Wednesday, July 3, 2024

ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ: ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ.

ಬೈಲಹೊಂಗಲ :ಕಬ್ಬಿನ ಬಾಕಿ ಬಿಲ್ ನೀಡಲು ನೇಗಿಲ ಯೋಗಿ ರೈತ ಸಂಘಟನೆಯಿಂದ ಒತ್ತಾಯ
ಬೈಲಹೊಂಗಲ ಸೋಮೆಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿದೇಶಕರಿಗೆ ಮನವಿ.

ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರಿಂದ ಖರೀದಿಸಿರುವ ಕಬ್ಬಿನ ಬಿಲ್ ನ ಬಾಕಿ ಹಣ ಮತ್ತು ಈ ಸಾಲಿಗೆ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನೇಗಿಲ ಯೋಗಿ ರೈತ ಸಂಘದ ಕಾರ್ಯಕರ್ತರು ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರಿಗೆ ಶನಿವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ, ಜಿಲ್ಲಾ ಕಾರ್ಯಾಧ್ಯಕ್ಷ ಮಲ್ಲಯ್ಯ ಪೂಜಾರ ಮಾತನಾಡಿ 2020-21 ನೇ ಸಾಲಿನ ಹಂಗಾಮಿ ಕಬ್ಬನ್ನು 2700 ರೂ ದರ ನಿಗದಿ ಪಡಿಸಿ ಖರೀದಿಸಿದ್ದರೂ ಕೂಡ ಕೇವಲ 2400 ರೂ ಮಾತ್ರ ರೈತರ ಖಾತೆಗಳಿಗೆ ಜಮೆ ಮಾಡಿದ್ದು ಬಾಕಿ ಇರುವ 300 ರೂ. ಹಣ ರೈತರ ಖಾತೆಗಳಿಗೆ ಶೀಘ್ರ ಜಮೆ ಮಾಡಬೇಕು. ಮತ್ತು 21-22 ನೇ ಸಾಲಿನ ಹಂಗಾಮಿನ ಕಬ್ಬನ್ನು 3700 ರೂ ಬೆಲೆ ನಿಗದಿ ಪಡಿಸಿ ಖರೀದಿಸಬೇಕೆಂದು ಒತ್ತಾಯಿಸಿದರು. ಬಾಕಿ ಹಣ ಬಿಡುಗಡೆ ಮಾಡುವುದರಿಂದ ರೈತರಿಗೆ ಕಬ್ಬು ಪೂರೈಕೆಗೆ ಸಹಾಯವಾಗುವುದು ಎಂದರು. ಇದಕ್ಕೆ ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ಕಾರ್ಖಾನೆ ಎದುರು ಸಾವಿರಾರು ರೈತರು ಸೇರಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.
ಸಂಘದ ಜಿಲ್ಲಾ ಸಂಚಾಲಕರಾದ ಗಂಗಪ್ಪ ಶಿಂಥ್ರಿ, ಸಂಜು ಮಾದರ, ತಾಲೂಕು ಅಧ್ಯಕ್ಷ ಈರಪ್ಪ ಉಳ್ಳಿಗೇರಿ, ಹಾಗೂ ಬಸಪ್ಪ ಎಡಳ್ಳಿ, ನಿಂಗಪ್ಪ ಕುರಿ, ಶಿವಾನಂದ ನರಗಟ್ಟಿ, ಸಂಗಪ್ಪ ಸವಟಗಿ, ಅದೃಶ್ಯ ಎಡಳ್ಳಿ, ಬಸವಂತ ಅಡಕಿ, ಸುಭಾಸ ಬೆಣ್ಣಿ, ಈರಪ್ಪ ಗಣಾಚಾರಿ, ಮಡಿವಾಳಪ್ಪ ಗಣಾಚಾರಿ, ಈರಪ್ಪ ನಿಕ್ಕಮ್ಮನವರ ಹಾಗೂ ಬೈಲಹೊಂಗಲ, ಖಾನಾಪೂರ, ಕಿತ್ತೂರು ಭಾಗದ ರೈತರು ಭಾಗವಹಿಸಿದ್ದರು.

ಜಿಲ್ಲೆ

ರಾಜ್ಯ

error: Content is protected !!