Wednesday, July 3, 2024

10 ಬೈಕ್ ಕದ್ದ ಕಳ್ಳನನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿದ ಪೊಲೀಸರು

ಬೆಳಗಾವಿ ಅ.12: ಬೆಳಗಾವಿ ಸುತ್ತಮುತ್ತಲಿನ ವಾಹನ ಕಳ್ಳತನ ಮಾಡಿದ ಆರೋಪಿಯನ್ನು ಬೆಳಗಾವಿ ನಗರ ಪೊಲೀಸರು ಪತ್ತೆ ಮಾಡಿದ್ದು ಸುಮಾರು 7 ಲಕ್ಷ ರೂ ಬೆಲೆಯ ವಿವಿಧ ಕಂಪನಿಯ ಒಟ್ಟು ಹತ್ತು ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೋಲಿಸ್ ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಉಪವಿಭಾಗ ಮಾರ್ಕೆಟ್ ಪೊಲೀಸ್ ಆಯುಕ್ತ ಸದಾಶಿವ ಕಟ್ಟಿಮನಿ ಮತ್ತು ಮಾಳಮಾರುತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನೀಲ ಪಾಟೀಲ ಇವರ ನೇತೃತ್ವದ ತಂಡವು ಬೆಳಗಾವಿ ಶಹರ ಹಾಗೂ ಸುತ್ತಮುತ್ತ ಮೋಟಾರ ಸೈಕಲಗಳನ್ನು ಕಳ್ಳತನ ಮಾಡುವ ಆರೋಪಿತನನ್ನು ಪತ್ತೆ ಮಾಡಿ ಆರೋಪಿ ವಶದಲ್ಲಿದ್ದ ಸುಮಾರು ಏಳು ಪಕ್ಷ ರೂಪಾಯಿ ಬೆಲೆಯ ವಿವಿಧ ಕಂಪನಿಯ ಒಟ್ಟು ಹತ್ತು(10) ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡು ಆರೋಪಿತನನ್ನು  ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ತನಿಖೆ ಮುಂದುವರೆದಿರುತ್ತದೆ .

ಮಾಳಮಾರುತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನೀಲ ಪಾಟೀಲ ಹಾಗೂ ಪಿಎಸ್.ಐ.ಹೊನ್ನಪ್ಪ ತಳವಾರ,ಎಎಸಐ.ಎ.ಜಿ.ಕುಂಡೇದ ಎಂ.ಹೆಚ್ ನದಾಫ್, ಜಗನ್ನಾಥ ಭೋಸಲೆ,ಬಸವರಾಜ ಕಲ್ಲಪ್ಪನವರ, ಎಸ್.ಎಂ.ಗುಡದೈಗೋಳ, ಎಲ್.ಎಂ ಮುಶಾಪೂರ ಹಾಗೂ ಸಿಬ್ಬಂದಿಯವರು ಪ್ರಶಂಶನಿಯ ಕೆಲಸ ಮಾಡಿದ್ದು, ಸದರಿಯವರಿಗೆ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು(ಕಾಜಸು) ಮತ್ತು ಮಾನ್ಯ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ಬೆಳಗಾವಿ ನಗರ ರವರು ಮೆಚ್ಚುಗೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿರುತ್ತಾರೆ .

ಜಿಲ್ಲೆ

ರಾಜ್ಯ

error: Content is protected !!