Saturday, July 6, 2024

ನಾಳೆಯಿಂದ ಬೇವಿನಕೊಪ್ಪ ಗ್ರಾಮದ ಆನಂದಾಶ್ರಾಮ , ಶ್ರೀ ನಿತ್ಯಾನಂದ ದ್ಯಾನ ಮಂದಿರದ ವಾರ್ಷಿಕೋತ್ಸವ ಮತ್ತು ಸಹಪಂಕ್ತಿ ಭೋಜನ ಕಾರ್ಯಾಕ್ರಮ

ಸುದ್ದಿ ಸದ್ದು ನ್ಯೂಸ್
ಬೈಲಹೊಂಗಲ: ತಾಲೂಕಿನ ಬೇವಿನಕೊಪ್ಪ ಗ್ರಾಮದಲ್ಲಿ ಬುಧುವಾರ ದಿನಾಂಕ 13 ರಿಂದ 15 ರ ವರೆಗೆ ಆನಂದಾಶ್ರಮದ 30 ನೇ ಮತ್ತು ಶ್ರೀ ನಿತ್ಯಾನಂದ ದ್ಯಾನ ಮಂದಿರದ 22 ನೇ ವಾರ್ಷಿಕೋತ್ಸವ ಹಾಗೂ ಸಹಪಂಕ್ತಿ ಭೋಜನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 13 ರಂದು ಮುಂಜಾನೆ 10 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು ದಿವ್ಯ ಸಾನಿದ್ಯವನ್ನು ಗುರುದೇವ ಆನಂದಾಶ್ರಮ ಮಠದ ಶ್ರೀ ವಿಜಯಾನಂದ ಮಹಾಸ್ವಾಮಿಗಳು ಹಾಗೂ ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ ಮತ್ತು ವಿಶ್ವಗುರು ಬಸವಣ್ಣನವರ ತತ್ವದ “ಧಯವೇ ಧರ್ಮದ ಮೂಲವಯ್ಯ” ಎಂಬ ವಿಷಯದ ಕುರಿತು ಕ್ರಾಂತಿಕಾರಿ ಪ್ರವಚಣ ನೀಡಲಿದ್ದಾರೆ.
ಸಾನಿದ್ಯವನ್ನು ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿ “ಧಯವೇ ಧರ್ಮದ ಮೂಲವಯ್ಯ” ಎಂಬ ವಿಷಯದ ಕುರಿತು ಪ್ರವಚಣ ಹೇಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೈಲಹೊಂಗಲ ಶಾಸಕ ಮಾಹಾಂತೇಶ ಕೌಜಲಗಿ, ಪ್ರೇರಣಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಿರಣ ಸಾಧುನವರ, ಎಂ. ಕೆ. ಹುಬ್ಬಳ್ಳಿಯ ಖ್ಯಾತ ದಂತ ವೈದ್ಯರಾದ ಡಾ ಜಗದೀಶ ಹಾರುಗೊಪ್ಪ, ಅಮಟೂರು ಗ್ರಾಮ ಪಂಚಾಯತ ಅಧ್ಯಕ್ಷೆ ಮಂಜುಳಾ ಮುದಕೈಯ್ಯನವರ ವಹಿಸಲಿದ್ದಾರೆ,
ಅತಿಥಿಗಳಾಗಿ ಬೈಲಹೊಂಗಲ ವಿಶ್ವನಾಥ ಮೆಡಿಕಲ್ ಸ್ಟೋರ್ಸನ ಮಾಲಿಕ ವಿಶ್ವನಾಥ ಚಿನಿವಾಲರ, ಕಿತ್ತೂರು ರಾಷ್ಟ್ರೀಯ ಬಸವ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಚಿನಗುಡಿ, ಸಂಗಪ್ಪ ಮುರಗೋಡ, ಚಂದ್ರಶೇಕರ ಶಿವಸಂಗಯ್ಯನವರಮಠ, ಮಹಾರುದ್ರ ಸಂಪಗಾವಿ, ಸೋಮನಗೌಡ ಪಾಟೀಲ, ರುದ್ರಪ್ಪ ಬೇವಿನಗಿಡದ, ಮಹಾವೀರ ಭಾಂವಿ, ಬಸನಗೌಡ ಪಾಟೀಲ, ಬಸವರಾಜ ಸಂಗಪ್ಪನವರ, ಶಂಕರಯ್ಯ ಪೂಜೇರ, ಮಲ್ಲಿಕಾರ್ಜುನ ಮುದಕವಿ ವಹಿಸಲಿದ್ದಾರೆ,

