ಸುದ್ದಿ ಸದ್ದು ನ್ಯೂಸ್
ಲಕ್ನೋ: ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಝ್ವಿ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾನು ಮುಸ್ಲಿಂ ಆದರೂ ನನ್ನನ್ನು ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕು ಸಮಾಧಿ ಮಾಡಬಾರದು ಎಂದು ಹೇಳಿಕೊಂಡಿದ್ದಾರೆ.
ವಾಸಿಮ್ ರಿಝ್ವಿ ಕುರಾನ್‌ನಲ್ಲಿ ಇರುವ 26 ಸೂಕ್ತಗಳನ್ನು ತೆಗೆದುಹಾಕುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಮತ್ತು ತಾನು ಹೊಸ ಕುರ್‌ಆನ್ ಬರೆದಿದ್ದೇನೆ ಎಂದು ಹೇಳಿಕೊಂಡ ನಂತರ ಮುಸ್ಲಿಮ್ ಸಮುದಾಯದಿಂದ ಆಕ್ರೋಶಕ್ಕೆ ಗುರಿಯಾದ ಕಾರಣ ಮುಸ್ಲಿಮರು ನನ್ನ ದೇಹವನ್ನು ಸಮಾಧಿ ಮಾಡಲು ಸ್ಥಳಾವಕಾಶ ನೀಡಲಾರರು ಹಾಗಾಗಿ ನನ್ನ ದೇಹವನ್ನು ಹಿಂದೂ ಸ್ನೇಹಿತ, ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹಾನಂದ ಸರಸ್ವತಿಗೆ ಹಸ್ತಾಂತರಿಸಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಅವರು ಚಿತೆಗೆ ದೀಪ ಹಚ್ಚಬೇಕು ಎಂದು ಉಲ್ಲೇಖಿಸಿದ್ದಾರೆ.