ಬಿಎಸ್‌ವೈ ಪಂಚಮಸಾಲಿ ವಿರೋಧಿ ಎಂದು ಬಿಂಬಿಸಿದರು :ವಿಜಯೇಂದ್ರ

ಉಮೇಶ ಗೌರಿ (ಯರಡಾಲ)

ಜಮಖಂಡಿ(ಫೆ.14): ರಾ​ಜ್ಯ​ದಲ್ಲಿ ಎಲ್ಲ ಸಮು​ದಾ​ಯ​ಗ​ಳನ್ನು ಒಗ್ಗೂ​ಡಿ​ಸುವ ಕೆಲಸ ಮಾಡಿ​ದ​ವರು ಬಿ.ಎ​ಸ್‌.​ಯೂ​ಡಿ​ಯ​ರಪ್ಪ. ಆದರೂ ಈಗ್ಗೆ ಕೆಲ ತಿಂಗಳ ಹಿಂದೆ ಯಡಿ​ಯೂ​ರಪ್ಪ ಅವ​ರನ್ನು ಪಂಚ​ಮ​ಸಾಲಿ ವಿರೋಧಿ ಎಂದು ಬಿಂಬಿ​ಸುವ ಕೆಲಸ ಮಾಡ​ಲಾ​ಯಿ​ತು ಎಂದು ರಾಜ್ಯ ಬಿಜೆಪಿ ಉಪಾ​ಧ್ಯಕ್ಷ ವಿಜ​ಯೇಂದ್ರ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿ​ದ​ರು.

ಬಾಗ​ಲ​ಕೋಟೆ ಜಿಲ್ಲೆಯ ಜಮ​ಖಂಡಿ ತಾಲೂ​ಕಿನ ಆಲ​ಗೂರು ಗ್ರಾಮ​ದಲ್ಲಿ ಭಾನು​ವಾರ ನಡೆ​ದ ​ಪಂಚ​ಮ​ಸಾಲಿ ಸಮು​ದಾ​ಯದ 3ನೇ ಪೀಠದ ಪೀಠಾ​ರೋ​ಹ​ಣ ಸಮಾ​ರಂಭ​ದಲ್ಲಿ ಅವರು ಮಾತ​ನಾ​ಡಿ​ದ​ರು.

2011ರ ವೇಳೆಯೂ ಕೂಡ ಕೈಗಾರಿಕಾ ಸಚಿವರಾಗಿದ್ದ ಮುರುಗೇಶ ನಿರಾಣಿ ಅವರು, ಪಂಚಮಸಾಲಿ ಸಮಾಜಕ್ಕೆ 3ಬಿ ಮೀಸಲಾತಿ ಕೊಡುವಂತೆ ಒತ್ತಾಯಿಸಿದ್ದಕ್ಕೆ ನನ್ನ ತಂದೆ ಬಿಎಸ್‌ವೈ ಸರ್ವರಿಗೆ ಸಮಪಾಲು ಸಮಬಾಳು ಎಂಬಂತೆ, ಸಾಮಾಜಿಕ ನ್ಯಾಯದ ತತ್ವ ದಂತೆ ಪಂಚಮಸಾಲಿ ಸಮಾಜಕ್ಕೆ 3ಬಿ ಮೀಸಲಾತಿ ನೀಡಿದ್ದರು. ಪಂಚ​ಮ​ಸಾಲಿ ಸಮಾ​ಜ​ಕ್ಕೆ 3ಬಿ ಮೀಸ​ಲಾತಿ ಕೊಟ್ಟ​ವರು ಬಿಎ​ಸ್‌​ವೈ. ಇನ್ನು ಮುಂದೆಯೂ ಪಂಚಮಸಾಲಿ ಸಮಾಜದ ಬೇಡಿಕೆಯನ್ನು ಈಡೇರಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ತತ್ವಕ್ಕೆ ಅಥÜರ್‍ ತಂದುಕೊಟ್ಟದ್ದಲ್ಲದೆ, ಅದರ ಜೊತೆ-ಜೊತೆಗೆ ಹೆÜಗಲಿಗೆ ಹೆಗಲು ಕೊಟ್ಟು ದುಡಿದ ಸಮಾಜ ಯಾವುದಾದರು ಇದ್ದರೆ ಅದು ಪಂಚಮದಾಲಿ ಸಮಾಜ ಎಂದು ಹೇಳಿದರು.

