Saturday, July 6, 2024

ಆನಂದ ಮಾಲಗಿತ್ತಿಮಠ ರವರ “ಮಾಯಾಮಣಿ” ಮಕ್ಕಳ ಕಥಾ ಪುಸ್ತಕ ಬಿಡುಗಡೆ.

ಬೈಲಹೂಂಲ ಸೆ.10: ಪಟ್ಟಣದ ಸರ್ಕಾರಿ ನೌಕರ ಭವನದಲ್ಲಿ ಕರ್ನಾಟಕ ರಾಜ್ಯ ಎನ.ಪಿ‌.ಎಸ್. ಶಿಕ್ಷಕರ ಸಂಘ ಹಾಗೂ ತಿರುಳ್ಗನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ವತಿಯಿಂದ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಹಾಗೂ ಸತ್ಕಾರ ಸಮಾರಂಭದಲ್ಲಿ ಬೈಲಹೊಂಗಲದ ಸಾಹಿತಿಗಳಾದ ಶಿಕ್ಷಕ ಆನಂದ ಮಾಲಗಿತ್ತಿಮಠ ಅವರು ಬರೆದ “ಮಾಯಾಮಣಿ” ಎಂಬ ಕೃತಿಯನ್ನು ಗೋಕಾಕದ ಸಾಹಿತಿಗಳಾದ ವಿದ್ಯಾ ರೆಡ್ಡಿಯವರು ಬಿಡುಗಡೆಗೊಳಿಸಿದರು.

ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ವಿದ್ಯಾ ರೆಡ್ಡಿಯವರು ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವ ಇಪ್ಪತ್ತೆರಡು ಕಥೆಗಳನ್ನು ಹೊಂದಿದ ಕಥಾ ಸಂಕಲನವು ಮಕ್ಕಳ ಮನಸೆಳೆಯುವಂತಿದೆ ಎಂದರು. ಸಿದ್ರಾಮ ರಾಮದುರ್ಗ ಕೃತಿ ಬಗ್ಗೆ ಪರಿಚಯಿಸಿದರು.  ಕೃತಿ ರಚಿಸಿದ ಶಿಕ್ಷಕ ಆನಂದ ಮಾಲಗಿತ್ತಿಮಠ ರವರು ಮಾತನಾಡಿ ಸಾಹಿತ್ಯಕೆ ಪ್ರೋತ್ಸಾಹ ನೀಡಿದ ಮಹಿನೀಯರನ್ನು ಸ್ಮರಿಸಿಕೊಂಡು ಅವರಿಗೆ ಗೌರವ ವಂದನೆ ಹೇಳಿದರು.

ಇದೇ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ವತಿಯಿಂದ ನೀಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಪಿ.ಸಿ.ಲಿಂಬೆಣ್ಣವರ. ಶ್ರೀಮತಿ ಹೆಚ್.ಆರ್.ದೊಡಮನಿ ಶ್ರೀ ಮಲ್ಲಿಕಾರ್ಜುನ ಗಣಾಚಾರಿಯವರನ್ನು ಸನ್ಮಾನಿಸಲಾಯಿತು. ಇದರೊಂದಿಗೆ  ಪಿ.ಎಂ.ನಿಕ್ಕಮ್ಮನವರ, ಜಗದೀಶ ಸಂಗಪ್ಪನವರ, ಈರಣ್ಣ ಅಳಗೋಡಿ, ಶ್ರೀಮತಿ ವಿದ್ಯಾ ರೆಡ್ಡಿಯವರನ್ನು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಧ್ಯಕ್ಷತೆಯನ್ನು ಬಿ.ಆಯ್ ಕಿಲ್ಲೇದಾರ ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಎಸ.ಡಿ.ಗಂಗಣ್ಣವರ,  ಬಿ.ಎಸ್. ಫಕ್ಕೀರಸ್ವಾಮಿಮಠ, ಬಿ.ವಿ.ಬಾನಿ, ಅರ್ಜುನ ಕೋಣಿನವರ,  ಅನ್ವರ ದೇವರದವರ, ಬಿ.ಸಿ. ಅಂಬರಶೆಟ್ಟಿ. ರಮೇಶ ದೊಡಗೌಡರ, ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

 ಈ ವೇಳೆ  ಅನಂತ ಮರೆಣ್ಣವರ, ವಿರೇಶ ಚರಂತಿಮಠ, ಸಂದೀಪ ಕುಲಕರ್ಣಿ, ವಿಠಲ ಹುಣಶೀಕಟ್ಟಿ , ಸಚೀನ ಚೀಲದ , ಸಿದ್ದು ನೇಸರಗಿ, ಗುರುರಾಜ ಬೋಳಣ್ಣವರ ಸೇರಿದಂತೆ ಬೈಲಹೊಂಗಲದ ಸಮಸ್ತ ಎನ.ಪಿ.ಎಸ್. ಶಿಕ್ಷಕ ಬಳಗ ಹಾಜರಿದ್ದರು. ಲೀನಾ ಗಾಣಗಿ ಹಾಗೂ  ಜಯಶ್ರೀ ವಾಲಿಶೆಟ್ಟರರವರು ಕಾರ್ಯಕ್ರಮವನ್ನು ನಿರೂಪಿಸಿದರು. ಆಶಾ ಬಾಳಿಗಟ್ಟಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!