Wednesday, July 3, 2024

ಪಂಜಾಬ ಮಾದರಿಯಲ್ಲಿ ಕಬ್ಬಿನ ಬೆಲೆ ನಿಗದಿ ಮಾಡಲು ಆಗ್ರಹ

ಚನ್ನಮ್ಮನ ಕಿತ್ತೂರು: ಪಂಜಾಬ ರಾಜ್ಯದ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ 3800 ರಂತೆ ಬೆಲೆ ನಿಗಧಿ ಮಾಡಲು ಆಗ್ರಹಿಸಿ ಕಿತ್ತೂರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಆಪ್‌ ನಾಯಕರು

ಚನ್ನಮ್ಮನ ಕಿತ್ತೂರು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಮುಖಂಡರು ಪಂಜಾಬ್ ಮಾದರಿಯಲ್ಲಿ ರೈತರು ಬೆಳದ ಕಬ್ಬಿಗೆ ಪ್ರತಿ ಟನ್ ಗೆ ರೂ.3800 ನೀಡಿರುವ ಬೆಲೆಯನ್ನು ನಮ್ಮ ಕರ್ನಾಟಕದ ರೈತರಿಗೂ ಸಹ ವೈಜ್ಞಾನಿಕ ಬೆಲೆ ನೀಡಬೇಕೆಂದು ಒತ್ತಾಯಿಸಿ ತಹಶೀಲ್ದಾರ ಕಚೇರಿ ಮುಂದೆ ವಿನೂತನವಾಗಿ ಕಬ್ಬು ಪ್ರದರ್ಶಿಸಿ ಪ್ರತಿಭಟನೆ ಮಾಡಿ ಕಿತ್ತೂರು ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಆಪ್‌ ಅಧ್ಯಕ್ಷ  ಆನಂದ ಹಂಪಣ್ಣವರ ಅವರು ಪಂಜಾನಲ್ಲಿ 9 ರಿಂದ 10 ಪರ್ಸೆಂಟ್ ಸಕ್ಕರೆ ಇಳುವರಿ ಇರುವ‌  ಪಂಜಾಬ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ಪ್ರತಿ ಟನ್ ಗೆ 3800 ಬೆಲೆ ನಿಗದಿ ಮಾಡಿದೆ. ಆದ್ದರಿಂದ ಕೊಡಲೆ ರಾಜ್ಯ ಸರಕಾರ 12 ರಿಂದ 16 ಪರ್ಸೆಂಟ್‌ ಸಕ್ಕರೆ ಇಳುವರಿ ಇರುವ ಕರ್ನಾಟಕದಲ್ಲಿ  ಬೆಂಬಲ ಬೆಲೆ ನೀಡಬೇಕೆಂದರು. 

ಈ ವೇಳೆ ರೈತಪರ ಹೋರಾಟಗಾರ ದಿ.ಬಾಬಾಗೌಡ ಪಾಟೀಲರ ಸುಪುತ್ರ ಈಶಪ್ರಭು ಪಾಟೀಲ, ವಿಠಲ ಮಿರಜಕರ, ರಾಮನಗೌಡ ಪಾಟೀಲ, ನಾಗನಗೌಡ ಪಾಟೀಲ,ರುದ್ರಪ್ಪ ಹುಣಸಿಕಟ್ಟಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!