Wednesday, July 3, 2024

ಬೆಳಗಾವಿಯಿಂದ ತಿರುಪತಿಗೆ ವಿಮಾನ ಸೇವೆಗೆ ಚಾಲನೆ ನೀಡಿದ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿ.(ಅ11): ಬೆಳಗಾವಿಯಿಂದ ತಿರುಪತಿಗೆ “ಸ್ಟಾರ್ಟ್ ಏರ್” ಫ್ಲೈಟ್ ತನ್ನ ಸೇವೆ ಪ್ರಾರಂಭಿಸುತ್ತಿದ್ದು, ಇಂದು ಸಂಸದೆ ಮಂಗಲ ಅಂಗಡಿ ಅವರು ವಿಮಾನಯಾನ ಸೇವೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಂಗಲ ಅಂಗಡಿ ಮಾತನಾಡಿ, ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದ್ದು, ಜೊತೆಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯ ಹಾಗೂ ದೇಶದಿಂದ ದೇಶಕ್ಕೆ ಓಡಾಟದ ಸಂಖ್ಯೆ ಹೆಚ್ಚಾಗುತ್ತದೆ. ಆ ನಿಟ್ಟಿನಲ್ಲಿ ನಗರಕ್ಕೆ ಇನ್ನೂ ಹೆಚ್ಚಿನ ವಿಮಾನಯಾನ ಸೇವೆಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ವಿಮಾನ ನಿಲ್ದಾಣದ ನಿರ್ದೇಶಕ ಮೌರ್ಯ, ಜಿಐಟಿ ಕೌನ್ಸಿಲ್ ನ ಅಧ್ಯಕ್ಷರಾದ ಎಂ.ಆರ್. ಕುಲಕರ್ಣಿ ಸೇರಿದಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!