Wednesday, July 3, 2024

ಆರಕ್ಷಕರೇ ಬಕ್ಷಕರಾದರೆ ?ಕಾಯುವವರೇ ಕಳ್ಳರಾದರೆ ? ರಕ್ಷಕರೇ ರಾಕ್ಷಸರಾದರೆ ? ಹೇಗೆ ಎಂದು ಪ್ರಶ್ನಿಸಿ ಸಿ ಎಮ್ ಗೆ ಮನವಿ ಮಾಡಿದ ಬಿ.ಎಂ.ಚಿಕ್ಕನಗೌಡರ

ಬೈಲಹೊಂಗಲ(ಅ.11):ಕಳ್ಳಸಾಗಾಣಿಕೆದಾರರಿಂದ ವಶಪಡಿಸಿ ಕೊಂಡ 1,5 ಕೆ.ಜಿ. ಗಾಂಜಾವನ್ನು ಪೋಲಿಸರೇ ಕಳ್ಳಸಾಗಾಣಿಕೆ ಮಾಡಿ ಸಿಕ್ಕಿಬಿದ್ದ ಪ್ರಕರಣ ಮುಖ್ಯಮಂತ್ರಿಗಳ ತವರಿನಲ್ಲಿಯೇ ದಿ. ಎಸ್. ಆರ್. ಬೊಮ್ಮಾಯಿ ಅವರ ಸಮಾಧಿಗೆ ಸಮೀಪದಲ್ಲಿ ಇರುವ ನವನಗರ ಪೋಲಿಸ್ ಠಾಣೆಯ ಆರಕ್ಷಕರಿಂದಲೇ ನಡೆದಿದೆ ಎಂದು ವರದಿಯಾಗಿದೆ .
ಇದಲ್ಲದೇ ಹಿಂದೆ ಬೆಳಗಾವಿಯ ಯಮಕನಮರ್ಡಿ ಪೋಲಿಸ್ ಠಾಣೆಯ ವಶದಲ್ಲಿದ್ದ ಮಂಗಳೂರ ಮೂಲದ ಕಾರಿನ ಎರ್ ಬ್ಯಾಗ್ನಲ್ಲಿ ಬಚ್ಚಿಟ್ಟಿದ್ದ 4900 ಗ್ರಾಂ. ಬಂಗಾರ ಕಳುವಾದ ಬಗ್ಗೆ ಪ್ರಕರಣ ದಾಖಲಾಗಿದೆ ಆದರೆ ಪೋಲಿಸ್ ರ ಮೇಲೆ ಯಾವುದೇ ಕ್ರಮ ಜರುಗಿಲ್ಲ.
ಆರಕ್ಷಕರೇ ಬಕ್ಷಕರಾದರೆ? ಕಾಯುವವರೇ ಕಳ್ಳರಾದರೆ? ರಕ್ಷಕರೇ ರಾಕ್ಷಸರಾದರೆ? ಹೇಗೆ ಪೊಲೀಸ್ ರಿಂದ ನಡೆದ ಇಂಥ ಪ್ರಕರಣಗಳನ್ನು ಪೊಲೀಸ್ ಇಲಾಖೆ ಯಿಂದ ತನಿಖೆ ನಡೆಸಿ ಇಂಥವರಿಗೆ ದೂಷಮುಕ್ತರೆಂದು ಸಾರುವ ಸರ್ಕಸ್ ಮಾಡದೆ ಸಿಓಡಿ ತನಿಖೆಗೆ ಒಪ್ಪಿಸುವದು ಸೂಕ್ತವೆಂದು “ಸಮಸ್ತ ಲಿಂಗಾಯತ ಹೋರಾಟ ವೇದಿಕೆ”ಯ ಮುಖ್ಯ ಸಂಘಟಿಕರಾದ ಬಿ.ಎಂ.ಚಿಕ್ಕನಗೌಡರ ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!