ನಮಗೆ ನಾವೇ ನಾಯಕರಾಗಬೇಕು.ಇದಕ್ಕೆ ಅನ್ವರ್ಥ ಹೆಸರೆ ಡಾ!! ಜಗದೀಶ ಹಾರುಗೊಪ್ಪ

ಲೇಖನ:ಸಂತೋಷ ಸಂಬಣ್ಣವರ.

ಜೀವನದಲ್ಲಿ ಬೇಗ ಮುಂದೆ ಬರಬೇಕು ಅಂತ ದಿನಕ್ಕೊಂದು ಬಣ್ಣದ ಮುಖವಾಡ ಹಾಕೋನು ನಾನಲ್ಲ, ಮುಟ್ಟುವ ಗುರಿ ತಡವಾದರೂ ನಾನು ಇಡೋ ಹೆಜ್ಜೆ ನಿಯತ್ತಾಗಿ ಇರಬೇಕು.ನಮಗೆ ನಾವೇ ಸ್ಪೂರ್ತಿ. ನಮ್ಮ ಕೆಲಸಕ್ಕೆ ನಮ್ಮ ವೃತ್ತಿ ಪರತೆ ನಮ್ಮ ತೊಡಗಿಸಿಕೊಳ್ಳುವಿಕೆ ನಮ್ಮ ಸಕ್ರಿಯತೆಗೆ ನಮಗೆ ನಾವೇ ಬೆಳೆಯಬೇಕು. ತುಳಿಯುವವರ ಮುಂದೆ, ನಮಗೆ ನಾವೇ ನಾಯಕರಾಗಬೇಕು.ಇದಕ್ಕೆ ಅನ್ವರ್ಥ ಹೆಸರೇ.. ಡಾಕ್ಟರ್ ಜಗದೀಶ ಹಾರುಗೊಪ್ಪ 

ಡಾ!! ಜಗದೀಶ ಹಾರುಗೊಪ್ಪ ಅವರು 49 ವಸಂತಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಬಹುಶಃ ಈ ಕುತೂಹಲ ಮಾಹಿತಿ ಕೊಡುವ ಸಣ್ಣ ಪ್ರಯತ್ನ.

ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಜ್ಞಾನದ ಬಿಡು ಉಳವಿ ಚನ್ನಬಸವಣ್ಣ ಅವರ ತಳಹದಿಯಲ್ಲಿ ವ್ಯಾಸಂಗ ಮುಗಿಸಿ ನಂತರ ನಗರಕ್ಕೆ ಮುಖಮಾಡಿದ ಡಾಕ್ಟರ್ ಸಾಹೇಬ್ರು,ಉನ್ನತ ಶಿಕ್ಷಣ ಪಡೆದು ಯಶಸ್ಸಿನ ಮೆಟ್ಟಿಲೇರಿ ಮುಂದೆ ಸಮಾಜ ಸೇವೆ ಮಾಡುವ ಮೂಲಕ ರಾಜಕೀಯ ರಂಗಕ್ಕೆ ಧುಮುಕಿದ್ದು ಈಗ ಇತಿಹಾಸ.ಕುತೂಹಲ ಇರುವುದು ಇಲ್ಲಿಂದಲೆ.

ನೋಡುನೋಡುತ್ತಿದಂತೆ ಜನರ ಮಧ್ಯೆ ಪ್ರವರ್ಧಮಾನಕ್ಕೆ ಬರುವ ಇವರು ಸಣ್ಣ ವಯಸ್ಸಲ್ಲೇ ಸಂಘಟನೆಯ ಕಡೆ ಧೃಡಹೆಜ್ಜೆ ಹಾಕುತ್ತಾರೆ. ಕುಟುಂಬದ ಕೃಪೆಯಿಂದ ಹಾಗೂ ಸ್ನೇಹಿತರ ಬಳುವಳಿಯಿಂದಲೊ ಏನೊ ಈ ಚದುರಂಗದಲ್ಲಿ ಬಹುಬೇಗ ಮನೆಮಾತಾಗುತ್ತಾರೆ.ಮನೆಯಲ್ಲಿ ಹುಟ್ಟಿನಿಂದಲೆ ಹಾಗೂ ಕಾಲೇಜು ದಿನಗಳಿಂದ ಜನಸೇವೆ ಚಟುವಟಿಕೆಗಳಿಂದ ಏನೋ ತಾವು ಸಹ ಏನಾದರೂ ಮಹತ್ತರವಾದ ಜವಾಬ್ದಾರಿಯಿಂದ ಜನರಿಗೆ ಕೈಲಾದಷ್ಟು ಸೇವೆ ಸಲ್ಲಿಸಿಬೇಕೆಂಬ ಹಂಬಲದಿಂದ ರಾಜಕೀಯ ರಣಾಂಗಕ್ಕೆ ಅಡಿಯಿಡುತ್ತಾರೆ ಡಾಕ್ಟರ್.