ಪಂಚಮಸಾಲಿ ಸಮುದಾಯದ 3ನೇ ಪೀಠ ಅಸ್ತಿತ್ವಕ್ಕೆ:ಕಳೆದ ಕೆಲವು ತಿಂಗಳಿನಿಂದ ಸಂಚಲನ ಮೂಡಿಸಿದ್ದ ಪಂಚಮಸಾಲಿ 3ನೇ ಪೀಠದ ಪೀಠಾಧಿಪತಿಗಳ ಪೀಠಾರೋಹಣ ಕಾರ್ಯಕ್ರಮ ಭಾನುವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರ ಗ್ರಾಮದಲ್ಲಿ ಅದ್ಧೂರಿಯಾಗಿ ನೆರವೇರಿತು. ಹರಿಹರ ಪೀಠದ ವಚನಾನಂದ ಶ್ರೀ, ಮನಗೂಳಿ ಹಿರೇಮಠದ ಸಂಗನಬಸವ ಶ್ರೀ ಸೇರಿದಂತೆ ನೂರಾರು ಮಠಾಧೀಶರ ಸಾನ್ನಿಧ್ಯ ಮತ್ತು ಸಚಿವ ನಿರಾಣಿ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ನೂತನ ಪೀಠಾಧಿಪತಿಯಾಗಿ ಮಹಾದೇವ ಶಿವಾಚಾರ್ಯ ಶ್ರೀಗಳು ಪೀಠ ಅಲಂಕ​ರಿ​ಸಿ​ದ​ರು.

ಅಷ್ಟದುರ್ಗಾ ಪೂಜೆ, ಪಾರ್ವತಿ ಪೂಜೆ, ಏಕಾದಶ ಮಹಾರುದ್ರ ಪೂಜೆಯೊಂದಿಗೆ ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠದ ಪೀಠಾಧಿಪತಿಯಾಗಿ ಪೀಠಾರೋಹಣ ಮಾಡಿದ ಬಬಲೇಶ್ವರದ ಮಹಾದೇವ ಶಿವಾಚಾರ್ಯ ಶ್ರೀಗಳು ವಿವಿಧ ಪೂಜಾಕೈಂಕರ್ಯಗಳ ಜೊತೆಗೆ ಅಧಿಕಾರ ಸ್ವೀಕರಿಸಿದರು.

ರುದ್ರಾಕ್ಷಿ ಕಿರೀಟ ಧಾರಣೆ: ಬ್ರಾಹ್ಮಿ ಮುಹೂರ್ತದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ನೂತನ ಪೀಠ ಅಲಂಕ​ರಿ​ಸಿ​ದ ಶ್ರೀಗಳಿಗೆ ರುದ್ರಾಕ್ಷಿ ಕಿರೀಟ ಧಾರಣೆಯನ್ನು ಮಾಡಲಾಯಿತು. ಅಲಗೂರು ಗ್ರಾಮದಲ್ಲಿ ಒಕ್ಕೂಟದಿಂದ ಖರೀದಿಸಿದ ಒಂದೂವರೆ ಎಕರೆ ಜಮೀನಿನಲ್ಲಿ 3ನೇ ಪೀಠದ ಸ್ಥಾಪನೆಯಾಗಿದೆ. ನೂತನ ಪೀಠಾಧಿಪತಿಗಳ ಸಮ್ಮುಖದಲ್ಲಿ ಚಿಕ್ಕಪಡಸಲಗಿ ಬ್ಯಾರೇಜ್‌ ಬಳಿ ಇರುವ ಕೃಷ್ಣಾ ನದಿಗೆ ಕೃಷ್ಣಾರತಿ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು.

ಸಮಾಜದ ಅಭಿವೃದ್ಧಿಯೇ ಗುರಿ: ಮಹಾದೇವ ಶ್ರೀ ಪೀಠಾರೋಹಣ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ 3ನೇ ಪೀಠದ ಮಹಾದೇವ ಶಿವಾಚಾರ್ಯ ಶ್ರೀಗಳು, ಈಗ ನಮ್ಮ ಜವಾಬ್ದಾರಿ ಹೆಚ್ಚಿದೆ. ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳು ವಿರೋಧಿಸಿದರೆ ತೊಂದರೆ ಇಲ್ಲ . ಬರುವ ದಿನಗಳಲ್ಲಿ ಅವರು ಮತ್ತು ಶಾಸಕ ಯತ್ನಾಳ ಸಹ ನಮ್ಮೊಂದಿಗೆ ಬರಲಿದ್ದಾರೆ. ಎಲ್ಲರೂ ಸೇರಿ ಸಮಾಜದ ಅಭಿವೃದ್ಧಿ ಮಾಡುವುದು ನಮ್ಮ ಗುರಿಯಾಗಿದೆ. ಕೆಲವರು 3ನೇ ಪೀಠದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ನಾವು ಹಗುರವಾಗಿಯೇ ನೋಡುತ್ತೇವೆ ಎಂದು ಹೇಳಿದರು.

 

Share This Article
";