Monday, July 1, 2024

ಗೋವು ಇಲ್ಲದ ಕೃಷಿ ಬಂಜರು ಭೂಮಿ ಇದ್ದಂತೆ: ಗೋಪಾಲಬಾಯಿ ಸುತಾರಿಯಾ

ಎಮ್ ಕೆ ಹುಬ್ಬಳ್ಳಿ(ಅ09):ಗೋವುವಿದ್ದರೆ ಮಾತ್ರ ಕೃಷಿ, ಕೃಷಿಯಿದ್ದರೆ ಮಾತ್ರ ಮನುಷ್ಯ ಸಂಕುಲ ಬದುಕಲು ಸಾಧ್ಯ ಎಂದು ಗುಜರಾತಿನ ಬನ್ಸಿ ಘೀರ್ ಗೋ ಶಾಲೆಯ ಗೋಪಾಲಭಾಯ್ ಸುತಾರಿಯಾ ಹೇಳಿದರು.

ಎಮ್ ಕೆ ಹುಬ್ಬಳ್ಳಿ ಸಮೀಪದ ಹೊಳಿಹೊಸುರ ರಸ್ತೆಗೆ ಹೊಂದಿಕೊಂಡು ಇರುವ ಡಾ ಜಗದೀಶ ಹಾರುಗೊಪ್ಪ ತೋಟದಲ್ಲಿರುವ ಅನುಭವ ಕಲ್ಯಾಣ ಮಂಟಪ ಮಂಗಳ ಕಾರ್ಯಾಲಯದಲ್ಲಿ ಎರಡು ದಿನಗಳ ಗೋ ಆಧಾರಿತ ಕೃಷಿ ಗೋ ಕೃಪಾಮೃತ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಒಂದು ಎಕರೆ ಜಮೀನಿಗೆ ಒಂದು ದೇಶಿ ಆಕಳು ಸಾಕಿ. ದೇಶಿ ಆಕ್ಕಳು ಶಗಣೆಯಲ್ಲಿ ಸುಮಾರು ೧೨೦೦ ನೂರು, ಮೂತ್ರದಲ್ಲಿ ೫ ಸಾವಿರಕ್ಕೂ ಹೆಚ್ಚು ಜೀವಸತ್ವಗಳು ಇರುತ್ತವೆ. ಗೋ ಕೃಪಾಮೃತವನ್ನು ಬಳಸುವುದರಿಂದ ಜಮೀನನಲ್ಲಿ ರೈತನ ಮಿತ್ರ ಎರೆಹುಳು ಹಾಗು ಜೇನುಗಳ ಸಂಖ್ಯೆ ಹೆಚ್ಚಾಗಿ ಉತ್ತಮ ಫಲ ಪಡೆಯಬಹುದು ಎಂದರು. ಗೋ ಆಧಾರಿತ ಕೃಷಿ, ಗೋಪಾಲನೆ ವಿಧಾನ, ಪಂಚಗವ್ಯ, ಆಯುರ್ವೇದ, ಆರೋಗ್ಯಕರ ಜೀವನ ಪದ್ಧತಿ, ಗೋ ಕೃಪಾಮೃತ ಜಲ ತಯಾರಿಸುವ ವಿಧಾನವನ್ನು ಸಹ ಪ್ರೋಜಕ್ಟರ್ ಮೂಲಕ ತಿಳಿಸಿಕೊಟ್ಟರು. ಮತ್ತು ಗೋ ಕೃಪಾಮೃತ ಬಳಸಿ ಉತ್ತಮ ಬೆಳೆ ಬೆಳೆದ ಅನೇಕ ಯಶೋಗಾತೆಯನ್ನು ತಿಳಿಸುವುದರೊಂದಿಗೆ ಸೇರಿದ ಜನರಿಗೆ ಪ್ರೋಜಕ್ಟರ ಮೂಲಕ ವಿಷ್ಲೇಶಿಸಿದರು.

ಪ್ರಾಸ್ತಾವಿಕವಾಗಿ ಡಾ. ಜಗದೀಶ ಹಾರುಗೊಪ್ಪ ಮಾತನಾಡಿ ಭಾರತೀಯ ಕೃಷಿ ಪದ್ಧತಿ ಜಗತ್ತಿಗೆ ಮಾದರಿಯಾಗಿದೆ. ಸಮಷ್ಠಿ ಪ್ರಜ್ಞೆ ಹೊಂದಿದ ಯಾವುದ್ದಾದರು ದೇಶ ಇದ್ದರೆ ಅದು ಭಾರತ ಎಂದರು.
ಸಾನಿಧ್ಯವನ್ನು ಕುಂದಗೊಳ್ಳ ಕಲ್ಯಾಣ ಪೂರ ಮಠ ಬಸವಣ್ಣಜ್ಜ ವಹಿಸಿದರು. ಡಾ ಜಗದೀಶ ಹಾರುಗೊಪ್ಪ ಅವರ ತಾಯಿ ಕಾಶವ್ವ ಹಾರುಗೊಪ್ಪ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಡಾ. ರಾಜೇಶ್ವರರಾವ, ತುಕಾರಾಮ ಪವಾರ, ಸಿದ್ರಾಮ ತಳವಾರ, ಆನಂದ ಹಂಪಣ್ಣವರ, ವಿನೋದ ಪಾಟೀಲ, ಬಸವರಾಜ ಚಿನಗುಡಿ, ನಾಗೇಶ ಬಸರಕೊಡ, ಸಂತೋಷ ಸಂಬಣ್ಣವರ, ಬದ್ರಿನಾಥ ಕುಲಕರ್ಣಿ, ಪ್ರಿಯಾಂಕ ಪೂರಾಣಿಕ, ಕಮಲಾ ಗಣಾಚಾರಿ, ಸೇರಿದಂತೆ ಸುಮಾರು ಸಾವಿರಕ್ಕೂ ಅಧಿಕ ಪ್ರಗತಿ ಪರರೈತರು ಭಾಗವಹಿಸಿದ್ದರು. ಕುಮಾರ ಗಾಣಿಗೇರ, ರಮೇಶ ಗದ್ದಿಹಳ್ಳಿ, ನಿರೂಪಿಸಿದರು. ಉಚಿತ ಗೋಕೃಪಾಮೃತ ವಿತರಿಣೆ ಮಾಡಲಾಯಿತು.

ಜಿಲ್ಲೆ

ರಾಜ್ಯ

error: Content is protected !!