ತುಂಬು ಕುಟುಂಬದಿಂದ ಬಂದ್ರೂ , ಹುಡುಗಾಟದ ವಯಸ್ಸಾಗಿದ್ದರೂ ಜೊತೆಗಾರರೂ ಎಲ್ಲಾ ರಂಗದಲ್ಲಿದ್ದರೂ ಮೋಜು ಮಸ್ತಿಗೆ ಇಳಿಯದೆ ಎಲ್ಲೂ ಸಹ ಹುಂಬತನ ಮೈಗೂಡಿಸಿಕೊಳ್ಳದೆ ತಮ್ಮ ಯೌವನದ ದಿನಗಳನ್ನು ಅಕ್ಷರಶಃ ತ್ಯಾಗ ಮಾಡಿದರು ಈ ಯುವ ಚೇತನ.ಕಪ್ಪು ಚುಕ್ಕೆಯಾಗದೆ ಶುಭ್ರ ಬಿಳಿ ಹಾಳೆಯಂತೆ ಜನರೊಂದಿಗೆ ಬೆರೆತರು.ಬಹುಬೇಗ ಪೆಟ್ಟುಗಳನ್ನು ಕರಗತ ಮಾಡಿಕೊಂಡು ಚಾಣಾಕ್ಷತನ ಮೈಗೂಡಿಸಿಕೊಂಡು ಉತ್ತಮ ವಾಗ್ಮಿಯಾಗಿ ರೂಪಗೊಂಡರು.ಅತಿ ಸುಲಭವಾಗಿ ಕಾರ್ಯಕರ್ತರಿಗೆ ಸಿಗುವುದು ಇವರ ವರ್ಚಸ್ಸು ಹೆಚ್ಚಲು ಪ್ರಮುಖ ಅಂಶ.ವಯಸ್ಸಿಗೆ ಮೀರಿದ ವಿಚಾರಧಾರೆಗಳನ್ನು ಬಹುಬೇಗ ತಮ್ಮೊಳಗೆ ರೂಢಿಸಿಕೊಂಡ ಹಾರುಗೊಪ್ಪ ಸರ್ ನಿಜಕ್ಕೂ ರಾಜ್ಯ ರಾಜಕೀಯ ಮಾಹಿತಿಯ ಕಣಜ.ಅರುಳು ಉರಿದಂತೆ ಮಾತನಾಡಿ ಎದುರಾಳಿಗಳನ್ನು ಮಂತ್ರಮುಗ್ದಗೊಳಿಸುವುದು ಬೆರಗು ಮೂಡಿಸುತ್ತದೆ.

ಕಲಿತ ವಿದ್ಯೆಯ ಸಿದ್ದಿಯೋ ಏನೊ ಒಮ್ಮೆ ಒಬ್ಬ ಕಾರ್ಯಕರ್ತನ ಗುರುತಿಸಿದರೆ ಎಂದೂ ಮುಂದೆ ಮರೆಯಲಾರರು.ಒಂದು ವಿಚಾರ ಮನದಟ್ಟು ಮಾಡಿಕೊಂಡರೆ ನಿರ್ಗಳವಾಗಿ ಮಂಡಿಸುವ ತಾಕತ್ತು ಗಟ್ಟಿಯಾಗಿ ಮನದಲ್ಲಿ ಬೇರೂರಿದೆ.ಜಾತ್ಯಾತೀತ ಮನೋಭಾವ ಇವರಲ್ಲಿರುವ ಮತ್ತೊಂದು ದೊಡ್ಡಗುಣ.ಹಿರಿಯರು ಕಿರಿಯರು ಜಾತಿ ಮತ ಭೇದ ಭಾವ ಇಲ್ಲದೆ ಎಲ್ಲರನ್ನೂ ಕಾಣುವ ಹೃದಯ ವೈಶಾಲ್ಯತೆ,ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕಲೆ ಎಲ್ಲರಲ್ಲೂ ಕಾಣಲು ಅಸಾಧ್ಯ.

