ಕೆಲಸವನ್ನು ಇಲಾಖೆ ಮಾಡುತ್ತದೆ ಎಂದ ಅವರು ಗ್ರಾಹಕರಿಗೆ ಕಷ್ಟ ಕಾಲದಲ್ಲಿ ಅನುಕೂಲವಾಗಲೆಂದು ಜೀವವಿಮಾ ಪಾಲಿಸಿಗಳನ್ನು ಸಹ ಪರಿಚಯಿಸಿದೆ ಎಲ್ಲರೂ ಇದರ ಲಾಭ ಪಡೆದುಕೊಳ್ಳಬೇಕು ಎಂದರು.

ಬೆಳಗಾವಿ ವಿಭಾಗದ ಅಂಚೆ ಅಧೀಕ್ಷಕ ಎಚ್.ಬಿ. ಹಸಬಿ ಮಾತನಾಡಿ ಇಲಾಖೆಯು ಹಲವು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದ್ದು ಬೈಲೂರ ಗ್ರಾಮವನ್ನು ಸಂಪೂರ್ಣ ವಿಮಾ ಗ್ರಾಮವನ್ನಾಗಿ ಆಯ್ಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಅಂಚೆ ಇಲಾಖೆಯ ಯೋಜನೆಗಳ ಕುರಿತು ಅಂಚೆ ಅಧಿಕಾರಿಗಳಾದ ಬಿ.ಬಿ. ಹಿತ್ತಲಮನಿ ಹಾಗೂ ಎಫ್. ಕೆ. ಮುಶನ್ನವರ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ  ಕಲ್ಲಪ್ಪ ಕಟಗಿ, ಆರ್.ಜಿ. ಮೊರಬದ, ಕೆ. ಎಸ್. ಕುರಗುಂದ, ನಿಂಗಪ್ಪ ಪತ್ರಿ, ವಿರುಪಾಕ್ಷಿ ಅಂಬವ್ವಗೊಳ, ಪಿಡಿಓ ಜಯರಾಮ ಕಾದ್ರೊಳ್ಳಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು, ಕಿತ್ತೂರು ಹಾಗೂ ಇಟಗಿ ಅಂಚೆ ಉಪ ವಿಭಾಗದ ಅಧಿಕಾರಿಗಳು ಇದ್ದರು.ಬೈಲೂರು ಪೋಸ್ಟ್ ಮಾಸ್ಟರ್‌ ರವೀಂದ್ರ ಅಗ್ನಿಹೋತ್ರಿ ಸ್ವಾಗತಿಸಿದರು, ಶಿಕ್ಷಕ ವಿವೇಕ ಕುರಗುಂದ ನಿರೂಪಿಸಿದರು,
ಶಿಕ್ಷಕ ಗಂಗಾಧರ ಹನುಮಸಾಗರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!