Friday, June 28, 2024

ಅ 4 ರಂದು ಕಿತ್ತೂರು ಉತ್ಸವ ಪೂರ್ವಭಾವಿ ಸಭೆ

ಸುದ್ದಿ ಸದ್ದು ನ್ಯೂಸ್‌ 

ಚನ್ನಮ್ಮನ ಕಿತ್ತೂರು:

ಪ್ರತಿವರ್ಷ ಪದ್ದತಿಯಂತೆ ಈ ವರ್ಷ ಕೂಡಾ ಉತ್ತರ ಕರ್ನಾಟಕ ನಾಡ ಹಬ್ಬ ಎಂದು ಪ್ರಸಿದ್ದವಾದ ಐತಿಹಾಸಿಕ ಕಿತ್ತೂರು ರಾಣಿ ಚನ್ನಮ್ಮನ ಉತ್ಸವವನ್ನು ಆಚರಿಸು ವಿಷಯದಲ್ಲಿ ಚರ್ಚಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

ಭಾರತ ಸ್ವಾತಂತ್ರ‍್ಯ ಹೋರಾಟದ ಪ್ರಥಮ ವೀರ ಮಹಿಳೆ, ವೀರ ರಾಣಿ ಕಿತ್ತೂರ ಚನ್ನಮ್ಮನವರ ಗೌರವಾರ್ಥ ಪ್ರತಿ ವರ್ಷ ಅಕ್ಟೋಬರ 23 ರಿಂದ 3 ದಿನಗಳ ಕಾಲ ಐತಿಹಾಸಿಕ ಕಿತ್ತೂರಿನ ಕೋಟೆ ಆರವರಣದಲ್ಲಿ ಬೆಳಗಾವಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯ ಇಲಾಖೆ ಸಹಯೋಗದಲ್ಲಿ ಕಿತ್ತೂರ ಉತ್ಸವವನ್ನು ಆಚರಿಸಲಾಗುತ್ತದೆ.

    ಕಿತ್ತೂರು ರಾಣಿ ಚನ್ನಮ್ಮನ ಅಶ್ವಾರೂಡ ಮೂರ್ತಿ

ಈ ವರ್ಷ ಕಿತ್ತೂರ ಚನ್ನಮ್ಮನವರ ಉತ್ಸವವನ್ನು ಆಚರಿಸುವ ವಿಷಯದಲ್ಲಿ ಚರ್ಚಿಸಲು ಹಾಗೂ ಸಾರ್ವಜನಿಕರ ಸಲಹೆ ಹಾಗೂ ಸೂಚನೆ ಪಡೆಯುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೀಶ ಪಾಟೀಲ ಅವರ ಆದೇಶದ ಮೇರೆಗೆ   ಅ 4 ರಂದು ಸಂಜೆ 4 ಗಂಟೆಗೆ ಅರಳಿಕಟ್ಟಿ ಸರ್ಕಲ್ಲಿನಲ್ಲಿ ಇರುವ ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.

ಕಾರಣ ಪೂರ್ವಭಾವಿ ಸಭೆಗೆ ಕಿತ್ತೂರು ನಾಡಿನ ಸಮಸ್ತ ಜನರು, ರಾಣಿ ಚನ್ನಮ್ಮನ ಅಭಿಮಾನಿಗಳು, ಜನಪ್ರತಿನಿಧಿಗಳು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕೋರಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!