ಎಂ.ಕೆ.ಹುಬ್ಬಳ್ಳಿ ಹೈವೇಯಲ್ಲಿ ಅಪಘಾತ: ಮಹಿಳೆ ದುರ್ಮರಣ

ಉಮೇಶ ಗೌರಿ (ಯರಡಾಲ)

ಎಂ.ಕೆ.ಹುಬ್ಬಳ್ಳಿ: ಲಾರಿ ಹಾಯ್ದು ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಧಾರುಣ ಘಟನೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಎಂ.ಕೆ.ಹುಬ್ಬಳ್ಳಿಯ ರಮೇಜಾ ಮಲಿಕ್‍ಸಾಬ್ ನದಾಫ್ ಮೃತ ದುರ್ದೈವಿ. ಮೃತ ಮಹಿಳೆ ರಮೇಜಾ ಎಂಕೆ ಡಾಬಾ ಕೆಲಸಕ್ಕೆ ಹೋಗುವಾಗ ಹೈವೇ ದಾಟುವ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಸ್ಥಳಕ್ಕೆ ಕಿತ್ತೂರು ಪಿಎಸ್‍ಐ ಬಸವರಾಜ್ ಉಳ್ಳಾಗಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";