Monday, July 1, 2024

ಕಿತ್ತೂರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಡಾ.ಜಗದೀಶ ಹಾರುಗೊಪ್ಪ ಕಣಕ್ಕೆ ! “ಅಧಿಕಾರಕ್ಕಾಗಿ ಅಲ್ಲ ಬದಲಾವಣೆಗಾಗಿ”ಸ್ಪರ್ಧೆ

ಬೆಳಗಾವಿ:ಕಿತ್ತೂರು ಬಿಜೆಪಿಯಲ್ಲಿ ಭಿನ್ನಮತ ಭುಗಿಲೇದಿದ್ದು ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು ಬಂಡಾಯ ಏಳುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೊ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಾಗಿದ್ದರೂ ಕೂಡ ಶಾಸಕ ಮಹಾಂತೇಶ ದೂಡ್ಡಗೌಡರಗೆ ಟಿಕೆಟ್‌ ನೀಡಿತ್ತು. ಈಗ ಅವರ ನಾಯಕತ್ವದ ವಿರುದ್ಧ ಹಾಗೂ ಆಡಳಿತ ವಿರೋಧಿ ಅಲೆ ಎದ್ದಿದ್ದರಿಂದ ಪಕ್ಷ ಹೊಸಬರಿಗೆ ಅವಕಾಶ ಕಲ್ಪಿಸಲು ಮುಂದಾದ ಸಮಯದಲ್ಲಿ ಡಾ.ಜಗದೀಶ ಹಾರುಗೊಪ್ಪ ಸೇರಿದಂತೆ ಕೆಲವು ಪಕ್ಷದ ಕಾರ್ಯಕರ್ತರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು ಎನ್ನಲಾಗುತ್ತಿದೆ. ಮತ್ತೆ ಪಕ್ಷ ಮಹಾಂತೇಶ ದೂಡ್ಡಗೌಡರ ಅವರಿಗೆ ಮಣೆ ಹಾಕಿದೆ. ಈ ಬಾರಿ ಕೂಡ ಟಿಕೆಟ್‌ ಕೈ ತಪ್ಪಿದರಿಂದ ಡಾ.ಜಗದೀಶ ಹಾರುಗೊಪ್ಪ ಅವರು ಅಧಿಕಾರಕ್ಕಾಗಿ ಅಲ್ಲ ಬದಲಾವಣೆಗಾಗಿ ಎಂದು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ದರಾಗಿದ್ದಾರೆ.

ಡಾ.ಜಗದೀಶ ಹಾರುಗೊಪ್ಪ ಅವರು ಎಂ.ಕೆ. ಹುಬ್ಬಳ್ಳಿಯ ನಿವಾಸದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿ ರಾಷ್ಟ್ರೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಸಾಮಾಜಿಕ ಸೇವೆಯನ್ನು ಗುರುತಿಸಿ ಪಕ್ಷದ ಟಿಕೆಟ್‌ ನೀಡಬೇಕು ವಿನಃ ದುಡ್ಡನ್ನು ಮಾನದಂಡವಾಗಿ ಪರಿಗಣಿಸಬಾರದು ಎಂದು ಕಿತ್ತೂರು ಮತಕ್ಷೇತ್ರದ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿ ಡಾ.ಜಗದೀಶ ಹಾರುಗೊಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇಂದಿನ ವ್ಯವಸ್ಥೆ ನೋಡಿದರೇ ಕೇವಲ ಬಂಡವಾಳಶಾಹಿಗಳು ಮಾತ್ರ ರಾಜಕಾರಣ ಮಾಡುವಂತಾಗಿದೆ. ಇದು ಪ್ರಜಾಪ್ರಭುತ್ವದ ದುರಂತವೇ ಸರಿ. ಇದೇ ಪರಿಸ್ಥಿತಿ ಮುಂದುವರೆದರೇ ಮುಂಬರುವ ಹತ್ತು ವರ್ಷಗಳಲ್ಲಿ ನಮ್ಮ ಸಮಾಜ ಅದೋತಿಗೆ ತಳ್ಳಲ್ಪಡುತ್ತದೆ. ಮದ್ಯಪಾನ ನಿಷೇದ, ಗೋಹತ್ಯಾ ನಿಷೇದ, ಪ್ಲ್ಯಾಸ್ಟಿಕ್‌ ನಿಷೇದ, ಸಾವಯವ ಕೃಷಿ, ಸುಸ್ಥಿರ ಬೆಳವಣಿಗೆ, ಆಡಳಿತ ಸುಧಾರಣೆ, ಭ್ರಷ್ಟಾಚಾರ ಮುಕ್ತ ಸಮಾಜ ಇವುಗಳು ಚುನಾವಣೆಯ ಮುಖ್ಯ ವಿಷಯಗಳಾಗಬೇಕು ಎಂದ ಅವರು, ನಮ್ಮ ಸಮಾಜ ಸುಭದ್ರವಾಗಬೇಕಾದಲ್ಲಿ ಒಳ್ಳೆಯ ಪ್ರಜ್ಞಾವಂತ ಜನ ರಾಜಕೀಯದಿಂದ ವಿಮುಕ್ತರಾಗಕೂಡದು ಎಂದರು.

ನಾನು ಕಳೆದ ಇಪ್ಪತ್ತು ವರ್ಷಗಳಿಂದ ಆರ್‌ಎಸ್‌ಎಸ್‌ ಸಂಘದ ಸ್ವಯಂ ಸೇವಕನಾಗಿ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದು, ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಪಕ್ಷ ಬೇರೆಯವರಿಗೆ ಮಣೆ ಹಾಕಿತ್ತು. ಈ ಸಲವೂ ನಾನು ಬಿಜೆಪಿ ಪಕ್ಷದ ಪ್ರಭಲ ಟಿಕೆಟ್‌ ಆಕಾಂಕ್ಷಿ ಆಗಿದ್ದರೂ ಮತ್ತೇ ಪಕ್ಷ ಟಿಕೆಟ್‌ ನೀಡದೇ ಇರುವುದು ತುಂಬಾ ಬೇಸರ ತರಿಸಿದ್ದು, ನನ್ನ ಮತಕ್ಷೇತ್ರದ ಹಿತೈಷಿಗಳ ಹಾಗೂ ಬೆಂಬಲಿಗರ ಆಶಯದಂತೆ ಅಧಿಕಾರಕ್ಕಾಗಿ ಅಲ್ಲ ಬದಲಾವಣೆಗಾಗಿ ಎಂದು ಈ ಸಲ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಮಾಡಿದ್ದು, ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಅವರು ತಿಳಿಸಿದರು. ಕಿತ್ತೂರಿನ ಪ್ರಜ್ಞಾವಂತ ಮತದಾರರು ಈ ಸಲ ತಮ್ಮ ಆತ್ಮಸಾಕ್ಷಿಯ ಮತ ನೀಡಿ, ನಿಮ್ಮ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಡಾ.ಜ್ಯೋತಿ ಹಾರುಗೊಪ್ಪ, ಮಹಾಂತೇಶ ಇಟ್ನಾಳ, ನಾಗೇಶ ಬಸರಕೋಡ ಸೇರಿದಂತೆ ಇತರರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!