Saturday, June 29, 2024

ಸೋಮೇಶ್ವರ ಶುಗರ್ ಫ್ಯಾಕ್ಟರಿ ಎಲೆಕ್ಷನ್; ಗೆದ್ದು ಬೀಗಿದ ಬಾಳೇಕುಂದರಗಿ ಪೆನೆಲ್!

ಬೈಲಹೊಂಗಲ: ಬೈಲಹೊಂಗಲ ಭಾಗದ ರೈತರ ಒಡನಾಡಿ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನವಣೆಯ ಫಲಿತಾಂಶ ಪ್ರಕಟಗೊಂಡಿದೆ.

ಕಳೆದ ಒಂದು ತಿಂಗಳಿನಿಂದ ತೀರ ಕುತೂಹಲ ಕೆರಳಿಸಿದ್ದ ಕಾರ್ಖಾನೆಯ ಆಡಳಿತ ಮಂಡಿಳಿಗೆ ಸೆ.10ರಂದು ಚುನಾವಣೆ ನಡೆದು ಹೊರಬಿದ್ದ ಫಲಿತಾಂಶದಲ್ಲಿ ಬಾಳೇಕುಂದರಗಿ ಸಹಕಾರ ಪೆನೆಲ್ ವಿಜಯಪತಾಕೆ ಹಾರಿಸಿದೆ.

ಆಡಳಿತ ಮಂಡಳಿಯ 17 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಾಳೇಕುಂದರಗಿ ಸಹಕಾರ ಪೆನೆಲ್, ಸೋಮೇಶ್ವರ ರೈತರ ಅಭಿವೃದ್ಧಿ ಸಹಕಾರ ಪೆನೆಲ್ ಮತ್ತು ಕಿಸಾನ್ ಸಹಕಾರ ಪೆನೆಲ್‌ಗಳು ಜಿದ್ದಾ ಜಿದ್ದಿಗೆ ಬಿದ್ದಿದ್ದವು. ಅಂತಿಮ ಹಣಾಹಣಿಯಲ್ಲಿ ಬಾಳೇಕುಂದರಗಿ ಪೆನೆಲ್‌ನ 9 ಅಭ್ಯರ್ಥಿಗಳು, ಹಾಗೂ ಸೋಮೇಶ್ವರ ರೈತರ ಅಭಿವೃದ್ಧಿ ಪೆನೆಲ್ ನ 8 ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ. ಕಿಸಾನ್ ಸಹಕಾರ ಪೆನೆಲ್ ಮುಗ್ಗರಿಸಿದೆ.

ಬಾಳೇಕುಂದರಗಿ ಪೆನೆಲ್‌ನ್: ಬಸವರಾಜ್ ಬಾಳೇಕುಂದರಗಿ, ರಾಜು ಕುಡಸೋಮಣ್ಣವರ, ಮಹಾಂತೇಶ್ ಮತ್ತಿಕೊಪ್ಪ, ಕಾರ್ತಿಕ ಮಲ್ಲೂರ, ಅಶೋಕ ಯರಗೊಪ್ಪ, ಮಲ್ಲಪ್ಪ ಅಷ್ಟಗಿ, ಅದೃಶ್ಯಪ್ಪ ಕೊಡಬಾಗಿ, ಅಶೋಕ ಬಾಳೇಕುಂದರಗಿ ಮತ್ತು ರಾಮಚಂದ್ರ ಕಕ್ಕಯ್ಯನವರ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ.

ಸೋಮೇಶ್ವರ ರೈತರ ಅಭಿವೃದ್ಧಿ ಪೆನೆಲ್‌ನ: ಉಮೇಶ ಬಾಳಿ, ರಾಚಪ್ಪ ಮಟ್ಟಿ, ಪ್ರಕಾಶ ಮೂಗಸಬಸವ, ಅನಿತಾ ಮೆಟಗುಡ್ಡ, ಕಸ್ತೂರಿ ಸೋಮನಟ್ಟಿ, ಸಣ್ಣ ಭೀಮಶೆಪ್ಪ ಅಂಬಡಗಟ್ಟಿ, ರಾಜಶೇಖರ ಎತ್ತಿನಮನಿ, ಶ್ರೀಶೈಲಪ್ಪ ಶರಣಪ್ಪನವರ ಗೆಲುವಿನ ನಗೆ ಬೀರಿದ್ದಾರೆ.

ಇನ್ನು 9 ನಿರ್ದೇಶಕ ಸ್ಥಾನಗಳನ್ನು ಒಡಲಿಗೆ ಹಾಕಿಕೊಂಡ ಬಾಳೇಕುಂದರಗಿ ಪೆನೆಲ್‌ನ ಚುನಾಯಿತ ಸದಸ್ಯರು, ಪೆನೆಲ್ ಬೆಂಬಲಿತ ಕಾರ್ಯಕರ್ತರು, ರೈತರು ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಮೂಲಕ ಮತ್ತೊಮ್ಮೇ ಬೈಲಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ಆಳುವುದಕ್ಕೆ ಬಾಳೇಕುಂದಗರಿ ಪೆನೆಲ್ ಅಣಿಯಾಗಿದೆ.

ಜಿಲ್ಲೆ

ರಾಜ್ಯ

error: Content is protected !!