ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ!ಒಂದೇ ಲಗ್ನ, ಎರಡೇ ಮಕ್ಳು: ಬಸನಗೌಡ ಪಾಟೀಲ್ ಯತ್ನಾಳ್

ಬಾಗಲಕೋಟೆ: ಈ ದೇಶದಲ್ಲಿ ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ. ಎಲ್ಲರೂ ಒಂದೇ ಲಗ್ನ ಆಗಬೇಕು, ಎರಡೇ ಮಕ್ಕಳಿರಬೇಕು. ಮಕ್ಕಳ ಇಷ್ಟಿದ್ದರೇ ಇರಿ, ಇಲ್ಲದೆ ಹೋದ್ರೆ ಮೋಹನದಾಸ ಕರಮಚಂದ ಗಾಂಧೀಜಿ ಆವಾಗಲೇ ಪಾಲು ಮಾಡಿ ಕೊಟ್ಟಿದ್ದಾರೆ, ಕರೆದುಕೊಂಡು ಹೋಗಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಭಾನುವಾರ ರಾತ್ರಿ ಮಾತನಾಡಿದ ಅವರು, ವಕ್ಫ್ ಕಾನೂನು ರದ್ದು ಮಾಡುತ್ತೇವೆ. ಈ ದೇಶದಲ್ಲಿ ಒಂದೇ ಕಾಮನ್ ಸಿವಿಲ್ ಕೋಡ್ ಜಾರಿಗೆ ತರುತ್ತೇವೆ ಎಂದರು.

ಮುಂದುವರಿದು ಎಲ್ಲರೂ ಒಂದೇ ಲಗ್ನ ಆಗಬೇಕು, ಎರಡೇ ಮಕ್ಕಳಿರಬೇಕು. ಹಮ್ ಪಾಂಚ್, ಹಮ್ ಬಚ್ಚಿಸ್ ಬಂದ್ ಹೋಗಯಾ ಹೈ ಎಂದು ಯತ್ನಾಳ ವ್ಯಂಗ್ಯವಾಡಿದರು. ಮಕ್ಕಳ ಇಷ್ಟಿದ್ದರೇ ಇರ್ರಿ, ಇಲ್ಲದೆ ಹೋದ್ರೆ. ಇಂದು ಜನ್ಮ ದಿನ ಐತೆಲಾ ಮೋಹನದಾಸ ಕರಮಚಂದ ಗಾಂಧೀಜಿ ಆವಾಗಲೇ ಪಾಲು ಮಾಡಿ ಕೊಟ್ಟಾನು ನೀವು ಹೊಯ್ಕೋಂತ ಹೋಗ್ರಿ ಎಂದು ಹೇಳಿದರು. ಈಗ ನಮ್ಮ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಕ್ಕಿದ್ದಾರೆ. ಇಂದು ದೇಶ ಬಹಳ ಸದೃಢವಾಗಿದೆ ಎಂದರು.

ಇಂಗ್ಲೆಂಡ್ ಅನ್ನು ಹಿಂದೆ ಹಾಕಿ ಜಗತ್ತಿನ 5ನೇ ಸದೃಢ ಆರ್ಥಿಕ ರಾಷ್ಟ್ರವಾಗಿದೆ. ಭಾರತದಲ್ಲಿ ಇದ್ದೀವೆ 370 ತೆಗೆದಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತಿದ್ದೇವೆ. ಮಥುರಾ ಕೃಷ್ಣನ ಮಂದಿರವನ್ನೂ ಕಟ್ಟುತ್ತೇವೆ . ದೇಶದಲ್ಲಿ ಒಂದೇ ಕಾನೂನು ಜಾರಿಗೆ ತರುತ್ತೇವೆ ಎಂದು ಯತ್ನಾಳ ತಿಳಿಸಿದರು.

ಇದೇವೇಳೆ ಪಿಎಫ್ಐ ನಿಷೇಧದ ಬಗ್ಗೆ ಮಾತನಾಡಿದ ಅವರು, ಪಿಎಫ್ಐ ನಿಷೇಧ ಅಗಿದ್ದು ಕಾಂಗ್ರೆಸ್ ಗೆ ಒಳಗಿಂದ ಒಳಗೆ ಸಂತೋಷವಿದೆ ಎಂದು ವ್ಯಂಗ್ಯ ಮಾಡಿದ ಯತ್ನಾಳ, ಆದ್ರೆ ದುರ್ದೈವ ಅಂದ್ರೆ ದೇಶಕ್ಕಿಂತ ಮುಸ್ಲಿಂ ವೋಟ್ ಗಳಿಗಾಗಿ ಟೀಕೆ ಮಾಡ್ತಿದಾರೆ. ಪಿಎಫ್ಐ ನಿಂದ ಕಾಂಗ್ರೆಸ್ ಮತಬ್ಯಾಂಕ್ ಒಡೆದು ಹೋಗಿತ್ತು. ಕಾಂಗ್ರೆಸ್ ಗೆ ಜೀವನ ಕೊಟ್ಟಿದ್ದು ನರೇಂದ್ರ ಮೋದಿ ಎಂದು ಯತ್ನಾಳ ತಿಳಿಸಿದರು.

ಪಿಎಫ್ಐ ಜೊತೆಗೆ ಆರೆಸ್ಸೆಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಆರೆಸ್ಸೆ ದೇಶಭಕ್ತ ಸಂಘಟನೆ ಎಂದು ಸುಪ್ರೀಂ ಕೋರ್ಟೇ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ ಆರೆಸ್ಸೆಸ್ ಎಂದು ಅಭಿಪ್ರಾಯಪಟ್ಟರು.

ಆದರೆ ಪಿಎಫ್ಐ ಸಂಘಟನೆ ದೇಶದಲ್ಲಿ ಹಿಂದುಗಳ ಹತ್ಯೆ ಮಾಡುವುದು, ಹಿಂದು ನಾಯಕರ ಕೊಲೆ, ಲವ್ ಜಿಹಾದ್ ಮಾಡಬೇಕೆಂಬ ಕುತಂತ್ರಗಳಿಗೆ ಸಾಕ್ಷಿಯಿದೆ. ಸುಮ್ಮ ಸುಮ್ಮನೆ ನಿಷೇಧ ಹೇರುವಂತಹ ಕೆಲಸ ಮಾಡಿಲ್ಲ. ಸಾವಿರಾರು ಕೋಟಿ ಅರಬ್ ದೇಶಗಳಿಂದ ಈ ಚಟುವಟಿಕೆಗಳಿಗೆ ಹಣ ಬರುವ ಬಗ್ಗೆ ದಾಖಲೆ ಸಿಕ್ಕಿದೆ ಎಂದು ಹೇಳಿದರು.

 

 

 

 

 

(ಕೃಪೆ:ವಿಕ)

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";