“ಯುವಾ ಬ್ರಿಗೇಡ್‌‌” ಸಭೆಗೆ ಶಾಲಾ ಶಿಕ್ಷಕರನ್ನು ಕಳುಹಿಸುವಂತೆ ಯಾದಗಿರಿ ಜಿ. ಪಂ ಸಿಇಒ ಸುತ್ತೋಲೆ – ಖಂಡನೆ

ಉಮೇಶ ಗೌರಿ (ಯರಡಾಲ)

ಸುದ್ದಿ ಸದ್ದು ನ್ಯೂಸ್

ಯಾದಗಿರಿ: BJP ಪರ ಸಂಘಟನೆಟನೆ ಮಾಡುತ್ತಾ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಕ್ರವರ್ತಿ ಸೂಲಿಬೆಲೆ ನೇತೃತ್ವದ “ಯುವಾ ಬ್ರಿಗೇಡ್‌‌” ಸಭೆಗೆ ಜಿಲ್ಲೆಯ ಶಿಕ್ಷಕರನ್ನು ಕಳುಹಿಸುವಂತೆ ಯಾದಗಿರಿ ಜಿಲ್ಲಾ ಪಂಚಾಯತಿಯಿಂದ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶಿಲ್ಪಾ ಶರ್ಮಾ ಸುತ್ತೋಲೆ ಹೊರಡಿಸಿದ್ದಾರೆ. ನವೆಂಬರ್‌ 6 ರಂದು ಹೊರಡಿಸಲಾಗಿರುವ ಈ ಸುತ್ತೋಲೆಗೆ ಶಿಕ್ಷಣ ತಜ್ಞರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸಿಇಒ ಶಿಲ್ಪಾ ಶರ್ಮಾ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ, ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳಿಂದ ಒಬ್ಬ ಅಥವಾ ಇಬ್ಬರು ಶಿಕ್ಷಕರನ್ನು ಕಳುಹಿಸಬೇಕು. ಜೊತೆಗೆ ಭಾಗವಹಿಸುವ ಶಿಕ್ಷಕರಿಗೆ ನಿಯಮಾನುಸಾರ ಕರ್ತವ್ಯಯ ಅವಧಿ ಎಂದು ಪರಿಗಣಿಸಬೇಕು ಎಂದು ಹೇಳಿದೆ.

Share This Article
";