ತಮ್ಮ ರಾಜಕೀಯ ಪಾದಾರ್ಪಣೆ ಸಮಯದಲ್ಲೆ ಚುನಾವಣೆ ಎದರಿಸುವ ಪ್ರೌಢಿಮೆ ಮೈಗೂಡಿಸಿಕೊಂಡ ಇವರು ಗಡಿ ಜಿಲ್ಲೆಯಲ್ಲಿ ಸಂಘಟನೆ ಕಟ್ಟಿ ಯುವ ಸಾರಥಿಗಳನ್ನು ಪಕ್ಷದ ತೆಕ್ಕಗೆ ತಂದಂತಹವರು.ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ದಣಿವರೆಯದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾಜಪ(BJP) ಪಕ್ಷವನ್ನು ಅಭೂತಪೂರ್ವವಾಗಿ ದಡ ಮುಟ್ಟಿಸಿದ ಸಂಪೂರ್ಣ ಕೀರ್ತಿ ಡಾಕ್ಟರ್ ರವರಿಗೆ ಸಲ್ಲುತ್ತದೆ.

ಅತ್ಯುತ್ತಮ ಸಂಘಟನಾ ಸಾಮರ್ಥ್ಯ ಬೆಳಸಿಕೊಂಡು ಛಲದಿಂದ ಮುಂದುಡಿಯಿಡುತ್ತಿರುವ ಇವರಿಗೆ ಸಮಾಜದ ಕಾಳಜಿ ಬಗ್ಗೆ ಅಪಾರ ದೂರದೃಷ್ಟಿ ಇದೆ.ಇದನ್ನು ಚಿವುಟದೆ ಪೋಷಣೆ ಮಾಡಿ ಪಕ್ಷ ಕೈಹಿಡಿದು ಜೊತೆಗೆ ಕರೆದುಕೊಂಡು ಹೋದದ್ದೆ ಆದಲ್ಲಿ ಮುಂದೆ ಉಜ್ವಲ ಭವಿಷ್ಯಕ್ಕೆ ಬೆಳಕಿನ ಕಿಡಿಯಾಗಿ ದೀಪ ಬೆಳಗುವುದು ನಿಸ್ಸಂಶಯ.ಹೇಳುತ್ತಾ ಹೋದಷ್ಟು ಬಗೆಯುತ್ತಾ ಹೋದಷ್ಟು ಸಿಗುವ ತಿಳಿನೀರಿನ ಕಣಜ ಈ  ರಾಯಭಾರಿ. ಮಲಪ್ರಭೇಯ ಸುಪುತ್ರನಿಗೆ ಶುಭವಾಗಲಿ.

ಈ ಶುಭ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಮಸ್ತ ಸಮಾನ ವಯಸ್ಕರ, ಕಾರ್ಯಕರ್ತರ ಮಿತ್ರರ ಹಾಗೂ ಅಭಿಮಾನಿಗಳ ಪರವಾಗಿ ಶುಭಾಶಯಗಳ ತಿಳಿಸುತ್ತ ಭವಿಷ್ಯದ ಈ ಸಾರಥಿಗೆ ಹಾಗೂ ಇವರ ತುಂಬು ಕುಟುಂಬಕ್ಕೆ ಭಗವಂತ ಅಪಾರವಾದ ಸುಖ, ಐಶ್ವರ್ಯ, ಕೊಟ್ಟು ಕಾಪಾಡಲಿ ಎಂದು ಮನಪೂರಕವಾಗಿ ಬೇಡಿಕೊಳ್ಳುತ್ತೇನೆ.

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";