Monday, July 1, 2024

ರಾಜಗುರು ಸಂಸ್ಥಾನದ 13 ನೇ ಪೀಠಾಧಿಪತಿ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳ ಪಟ್ಟಾಧಿಕಾರದ 13 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ

ವರದಿ: ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್ ಚನ್ನಮ್ಮನಕಿತ್ತೂರ: ಶಾಂತ ಸ್ವಭಾವ ಮೌನವಾಗಿ ಕುಳಿತುಕೊಂಡು ಮಠದ ಏಳಿಗೆಗೆ ಹಗಲಿರುಳು ಶ್ರಮಿಸುವವರು, ಚಿಂತನೆ ಮಾಡುವವರು ಎಂದು ಗದಗ-ಡಂಬಳದ ಎಡೆಯೂರು ಶ್ರೀ ಜಗದ್ಗುರುತೋಟದಾರ್ಯ ಸಂಸ್ಥಾನ ಮಠದ ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಹೇಳಿದರು.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ಪಟ್ಟಾಧಿಕಾರದ 13 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ಶ್ರೀಗಳು ಕಿತ್ತೂರು ಪಟ್ಟಣದ ಹಿರಿಯರ, ಸ್ಥಳೀಯ ಶಾಸಕರ ಸಹಾಯ ಪಡೆದು ಬೆಂಗಳೂರು ಮುಖ್ಯಮಂತ್ರಿ ಕಚೇರಿಗೆ ತೆರಳಿ ಕಿತ್ತೂರು ಪ್ರಾಧಿಕಾರಕ್ಕೆ ಹಣತರಲು ಶ್ರಮವಹಿಸಿದರು. ಭಾರತ ಸ್ವಾತಂತ್ರ ಹೋರಾಟದ ಇತಿಹಾಸದಲ್ಲಿ ಕಿತ್ತೂರು ತನ್ನದೆಯಾದ  ಐತಿಹಾಸಿಕ ಸ್ಥಾನವನ್ನು ಹೊಂದಿದ್ದು ಕಿತ್ತೂರು ಸ್ವಾತಂತ್ರ‍ ಹೋರಾಟದಲ್ಲಿ ಕಲ್ಮಠದ ಪಾತ್ರವೂ ಅಷ್ಟೇ ಮುಖ್ಯವಾಗಿದೆ. ಅರಮನೆ-ಗುರುಮನೆ ಪರಂಪರೆಯ ಮೂಲಕ ಸಂಸ್ಥಾನದ ಮಾರ್ಗದರ್ಶಿಯಾಗಿ ಕಲ್ಮಠದ ಶ್ರೀಗಳು ಸದಾ ಕಿತ್ತೂರಿನ ಶ್ರೇಯೋಭಿವೃದ್ಧಿಗೆ ಮುಂದಾಗಿದ್ದಾರೆ. ನೀರು ನಿಂತ್ರೆ ಕೆಡುತ್ತದೆ ಸ್ವಾಮಿಗಳು ಕುಂತ್ರೆ ಕೆಡುತ್ತಾರೆ ಹಾಗಾಗಿ ಶ್ರೀಗಳು ಹಗಲಿರಳು ಕೆಲಸ ಮಾಡುತ್ತಿದ್ದಾರೆ ಎಂದರು.

ಡಾ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ                      ಸಾನಿಧ್ಯ ವಹಿಸಿ ಮಾತನಾಡುತ್ತಿರುವುದು

ಕಾರಂಜಿ ಮಠದ ಗುರುಸಿದ್ದ ಸ್ವಾಮಿಜೀ ಮಾತನಾಡಿ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಸಮಾಜಪರ ಕಾಳಜಿ ಉಳ್ಳವರು. ಎಲ್ಲರನ್ನು ಒಗ್ಗೂಡಿಸಿಕೊಂಡು ಮಠದ ಅಭಿವೃದ್ಧಿಗೆ ಶ್ರಮಿಸಿ ಚನ್ನಮ್ಮಾಜಿಯ ಹೆಸರನ್ನು ಜನ ಮರೆಯದಂತೆ ಮಾಡುವ ಮೂಲಕ ಕಿತ್ತೂರು ಭಕ್ತರ ನೆಚ್ಚಿನ ಗುರುಗಳಾಗಿದ್ದಾರೆ ಎಂದರು.

ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಮಾತನಾಡಿ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಪಟ್ಟಾಧಿಕಾರವಾಗುವ ಮುನ್ನ ಕಿತ್ತೂರು ಸಂಸ್ಥಾನ ಕಲ್ಮಠದಲ್ಲಿ ಏನು ಇರಲಿಲ್ಲ ಕಸ ಗುಡಿಸಲು ಕಸಬರಗಿಯೂ ಸಹ ಇರಲಿಲ್ಲ ಇಂದು ಮಠವನ್ನು ಉತ್ತರೋತ್ತರವಾಗಿ ಬೆಳಸಿದ್ದಾರೆ. ಕಿತ್ತೂರು ಕಲ್ಮಠದಲ್ಲಿ ಅನೇಕ ಧಾರ್ಮಿಕ, ಸಾಹಿತ್ಯಕ, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕಲ್ಮಠಕ್ಕೆ ಹತ್ತಿದ ಕಳಂಕವನ್ನು ದೂರು ಮಾಡಿದ್ದಾರೆ ಎಂದರು.

ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ಮಾತನಾಡಿ ಕಲ್ಮಠದಲ್ಲಿ ರಾಜಗುರು ಪರಂಪರೆಯಿದೆ.ಇಲ್ಲಿ ಸೇವೆ ಮಾಡುವುದು ನನ್ನ ಪೂರ್ವಜನ್ಮದ ಪುಣ್ಯ ನಾನು ಹೇಗೆ ಬದುಕಬೇಕೆಂಬುವುದನ್ನು ತಿಳಿಸಿಕೊಟ್ಟ ನನ್ನಗುರು ಗದುಗಿನ ತೋಂಟದ ಶ್ರೀಗಳು ಅವರ ಮಾರ್ಗದರ್ಶನದಲ್ಲಿಯೇ ನಾನು ಜೀವನ ಕಳೆಯುತ್ತೇನೆ. ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಮಠವನ್ನು ಅಭಿವೃದ್ಧಿಗೊಳಿಸುತ್ತೇನೆ. ಯಾವುದೇ ಆಶಯಗಳಿಗೆ ಒಳಗಾಗುವುದಿಲ್ಲ. ಆಶಯಗಳಿಗೆ ಒಳಪಡಿಸುವವರನ್ನು ಕಂಡು ದೂರವಿರುತ್ತೇನೆ ಎಂದರು.

ಈ ವೇಳೆ ಹಳೆ ವಿದ್ಯಾರ್ಥಿಗಳು, ಶರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತ ಸರ್ವ ಸದಸ್ಯರು ಮತ್ತು ಪಟ್ಟಣದ ನಾಗರಿಕರು ಸೇರಿದಂತೆ ಇನ್ನೂ ಅನೇಕರು ಗುರುವಂದನೆ ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಮಯದಲ್ಲಿ ಗಂದಿಗವಾಡ ಮೃತ್ಯುಂಜಯ ಸ್ವಾಮಿಜೀ, ಕಡೋಲಿ ಗುರುಬಸವಲಿಂಗ ಸ್ವಾಮಿಜೀ, ಘಟಪ್ರಭಾದ ಮಲ್ಲಿಕಾರ್ಜುನ ಶ್ರೀಗಳು,  ಅರಳಿಕಟ್ಟಿ ಶಿವಮೂರ್ತಿ ಶ್ರೀಗಳು, ಶೇಗುಣಸಿ ಮಹಾಂತ ಶ್ರೀಗಳು, ಕುರಣಿಯ ಮಲ್ಲಿಕಾರ್ಜನ ದೇವರು, ದಾನೇಶ ಸಾಣಿಕೊಪ್ಪ, ಉಮೇಶ ಹಿರೇಮಠ, ಅಬ್ದುಲ್ ಮುಲ್ಲಾ, ಚನ್ನಬಸಯ್ಯ ಕಟ್ಟಾಪೂರಿಮಠ,  ಶಾಲಾ-ಕಾಲೇಜ ವಿದ್ಯಾರ್ಥಿಗಳು, ಸಿಬ್ಬಂದಿ, ಮಠದ ಸದ್ಭಕ್ತರು ಸೇರಿದಂತೆ ಪಟ್ಟಣದ ನಾರಿಕರು ಭಾಗವಹಿಸಿದ್ದರು.

ಡಾ. ಎಸ್.ಬಿ. ದಳವಾಯಿ ಸ್ವಾಗತಿಸಿದರು, ಗಂಗಣ್ಣಾ ಕರೀಕಟ್ಟಿ ವಂದನಾರ್ಪಣೆ ಮಾಡಿದರು, ಕಾರಂಜಿ ಮಠದ ಶ್ರೀಗಳು ನಿರೂಪಿಸಿದರು.

ಜಿಲ್ಲೆ

ರಾಜ್ಯ

error: Content is protected !!