ಸಂಜೆ 7 ಗಂಟೆಗೆ ಧಾರ್ಮಿಕ, ಸಾಂಸ್ಕೃತಿಕ ಮತ್ತು ಇತ್ತೀಚೆಗೆ ನಿದನರಾದ ಐತಿಹಾಸಿಕ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದ ಖ್ಯಾತ ಜನಪದ ಕಲಾವಿದ ಶ್ರೀ ಬಸವಲಿಂಗಯ್ಯ ಸಂಗಯ್ಯ ಹಿರೇಮಠ ಅವರಿಗೆ ನುಡಿ ನಮನ ಕಾರ್ಯಕ್ರಮ ಜರುಗಲಿದ್ದು ದಿವ್ಯ ಸಾನಿದ್ಯವನ್ನು ಗುರುದೇವ ಆನಂದಾಶ್ರಮ ಮಠದ ಶ್ರೀ ವಿಜಯಾನಂದ ಮಹಾಸ್ವಾಮಿಗಳು ಹಾಗೂ ಕಾರಲಕಟ್ಟಿ ಶ್ರೀ ಸಿದ್ಧಾರೂಢ ಸ್ವಾಮೀ ಮಠದ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಇಂಜನೀಯರ್ ಶ್ರೀ ರಮೇಶ ಜಂಗಲ, ವಿಜಯ ಕನಾರ್ಟಕ ಪತ್ರಿಕೆ ವರದಿಗಾರ ಶ್ರೀ ಈಶ್ವರ ಹೊಟಿ ವಹಿಸಲಿದ್ದಾರೆ.
ಅತಿಥಿಗಳಾಗಿ : ಶ್ರೀ ಮಹಾಂತೇಶ ಉರಬಿನ ಶ್ರೀ ದುಂಡಪ್ಪ ಕಾಲಗಗ್ಗರಿ, ಶ್ರೀ ಶಂಕರಯ್ಯ ಪೂಜೇರ, ಶ್ರೀ ಬಸವರಾಜ ಗಜಪತಿ, ಶ್ರೀ ಸೋಮಪ್ಪ ಅಂಗಡಿ, ಶ್ರೀ ಯಲ್ಲಪ್ಪ ಸೋಳಂಕಿ, ಶ್ರೀ ನಿಂಗಪ್ಪ  ಹಸರನ್ನವರ, ಶ್ರೀ ಆನಂದ ಹಣಬರ, ಲಾಲಸಾಬ ಸುಲ್ತಾನಬಾಯಿ, ಶ್ರೀ ಶೇಖಪ್ಪ ಸಂಪಗಾವಿ, ಶ್ರೀ ಸಿ, ಕೆ, ಮೆಕ್ಕೇದ, ಶ್ರೀ ಚಂದ್ರಯ್ಯ ಯರಗಟ್ಟಿಮಠ, ವಹಿಸಲಿದ್ದಾರೆ.
ಶ್ರೀಮತಿ ವಿಶ್ವೇಶ್ವರ ಬಸಲಿಂಗಯ್ಯ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರುವದು ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಸಾರಥಿ ತೋನ್ಸೆ ಪುಷ್ಕಳಕುಮಾರ ರವರಿಂದ ಪರಬ್ರಹ್ಮ ಶ್ರೀ ಗುರು ನಿತ್ಯಾನಂದ ಚರಿತಾಮೃತ (ಹರಿಕಥೆ) ಜರುಗಲಿವೆ ಎಂದು ಶ್ರೀ ವಿಜಯಾನಂದ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,

 

ಜಿಲ್ಲೆ

ರಾಜ್ಯ

error: Content is protected !!