Monday, July 1, 2024

ಬೆಳಗಾವಿಯ ಹಿರಿಯ ಪತ್ರಕರ್ತ, ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರಿಗೆ ಶ್ರದ್ಧಾಂಜಲಿ

ಚಿಕ್ಕಬಾಗೇವಾಡಿ: ಚಿಕ್ಕಬಾಗೇವಾಡಿಯ ಬಾಬಾಗೌಡ್ರು. ಪಾಟೀಲ್’ ಸಭಾಭವನದಲ್ಲಿ ರೈತಪರ ಹೋರಾಟಗಾರರು, ಬೆಳಗಾವಿಯ ಹಿರಿಯ ಪತ್ರಕರ್ತ,ರೈತ ನಾಯಕ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿಯನ್ನು ಗ್ರಾಮದ ಹಿರಿಯರು,ರೈತ ಪರಹೋರಾಟಗಾರರು  ಶ್ರದ್ದಾಂಜಲಿಯನ್ನು ಅರ್ಪಿಸಿದರು.ಮುಚಳಂಬಿ ಅವರ ನಿಧನದಿಂದಬೆಳಗಾವಿ ಜಿಲ್ಲೆಗೆ ಹಾಗೂ ಜನಪರವಾದ ಹೋರಾಟಗಳಿಗೆ ಮಂಕು ಕವಿದಂತಾಗಿದೆ.ತಮ್ಮ ಜೀವನದುದ್ದಕ್ಕೂ ಅನೇಕ ಜನಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಮುಚಳಂಬಿ ಅವರು ಕೇವಲ ಪತ್ರಿಕಾ ಸಂಪಾದಕರಾಗಿರದೇ ಸಾಮಾನ್ಯನರ ಪರವಾದ ಗಟ್ಟಿ ನಿಲುವನ್ನು ತೆಗೆದುಕೊಳ್ಳುವ ದಿಟ್ಟ ನಾಯಕರಾಗಿದ್ದರು ಎಂದು ಡಾ. ಗಜಾನಂದ ಸೊಗಲನ್ನವರ ಅವರು ಅಭಿಪ್ರಾಯ ಪಟ್ಟರು.

ಬೆಳಗಾವಿ ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ *ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಬೆಳಗಾವಿ ಜಿಲ್ಲೆ ಗೋಕಾಕದಲ್ಲಿ ಬುಧವಾರ ದಿ.6 ರಂದು ಮುಂಜಾನೆ ಕೊನೆಯುಸಿರೆಳೆದರು… ಜನ್ಮತಃ ಹೋರಾಟದ ಮನೋಭಾವದ ಕಲ್ಯಾಣರಾವ್ ಮುಚಳಂಬಿಯವರು ಬುಧವಾರ ಮುಂಜಾನೆ ಸಾವಳಗಿ ಬಳಿ ಹೋರಾಟದ ಅಂಗವಾಗಿ ಪಾದಯಾತ್ರೆಯೊಂದರಲ್ಲಿ‌ ಪಾಲ್ಗೊಂಡಿದ್ದರು.

ಹೋರಾಟಗಾರನೊಬ್ಬ ಹೋರಾಟದ ಸಮಯದಲ್ಲಿಯೇ ಅಸುನೀಗಿರುವುದು ಅವರ‌ ವ್ಯಕ್ತಿತ್ವದ ಸಾಧನೆಗೆ ಸಿಕ್ಕ ಗೌರವ..

ರಾಜ್ಯದ ರೈತ ಹೋರಾಟದಲ್ಲೇ ತಮ್ಮ ಜೀವನದ ಬಹುತೇಕ ಸಮಯ ಕಳೆದ ಮುಚಳಂಬಿ ಅವರು, ಪ್ರೊ. ನಂಜುಡಸ್ವಾಮಿ, ಬಾಬಾಗೌಡ ಪಾಟೀಲ್, ಪುಟ್ಟಣ್ಣಯ್ಯ ಸೇರಿದಂತೆ ಅನೇಕ ರೈತ ಹೋರಾಟಗಾರರಿಗೆ ಸಾಥ್ ನೀಡಿದ್ದರು. ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಲೆಕ್ಕಿಸದೇ ಗಡಿ ಜಿಲ್ಲೆಗಳಲ್ಲಿ ರೈತ ಹೋರಾಟ ಸಂಘಟನೆ ಮಾಡಿದ ಕೀರ್ತಿ ಮುಚಳಂಬಿ ಅವರಿಗೆ ಸಲ್ಲುತ್ತದೆ.

ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರಿಗೆ ಕೃಷಿ ಸಂಕಷ್ಟಗಳ ಬಗ್ಗೆ ಲೇಖನಗಳ ಮೂಲಕ ಗಮನಸೆಳೆದ ಹಿರಿಮೆ‌ ಮುಚಳಂಬಿ ಅವರದ್ದು ಎಂದು ಆನಂದ ಹಂಪಣ್ಣವರ ಅವರು ಕಲ್ಯಾಣ ರಾವ್ ಮುಚಳಂಬಿ ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿ ನಮನಗಳನ್ನು ಸಲ್ಲಿಸಿದರು. ಗ್ರಾಮದ ಹಿರಿಯರು ರೈತರಾದ ದೇಮನಗೌಡ ಪಾಟೀಲ್, ಗಣಪತಿ,ನೆಗೀನಹಾಳ,ಅರ್ಜುನ ಪಡೆನ್ನವರ,ಮಲನಾಯ್ಕ ಬಾವಿ,ಬಸವರಾಜ,ಹಣ್ಣಿಕೇರಿ,ಶಿವಾನಂದ ಉಣಕಲ್ ಹಾಗೂ ಗ್ರಾಮದ ರೈತರು,ಹಿರಿಯರು,ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.

 

ಜಿಲ್ಲೆ

ರಾಜ್ಯ

error: Content is protected !!