Saturday, July 6, 2024

ಸಂಘಟನೆಗಳ ಕಾರ್ಯ ಜನರ ನೆಮ್ಮದಿಗಿರಲಿ:  ಎಂ.ಮಹೇಶ ಅಭಿಮತ

ಬೆಳಗಾವಿ: ವ್ಯಕ್ತಿ ಶಕ್ತಿವಂತರಾಗಲು ಪ್ರಾಮಾಣಿಕ ಸಮಾಜಸೇವೆಯೂ ಒಂದು ಗಟ್ಟಿ ಸ್ತರ.‌ ಎಂದು ಬೆಳಗಾವಿ ಪ್ರಜಾವಾಣಿ ದಿನಪತ್ರಿಕೆ ಹಿರಿಯ ವರದಿಗಾರರಾದ ಎಂ.ಮಹೇಶ ಹೇಳಿದರು.

ಅವರು ಬುಧವಾರ ರಾಮತೀರ್ಥನಗರದಲ್ಲಿ ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಮತ್ತು ಸ್ನೇಹ ಸಮಾಜ ಸೇವಾ ಸಂಘಗಳಿಂದ ಆಯೋಜಿಸಿದ ಎಮ್.ಮಹೇಶ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜ ವ್ಯಕ್ತಿಯ ನಡೆ,ನುಡಿಯನ್ನು ಸದಾ ಗಮನಿಸುತ್ತಿರುತ್ತದೆ. ಪ್ರಾಮಾಣಿಕನೊಬ್ಬನ ಶ್ರಮವು ಸಮಾಜದಿಂದ ಎಂದೂ ದೂರಾಗದು. ಸಮಾಜಕ್ಕೆ ಹಿತವೆನಿಸುವ ಕಾರ್ಯ ನಮ್ಮದಾದಾಗ ಸಮಾಜದ ಗೌರವ ಸದಾ ನಮ್ಮೊಂದಿಗಿರುವುದು. ಇಲ್ಲಿಯ ಸಂಘಟನೆಗಳ ಸಮಾಜಪರ ಕಾರ್ಯದ ಕುರಿತು ಹಲವಾರು ಬಾರಿ ನಾನು ಪತ್ರಿಕೆಯಲ್ಲಿ ವರದಿ ಮಾಡಿದ್ದೇನೆ. ಸ್ವಾರ್ಥ ರಹಿತ ಸಂಘಟನೆಗಳು ಅತ್ಯುತ್ತಮ ಸಂಘಟನೆಗಳಾಗುತ್ತವೆ. ಕಳೆದ ೬ ವರ್ಷಗಳ ಬೆಳಗಾವಿ ನೆಲದ ಋಣ ಮರೆಯಲಾರೆ. ಎಂದರಲ್ಲದೆ ಸನ್ಮಾನ ಕೊಟ್ಟ ದ್ದಕ್ಕೆ ಧನ್ಯವಾದ ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ,
ಗರ್ದಿ ಗಮ್ಮತ್ ಸುದ್ದಿ ಜಾಲತಾಣದ ಪ್ರಧಾನ ಸಂಪಾದಕ ಬಾಪೂಗೌಡ ಪಾಟೀಲ ಮಾತನಾಡಿ, ಸಮಾಜಕ್ಕೆ ಮಾಡಿದ ಸೇವೆ ದೇವರಿಗೆ ಪ್ರೀಯವೆನಿಸುವದು. ಅದು ಜನಮಾನಸಕ್ಕೆ ಕೊಡುವ ನಮ್ಮ ಬಹು ದೊಡ್ಡ ಕೊಡುಗೆ. ಲಂಕೇಶ್ ರು ತಮ್ಮ ಜನಪ್ರಿಯ ಲಂಕೇಶ್ ವಾರಪತ್ರಿಕೆ ಯಿಂದ ಅಂದು ರಾಜ್ಯದ ಸುಂದರ ಸಾಮ್ರಾಜ್ಯ ಕಟ್ಟಬಲ್ಲ ಸಮಾಜ ನಿರ್ಮಿಸಲು ಹಗಲಿರುಳೂ ಶ್ರಮಿಸಿದವರು. ದೇಶಕ್ಕೆ ಅವರ ಇರುವಿಕೆ ಇನ್ನೂ ಅತ್ಯವಶ್ಯಕ ವಾಗಿತ್ತು.
ಪ್ರತಿಯೊಬ್ಬರೂ ಅಂಥ ವ್ಯಕ್ತಿತ್ವ ಬೆಳೆಸಿಕೊಂಡಾಗ ದೇಶ ,ನಾಡು ಸುಭದ್ರವಾಗುವದು ಎಂದರು.

ಸಮಾಜ ಸೇವಕ ಯಾದವ್ ಪೌಂಡಶನ್ ಅಧ್ಯಕ್ಷ ಸುರೇಶ ಯಾದವ್, ಎಮ್ ಮಹೇಶ ಅವರ ವಸ್ತು ನಿಷ್ಢ ವರದಿಗಳ ಕುರಿತು ಶ್ಲಾಘಿಸಿದರು. ‌ ಡಾ. ಡಿ.ಎನ್.ಮಿಸಾಳೆ ಪತ್ರಿಕಾಂಗ ಮತ್ತು ಸಂಘಟನೆಗಳಿಂದ ಮಾತ್ರ ನಾವು ಏನೆಲ್ಲ ಸಾಧಿಸಬಹುದಲ್ಲದೆ, ಸಂಘಗಳ ದೇಯೋದ್ಧೇಶ ಮತ್ತು ಕಾರ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ
ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ, ಸುರೇಶ ಉರಬಿನಹಟ್ಟಿ ಅತಿಥಿಗಳನ್ನು ಪರಿಚಯಿಸಿದರಲ್ಲದೆ, ರಾಮತೀರ್ಥನಗರದ ಅಭಿವೃದ್ಧಿ ಗೆ ಪತ್ರಿಕೆಗಳ ಸಹಕಾರ ಮತ್ತು ಸಂಘದ ಕುರಿತು ಮಾತನಾಡಿದರಲ್ಲದೆ ಎಲ್ಲ ಗಣ್ಯರು ಮತ್ತು ಸಂಘದ ಪದಾಧಿಗಳೊಂದಿಗೆ. ಎಮ್. ಮಹೇಶ ಅವರನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆ ಉಪಾಧ್ಯಕ್ಷ, ಕನ್ನಡ ಪ್ರಭ ಪ್ರಧಾನ ವರದಿಗಾರ, ಶ್ರೀಶೈಲ ಮಠದ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಜಾವಾಣಿ ವರದಿಗಾರರಾದ ಇಮಾಮಹುಸೇನ ಗೂಡುನವರ , ಡಿ.ಎಮ್.ಟೊಣ್ಣೆ, ಮಲ್ಹಾರ ದಿಕ್ಷಿತ, ಬಸವರಾಜ ಗೌಡಪ್ಪಗೋಳ, ಆರ್.ಜಿ.ಹಿರೇಮಠ, ಮಹೇಶ ಚಿಟಗಿ, ಎಸ್.ಎಲ್.ಸನದಿ, ಮಲ್ಲಪ್ಪಾ ಸೊಂಟಕ್ಕಿ, ದುಂಡಪ್ಪಾ ಉಳ್ಳೇಗಡ್ಡಿ, ಎಸ್.ಎಸ್.ಪಾಟೀಲ, ಪ್ರೊ.ಎ.ಕೆ
ಪಾಟೀಲ, ಎಮ್.ಬಿ.ಬಾಗೇವಾಡಿ. ಎಸ್..ಜಿ.ಕಲ್ಯಾಣಿ, ವಿಲಾಸ ಕೆರೂರ, ಜಿ.ಐ.ದಳವಾಯಿ, ಬಿ.ಎಸ್.ಹಿರೇಮಠ, ಎಸ್.ಸಿ.ಕಮತ, ಹಾಲಭಾವಿ, ಆನಂದ ಹಣ್ಣಿಕೇರಿ, ಎಮ್.ಎ. ದಂಡಿನವರ, ಎಸ್.ಎಸ್. ಪಾಟೀಲ, ರಾಮಚಂದ್ರ ಸನದಿ, ಮನೋಹರ ಕಾಜಗಾರ ಸೇರಿದಂತೆ ಅಭಿಮಾನಿಗಳು, ರಹವಾಸಿಗಳು ಉಪಸ್ತಿತರಿದ್ದು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿ, ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!